ಪ್ರೀತಿನ ❤ಪ್ರೀತಿಯಿಂದ 💙
ಪ್ರೀತಿಗಾಗಿ 💜ಪ್ರೀತಿಗೋಸ್ಕರ 💚
ಪ್ರೀತಿಯ ಹರಿಕಾರ💛
ಪ್ರೀತಿಯನ್ನು ಕಲಿಸಿಕೊಟ್ಟ ಲವ್ ಗುರು 💘
ಕನಸುಗಳ ಸಾಹುಕಾರ 💖
ಪ್ರೇಮಲೋಕದಿಂದ ಪ್ರೇಮದ ಸಂದೇಶ ಕೊಟ್ಟು, ಅಂಜದ ಗಂಡಾಗಿ,ಅಣ್ಣನ ಪ್ರೀತಿಯನ್ನು ಮೋಸ ಮಾಡಿದ ಖಳನಯಾಕಿಯ ಸೇಡನ್ನು ತೀರಿಸಿಕೊಂಡ ಯುಗಪುರುಷ, ನಾನು ನನ್ನ ಹೆಂಡ್ತೀರ ಕನ್ನಡ ಗಾಯಕರಾಗಿ ಗಡಿಬಿಡಿ ಗಂಡನಾಗಿ, ಹೆಣ್ಮಕ್ಕಳ ರಸಿಕನಾಗಿ, ಪುಟ್ನಂಜದ ರೈತನಾಗಿ, ಶಾಂತಿ ಕ್ರಾಂತಿಯ ಪೋಲೀಸಾಗಿ, ತಾಯಿ ಪ್ರೀತಿ ದೊಡ್ಡದಾಗಿ ಎಂದು ತೋರಿಸಿದ ಅಣ್ಣಯ್ಯ, ದಡ್ಡನಾಗಿ ಎಲ್ಲರೂ ಮೆಚ್ಚುವ ರಾಮಾಚಾರಿಯಾಗಿ, ಯಾರೇ ನೀನು ಚೆಲುವೆ ಎಂದು ಏಕಾಂಗಿಯಾಗಿರುವುದು ಹೇಗೆಂದು ತೋರಿಸಿದ ಪ್ರೀತ್ಸೋದ್ ತಪ್ಪಾ ಅಂತ ಕೇಳಿ ಪ್ರೀತ್ಸು ತಪ್ಪೇನಿಲ್ಲ ಓ ನನ್ನ ನಲ್ಲೆ ಅಂತ ಜನರಿಗೆ ತಿಳಿಸಿದ ಮಹಾನ್ ಕಲಾವಿದನಾಗಿ ,ಪ್ರೀತಿಯ ಕರುನಾಡ ಮಲ್ಲನಾಗಿ, ಜೀವನದಲ್ಲಿ ಅಂದುಕೊಂಡಿದ್ದನ್ನು ಗೆಲ್ಲುವ ಹಟವಾದಿಯಾಗಿ.
ಸಂಸಾರದ ನಾಂದಿ ಮಾಂಗಲ್ಯಂ ತಂತು ನಾನೇನ ಎಂದು ಸಾರಿ ಇನ್ನೊಬ್ಬರ ಒಳಿತಿಗಾಗಿ ಕನಸುಗಾರನಾಗಿ ಮಾಣಿಕ್ಯ ಚಿತ್ರದ ನೆಚ್ಚಿನ ತಂದೆಯಾಗಿ ಹೆಬ್ಬುಲಿ ಚಿತ್ರದ ನೆಚ್ಚಿನ ಅಣ್ಣನಾಗಿ ಅಭಿಮಾನಿಗಳಿಗೆ ವಿವಿಧ ಪಾತ್ರಗಳ ಮೂಲಕ ಪ್ರೀತಿಯನ್ನು ಹಂಚುತ್ತಿರುವ ಮತ್ತು ದಿಗ್ಗಜ ನಿಮಾ೯ಪಕರು “ವೀರಾಸ್ವಾಮಿ ” ರವರ ಸುಪುತ್ರ ಈಶ್ವರಿ ಸಂಸ್ಥೆಯ ಮುಖ್ಯಸ್ಥರಾಗಿ ನಡೆಸಿಕೊಂಡು ಹೋಗುತ್ತಿರುವ ಪ್ರೇಮಾಭಿಮಾನಿಗಳ ಕನಸುಗಳ ಒಡೆಯ, ಕನಸುಗಾರ,ಸ್ಯಾಂಡಲ್ವುಡ್ ಶೋಮ್ಯಾನ್ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ರವರಿಗೆ ಜನುಮ ದಿನದ ಶುಭಾಶಯಗಳು 🌹💜❤💐
ಇಲ್ಲಿ ಅಣ್ಣಾವ್ರ ನಂಟು ಈಶ್ವರಿ ಸಂಸ್ಥೆಯ ಬಗ್ಗೆ ಒಂದೆರಡು ವಿಚಾರಗಳು ನಿಮಗೆ ತಿಳಿಸೋಣ ಅಂತ ಈಶ್ವರಿ ಸಂಸ್ಥೆಗೂ ಮತ್ತು ಅಣ್ಣಾವ್ರಿಗೂ ಒಳ್ಳೆಯ ಬಾಂಧವ್ಯ ಇದೆ, ಆಗಿನ ಸೂಪರ್ ಹಿಟ್ ಚಿತ್ರ “ಕುಲಗೌರವ ಮತ್ತು ನಾ ನಿನ್ನ ಮರೆಯಲಾರೆ ” ಚಿತ್ರ ಮರೆಯಲಾಗದು, ಈ ಚಿತ್ರಗಳು ಈಶ್ವರಿ ಸಂಸ್ಥೆಯ ಕಾಣಿಕೆಗಳು, ಅಣ್ಣಾವ್ರು ಅವರ ಕುಟುಂಬದ ಮೇಲೆ ಹೆಚ್ಚಿನ ಗೌರವ ನೀಡುತ್ತಿದ್ದರು, ಮುಂದೆ ಅಣ್ಣಾವ್ರ ಕುಟುಂಬದ ಯಾವುದೇ ಚಿತ್ರಗಳಿಗೆ ವಿ. ರವಿಚಂದ್ರನ್ ರವರು ಮೊದಲ ಕ್ಲಾಪ್ ಮಾಡುತ್ತಿದ್ದರು ಈಗಲೂ ಸಹ ಹಾಗೆ ನಡೆದುಕೊಂಡು ಬಂದಿದ್ದಾರೆ.
ಶಿವರಾಜ್ ಕುಮಾರ್ ರವರು ಮತ್ತು ರವಿಚಂದ್ರನ್ ರವರು ಒಳ್ಳೆಯ ಸ್ನೇಹವನ್ನು ಮೊದಲಿನಿಂದಲೂ ಕಾಪಾಡಿಕೊಂಡಿದ್ದಾರೆ, ಇಬ್ಬರೂ ಜೊತೆಗೂಡಿ “ಕೋದಂಡರಾಮ” ಚಿತ್ರದಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಶಿವಣ್ಣ ಒಂದು ಸಂದಶ೯ನದಲ್ಲಿ ಹೇಳ್ತಾರೆ “ನನ್ನಾಸೆಯ ಹೂವೆ ” ಗೀತೆ ಚಿತ್ರೀಕರಣ ಇಬ್ಬರೂ ಕದ್ದು ನೋಡಿದ ಆ ವಯಸ್ಸಿನ ಅನುಭವ ಹಂಚಿಕೊಂಡಿರೋದು.
![](https://chitrodyama.com/wp-content/uploads/2020/05/ravi2-1024x768.jpg)
ಚಿತ್ರ ನಿದೇ೯ಶಕರಲ್ಲದೆ ನಿಮಾ೯ಪಕರಾಗಿ, ಸಂಗೀತ ನಿರ್ದೇಶಕರಾಗಿ, ಟಿವಿ ರಿಯಾಲಿಟಿ ಶೋನ ನಿರೂಪಕರಾಗಿ, ಸಾಹಿತ್ಯ ರಚನೆಕಾರರಾಗಿ , ಸಂಕಲನಕಾರರಾಗಿ ಹಲವು ರೀತಿಯಲ್ಲಿ ಚಿತ್ರರಂಗದಲ್ಲಿ ತೊಡಗಿಸಿರುವ ಪ್ರೀತಿಯ ರವಿಮಾಮ ರವರಿಗೆ ಒಳ್ಳೆಯದಾಗಲಿ ಮುಂಬರುವ ರಾಜೇಂದ್ರ ಪೊನ್ನಪ್ಪ, ಮಂಜಿನ ಹನಿ, ರವಿ ಬೋಪಣ್ಣ ಚಿತ್ರಗಳು ಯಶಸ್ವಿಯಾಗಲಿ ಎಂದು ಆಶಿಸೋಣ 🙏
ಇವರ ಚಿತ್ರರಂಗದ ಸಾಧನೆಯಲ್ಲಿ ಪ್ರಶ್ನೆಗಳು….
💐ಶಾಂತಿ ಕ್ರಾಂತಿ ಚಿತ್ರದ ವಿಶೇಷವಾದ ಪ್ರಶಸ್ತಿ ಕನಾ೯ಟಕ ಸಕಾ೯ರದ ವತಿಯಿಂದ.
🌺ಅತ್ಯುತ್ತಮ ನಟ ಪ್ರಶಸ್ತಿ ಏಕಾಂಗಿ ಚಿತ್ರಕ್ಕಾಗಿ ಕನಾ೯ಟಕ ಸಕಾ೯ರದ ವತಿಯಿಂದ .
🌹ಅತ್ಯುತ್ತಮ ನಿದೇ೯ಶಕ ಏಕಾಂಗಿ ಚಿತ್ರಕ್ಕಾಗಿ.
🌸ಅತ್ಯುತ್ತಮ ಸಂಗೀತ ನಿರ್ದೇಶಕ ಏಕಾಂಗಿ ಚಿತ್ರಕ್ಕಾಗಿ.
🦜ಜೀವಮಾನ ಸಾಧನೆಗಾಗಿ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ.
🦆ರಾಜ್ಯೋತ್ಸವ ಪ್ರಶಸ್ತಿ.
🐧ಎನ್ ಟಿ ಆರ್ ರಾಷ್ಟ್ರೀಯ ಪ್ರಶಸ್ತಿ.
🐅ಗೌರವ ಡಾಕ್ಟರೇಟ್ ಪದವಿ ಸಿ. ಎಂ, ಆರ್ ಯೂನಿವರ್ಸಿಟಿ ಕಡೆಯಿಂದ.
ಚಿತ್ರಗಳ ಮೂಲ ಆಕಷ೯ಣೆ ಹೊಸತನಕ್ಕೆ ಮೆರಗು ನೀಡುವುದರಲ್ಲಿ ಎತ್ತಿದ ಕೈ ಹಾಡಾಗಲಿ, ದೃಶ್ಯವಾಗಲಿ, ಫೈಟಿಂಗ್ ಸನ್ನಿವೇಶವಾಗಲಿ ಹೆಚ್ಚು ಕಾಳಜಿ ವಹಿಸುವುದು ಇವರ ಗುಣ, ಇವರು ಪ್ರೀತಿಸೋದು ಸಿನಿಮಾನ, ಸಿನಿಮಾನೆ ಇವರಿಗೆ ಪ್ರಪಂಚ.
ಇವರು ಮಡದಿ ಸುಮತಿ ಮನೆಯ ಎಲ್ಲಾ ಜವಾಬ್ದಾರಿ ನೋಡಿಕೊಂಡರೆ ಇಬ್ಬರು ಮಕ್ಕಳು ಮನೋರಂಜನ್ ಸಾಹೇಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದವರು ಮತ್ತು ವಿಕ್ರಮ್ ರವರು ಚಿತ್ರರಂಗಕ್ಕೆ ಪ್ರವೇಶಿಸಲು ಎಲ್ಲಾ ತಯಾರಿ ಮಾಡಿಕೊಂಡು ತುದಿಗಾಲಲ್ಲಿರುವರು. ಮತ್ತೊಬ್ಬರು ಮಗಳು ಮದುವೆಯಾಗಿ ಸುಖ ಸಂಸಾರ ಸಾಗಿಸುತ್ತಿದ್ದಾರೆ, ರವಿಮಾಮ ರವರ ತಮ್ಮ ಬಾಲಾಜಿ ಕೂಡ ನಟರಾಗಿ “ತುಂಟ, ಅಹಂ ಪ್ರೇಮಾಸ್ಮಿ” ಚಿತ್ರದಲ್ಲಿ ನಟಿಸಿದ್ದಾರೆ.
ಇವರಿಂದ ನಾವು ಕಲಿಯಬೇಕಾದ ಗುಣ ಏನೇ ಆಗಲಿ ಎಷ್ಟೇ ಕಷ್ಟ ಬರಲಿ ಯಾವುದನ್ನು ಚಿಂತಿಸದೆ ಸದಾ ನಾವು ನಗು ನಗುತಾ ಬಾಳಬೇಕು ನಗುವಿನಿಂದಲೇ ಎಲ್ಲರಿಗೂ ಉತ್ತರ ಕೊಡಬೇಕು ಅನ್ನೋದು ❣️
ಇವರ ಹಲವಾರು ಗೀತೆಗಳಲ್ಲಿ ಒಂದು ಸಾಲು ನನಗೆ ಇಷ್ಟವಾದದು “ಬಿ ಅಲೋನ್ ಟು ಬಿ ಹ್ಯಾಪಿ ಓ ಬಿ ಹ್ಯಾಪಿ ಟು ಬಿ ಅಲೋನ್ “