ಬಾಲಿವುಡ್ ಚಿತ್ರರಂಗದ ಕಿಲಾಡಿ ನಟ ಅಕ್ಷಯ್ ಕುಮಾರ್

ಬಾಲಿವುಡ್ ಚಿತ್ರರಂಗದ ಕಿಲಾಡಿ ನಟ ಅಕ್ಷಯ್ ಕುಮಾರ್

( ಮುಂದುವರೆಯಿತು )

೪) ಆ ವರ್ಷ ಬಿಡುಗಡೆಯಾದ ಇವರ ಎಲ್ಲ ಚಿತ್ರಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಪ್ರದರ್ಶನವನ್ನು ಕಂಡಿವೆ.
    ೨೦೦೮ ರಲ್ಲಿ ೧೧ ವರ್ಷಗಳ ನಂತರ ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ತಶಾನ್ ಚಿತ್ರದಲ್ಲಿ ನಟಿಸಿದರು. ಈ ಚಿತ್ರವು ಸಾರ್ವಜನಿಕ ವಲಯದಲ್ಲಿ ಬಹಳ ನಿರೀಕ್ಷೆಯನ್ನು ಉಂಟು ಮಾಡಿತ್ತಾದರೂ ತೆರೆ ಕಂಡ ನಂತರ ವಿಮರ್ಶೆಯಲ್ಲಿ ಮತ್ತು ಗಳಿಕೆಯಲ್ಲಿಯೂ ಹೀನಾಯ ಸೋಲನ್ನು ಕಂಡಿತ್ತು. ಆದರೆ ಇದೇ ವರ್ಷ ತೆರೆ ಕಂಡ ಸಿಂಗ್ ಈಸ್ ಕಿಂಗ್ ಚಿತ್ರವು ಯಶಸ್ವಿ ಪ್ರದರ್ಶನವನ್ನು ಕಂಡಿತ್ತಲ್ಲದೆ ಬಾಕ್ಸ್ ಆಫೀಸ್ ನಲ್ಲಿ ಹಣದ ಹೊಳೆಯನ್ನು ಹರಿಸಿತ್ತು. ಮತ್ತು ಈ ಹಿಂದೆ ವಿಶ್ವಾದಾದ್ಯಂತ ಮೊದಲ ವಾರದಲ್ಲಿ ಅತಿ ಹೆಚ್ಚು ಗಳಿಕೆಯಲ್ಲಿ ಓಂ ಶಾಂತಿ ಓಂ ಚಿತ್ರವು ನಿರ್ಮಿಸಿದ ದಾಖಲೆಯನ್ನು ಮುರಿಯಿತು.


೨೦೦೯ ರಲ್ಲಿ ವಾರ್ನರ್ ಬಾಸ್ ಮತ್ತು ರೋಹನ್ ಸಿಪ್ಪಿ ನಿರ್ಮಿಸಿದ ಚಾಂದಿನಿ ಚೌಕ್ ಟು ಚೀನಾ ಎಂಬ ಚಿತ್ರದಲ್ಲಿ ನಟಿಸಿದರು. ಆದರೆ ಈ ಚಿತ್ರವು ವಿಮರ್ಶೆಯಲ್ಲಿ ಮತ್ತು ಗಳಿಕೆಯಲ್ಲಿ ಗೆಲುವನ್ನು ಕಾಣಲು ಸಾಧ್ಯವಾಗಲಿಲ್ಲ. ನಂತರ ನಟಿಸಿದ ಹೌಸ್ ಫುಲ್ ಸರಣಿ ಚಿತ್ರಗಳ ಗೆಲುವು ಅವಿಸ್ಮರಣೀಯವಾಗಿದ್ದವು. ಮಿಲಿಟರಿ ಪಾತ್ರದಲ್ಲಿ ಕಾಣಿಸಿಕೊಂಡ ಹಾಲಿಡೇ (ಮೂಲ ತಮಿಳು ಚಿತ್ರ ತುಪಾಕಿ) ರಿಮೇಕ್ ಚಿತ್ರದಲ್ಲಿ ಇವರು ನಿರ್ವಹಿಸಿದ ಸ್ಟಂಟ್ ನೋಡಿ ಮಾಸ್ ಅಭಿಮಾನಿಗಳಿಗೆ ಆದ ರೋಮಾಂಚನ ಅಷ್ಟಿಷ್ಟಲ್ಲ. ಅಂದ ಹಾಗೆ ಬರೆಯುತ್ತ ಒಂದು ವಿಷಯವನ್ನು ಹೇಳುವುದನ್ನು ಮರೆತಿದ್ದೆ.  ವಿಷ್ಣು ವಿಜಯ್ ಎಂಬ ಏಕೈಕ ಕನ್ನಡ ಚಿತ್ರದಲ್ಲಿ ನಟಿಸಿರುವ ಇವರು ಈ ಚಿತ್ರದಲ್ಲಿ ನಟಿಸಿದ ನಮ್ಮ ಕನ್ನಡ ಚಿತ್ರರಂಗದ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ನಟನೆಯನ್ನು ನೋಡಿ ಅಚ್ಚರಿ ಪಟ್ಪಿದ್ದರಲ್ಲದೆ ಪ್ರಶಂಸೆಯನ್ನು ಮಾಡಿದ್ದರು. ಈ ಮಾತನ್ನು ಸ್ವತಃ ಇವರೇ ಒಂದು ಸಂದರ್ಶನದಲ್ಲಿ ಹೇಳಿದ್ದರು. ತಮ್ಮ ೨೫ ಕ್ಕೂ ಅಧಿಕ ವರ್ಷದ ಬಣ್ಣದ ಬದುಕಿನಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು ತಮ್ಮ ಖಾಸಗಿ ಜೀವನದಲ್ಲಿ ಮಾಡಿದ ದಾನಕ್ಕೆ ಲೆಕ್ಕವಿಲ್ಲ. ಸಮಾಜ ಮುಖಿ ಕೆಲಸಗಳ ನಿರ್ವಹಣೆಯಿಂದ ಅಸಂಖ್ಯ ಅಭಿಮಾನಿಗಳ ಮನಸ್ಸನ್ನು ಗೆದ್ದಿರುವ ಇವರು ಬಾಲಿವುಡ್ ಚಿತ್ರರಂಗದ ಕಲಿಯುಗದ ಕರ್ಣ ಕೂಡ ಆಗಿದ್ದಾರೆ.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply