ಪವರ್ ಆಫ್ ಅಣ್ಣಾವ್ರು ಆನ್ ಫ್ರಂಟ್ ಪೇಜ್ ಆಫ್ ಪೇಪರ್

ರಾಜ್ಕುಮಾರ್

ನಾನು ೧೯೭೦ ರ ದಶಕದ ಕೊನೆಯಲ್ಲಿ ಪತ್ರಿಕೆಗಳನ್ನು,ನಿಯತಕಾಲಿಕೆಗಳನ್ನು ಮಾರುವ ಅಂಗಡಿಯೊಂದರಲ್ಲಿ ಸೇಲ್ಸ್ ಮನ್ ಆಗಿ ಕೆಲಸ ಮಾಡುತ್ತಿದ್ದೆ.ಆಗ ಯಾವುದಾದರೂ ನಿಯತಕಾಲಿಕದಲ್ಲಿ ಡಾ.ರಾಜಕುಮಾರ ಅವರ ಚಿತ್ರ ಮುಖಪುಟದಲ್ಲಿ ಬಂತೆಂದರೆ ಮಾರಾಟ ದುಪ್ಪಟ್ಟಾಗುತ್ತಿತ್ತು.

ಆಗಿನ ಪ್ರಸಿದ್ಧ ಚಲನಚಿತ್ರ ಮಾಸಿಕ ರೂಪತಾರಾ (ಉದಯವಾಣಿ ಗ್ರೂಪ್) ದಲ್ಲಿ ಮುಂದಿನ ತಿಂಗಳು ರಾಜಕುಮಾರರ ಮುಖಚಿತ್ರ ಎಂದೊಮ್ಮೆ ಆ ಪತ್ರಿಕೆಯ ಪ್ರಸರಣಾ ವಿಭಾಗದ ವ್ಯವಸ್ಥಾಪಕರು ಹೇಳಿದರು.ಕೂಡಲೇ ನಾನು ನಮಗೆ ಪ್ರತಿ ತಿಂಗಳಿಗಿಂತ ದುಪ್ಪಟ್ಟು ಪ್ರತಿ ಬೇಕೆಂದೆ.ಅಂತೆಯೇ ಕಳಿಸಿದರು,ಪೂರ್ತಿ ಖರ್ಚಾಯಿತು ಕೂಡ.ಎಲ್ಲಾ ನಿಯತಕಾಲಿಕಗಳೂ ಅದರ ಮುಖ ಪುಟದ ವಿನ್ಯಾಸ, ಚಿತ್ರಗಳಿಂದ ಮಾರುಕಟ್ಟೆಯ ಬೇಡಿಕೆಯನ್ನು ನಿರ್ಧರಿಸುತ್ತವೆ ಎಂದು ಆಗ ನಾನು ಅವರಿಗೆ ಹೇಳಿದ್ದನ್ನು ತಲೆಗೆ ಹಾಕಿಕೊಂಡ ಅವರು(ಪ್ರಸಾರಾಂಗ ಮುಖ್ಯಸ್ಥರಾಗಿದ್ದ ಕೃಷ್ಣ ನಾಯರಿ) ಮುಂದೆ ೧೯೮೦ ರಲ್ಲಿ ತರಂಗ ವಾರಪತ್ರಿಕೆ ಆರಂಭವಾದಾಗ ಮುಂಚೆಯೇ ಮುಖಪುಟವನ್ನು ನಮಗೆ ಕಳುಹಿಸಿ ನಮ್ಮ ಬೇಡಿಕೆಯನ್ನು ಕೇಳಿ ಅವರು ಎಷ್ಟು ಪ್ರತಿ ಮುದ್ರಿಸಬಹುದೆಂದು ನಿರ್ಧರಿಸುತ್ತಿದ್ದರು! ಅದೇ ರೀತಿ ಡಾ.ರಾಜಕುಮಾರ ಮುಖಚಿತ್ರ ಪ್ರಕಟವಾದ ತರಂಗ ಪತ್ರಿಕೆಯ ಮಾರಾಟ (೧೯೮೦ರ ದಶಕದಲ್ಲಿ)ಸರ್ವಕಾಲಿಕ ದಾಖಲೆಯಾಗಿ ಉಳಿದಿದೆ.

ಉಪ್ಪೂರು ಅನಂತರಾಜ ಮೇಲಾಂಟ

ಉಪ್ಪೂರು ಅನಂತರಾಜ ಮೇಲಾಂಟ

ನನ್ನ ಹೆಸರು ಉಪ್ಪೂರು ಅನಂತರಾಜ ಮೇಲಾಂಟ, ನಾನು ಗದಗದಿಂದ ಪ್ರಕಟವಾಗುವ ನವೋದಯ ದೈನಿಕದಲ್ಲಿ ಸಹಾಯಕ ಸಂಪಾದಕನಾಗಿ ನಿವೃತ್ತಿಹೊಂದಿ ಸಂಯುಕ್ತ ಕರ್ನಾಟಕದಲ್ಲಿ ಕೆಲವು ಸಮಯ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡಿ ಈಗ ಹವ್ಯಾಸಿ ಪತ್ರಕರ್ತನಾಗಿದ್ದೇನೆ.

Leave a Reply