ಯೋಗರಾಜ್ಭಟ್ ನಿರ್ದೇಶನದ, ಗೋಳ್ಡನ್ಸ್ಟರ್ಗಣೇಶ್ ,ದಿಗಂತ್,ರಿಶಿ ಮತ್ತು ಕುಮಾರ್ ಅಭಿನಯದ ಬಹು ನಿರೀಕ್ಷಿತ “ಗಾಳಿಪಟ 2” ಚಿತ್ರದ ಹಾಡುಗಳು ಸೇರಿದಂತೆ ಕೆಲವು ಸನ್ನಿವೇಶಗಳನ್ನ ಚಿತ್ರತಂಡವು ಫಾರಿನ್ ನಲ್ಲಿ ಶೂಟ್ಮಾಡವ ತಯಾರಿ ಮಾಡಿಕೊಂಡಿತ್ತಂತೆ.. ಸಧ್ಯದ ಬೆಳವಣಿಗೆಯನ್ನು ಪರಿಗಣಿಸಿ ಫಾರಿನ್ನಿಗೆ ಹೋಗುವ ಯೋಚನೆಯನ್ನ ಕೈ ಬಿಟ್ಟಿದೆ, ಬದಲಾಗಿ ಇಲ್ಲೇ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ-ಚಿಕ್ಕಮಗಳೂರಲ್ಲಿ ಚಿತ್ರೀಕರಿಸಲು ಸಜ್ಜಾಗಿದೆ..
ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮತ್ತು ಡಬ್ಬಿಂಗ್ ಎರಡು ಮುಗಿಯುವ ಹಂತದಲ್ಲಿದೆ. ಚಿತ್ರಕ್ಕೆ ಮಹೇಶ್ ದಾನನ್ನವರ್ನಿರ್ಮಾಣವಿದ್ದು, ಅರ್ಜುನಜನ್ಯಾ ಸಂಗೀತ ಒದಗಿಸಿದ್ದಾರೆ. ಒಂದೆಡೆ ಹೆರೋಗಳಿಗೆ ಜೋಡಿಯಾಗಿ ಶರ್ಮಿಳಾಮಾಂಡ್ರೆ, ಸೋನಲ್ಮೊಂತೆರಿಯೋ ಜೊತೆಯಾದ್ರೆ ಇತ್ತ ನಗುವಿನ ಪಟಾಕಿ ಸಿಡಿಸಲು ಅನಂತ್ನಾಗ್, ರಂಗಾಯಣರಘು, ಬುಲ್ಲೆಟ್ಪ್ರಕಾಶ್ ಜೊತೆಗೆ ಅಬ್ಬರ ಹೆಚ್ಚಿಸಲು ಶರಣ್ ಕೂಡ ಸೇರಿದ್ದಾರೆ. ಅತಿ ಶೀಘ್ರದಲ್ಲೇ ಉಳಿದ ಭಾಗದ ಚಿತ್ರೀಕರಣ ಮುಗಿಸುವುದಾಗಿ ನಿರ್ದೇಶಕ ಯೋಗರಾಜ್ಭಟ್ ಹೇಳಿದ್ದಾರೆ.