ಕರ್ನಾಟಕ ಸರ್ಕಾರ ಸಿನಿಮಾ ಶೂಟಿಂಗ್ ಮಾಡಲು ಸಮ್ಮತಿ ನೀಡಿದ ಕಾರಣ, ತಯಾರಿ ಹಂತದಲ್ಲಿರುವ ಹಲವು ಸಿನಿಮಾಗಳುಅರ್ಧದಲ್ಲೇ ನಿಂತಿವೆ.. ಆ ಕಾರಣಕ್ಕಾಗಿಬಿಗ್ ಬಜೆಟ್ ಸಿನಿಮಾಗಳು ಪರ್ಯಾಯ ಮಾರ್ಗ ಹುಡುಕಿಕೊಂಡಿದೆ..
ಕಿಚ್ಚಸುದೀಪ್ ಅಭಿನಯದ, ಅನೂಪ್ ಭಂಡಾರಿ ನಿರ್ದೇಶಿಸುತ್ತಿರುವ ” ಫ್ಯಾಂಟಮ್” ಸಿನಿಮಾ ಚಿತ್ರೀಕರಣ ಮುಂದುವರಿಸಲು,ಸಿನಿ ತಂಡ ಈಗ ಹೈದ್ರಾಬಾದ್ ಗೆ ತೆರಳಲಿದೆ. ಒಟ್ಟು 40 ದಿನಿಗಳ ಕಾಲ ಬಿರುಸಿನಶೂಟಿಂಗ್ ಮಾಡಿಕೊಂಡು ಬರುವು ಯೋಜನೆಗೆಸಜ್ಜಾಗಿದೆ.ಅದಕ್ಕೆ ಬೇಕಾದ ಎಲ್ಲಾ ತಯಾರಿಯ ಚರ್ಚೆ ಕಿಚ್ಚಸುದೀಪ್ ಅವರ ಮನೆಯಲ್ಲೇ ನಡಿಯುತ್ತಿದೆ.
ಚರ್ಚೆಯಲ್ಲಿ ನಿರ್ದೇಶಕ ಅನೂಪ ಭಂಡಾರಿ ಮತ್ತು ನಿರ್ಮಾಪಕ ಜಾಕ್ ಮಂಜು ಅವರು ಇದ್ದು ಚರ್ಚೆಯ ವೇಳೆ ಎಲ್ಲರಿಗೂ ಊಟ ಮತ್ತು ಸ್ನ್ಯಾಕ್ಸನಅಡಿಗೆಯನ್ನ ಖುದ್ದು ಸುದೀಪ್ ಅವರೇ ಮಾಡಿದ್ದಾರೆ.. ಎಷ್ಟೇ ಆಗಲಿ ಕೋಕ್ಕಿಂಗ್ ಅಂದ್ರೆ ಕಿಚ್ಚನಿಗೆ ಬಲು ಪ್ರೀತಿ.ಹೈದರಾಬಾದ್ ನಲ್ಲಿ ಶೂಟಿಂಗ್ ಮಾಡಲು ಬೇಕಾದ ಅನುಮತಿಯನ್ನಪಡೆಯುವುದರಲ್ಲಿಕಿಚ್ಚಸಫಲರಾಗಿದ್ದಾರೆ.
ಅಭಿನಯ ಚಕ್ರವರ್ತಿ ಈ ಬಾರಿ “ವಿಕ್ರಾಂತ ರೋಣ” ಆಗಿ ಹೊಸ ಗೆಟಪ್ ನಲ್ಲಿ ಕಾಣಲಿದ್ದಾರೆ.