( ಮುಂದುವರೆದ ಭಾಗ )
ಹಮ್ ಹೇ ಕಮಾಲ್ ಕೆ ಚಿತ್ರದಲ್ಲಿ ನಿರ್ವಹಿಸಿದ ಹಾಸ್ಯ ಭರಿತ ಕುರುಡನ ಪಾತ್ರವನ್ನು ಎಷ್ಟು ಸಾರಿ ನೋಡಿದರೂ ಕಡಿಮೆಯೇ. ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಎಂದು ಪ್ರಸಿದ್ಧಿಯಾಗಿರುವ ನಟ ಅಮೀರ್ ಖಾನ್ ಅಭಿನಯದ ಸೂಪರ್ ಹಿಟ್ ಚಿತ್ರ ದಿಲ್. ಈ ಚಿತ್ರದಲ್ಲಿ ಪೋಷಕನ ಪಾತ್ರದ ಜೊತೆಗೆ ಹಾಸ್ಯ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಜನಮ್, ಸೌದಾಗರ್,ಛಾಹತ್, ಸಲಾಕೇಂ
ಸಿಂಗಂ ರಿಟರ್ನ್ಸ್,ವೆನ್ಸ್ ಡೇ, ರೂಪ್ ಕಿ ರಾಣಿ ಚೋರೋಂಕಿ ರಾಜ ಮತ್ತು ರೆಹನಾ ಹೇ ತೇರೇ ದಿಲ್ ಮೇ ಇತ್ಯಾದಿ ಅನೇಕ ಚಿತ್ರಗಳಲ್ಲಿ ಗಂಭೀರ ಮತ್ತು ಖಳನ ಪಾತ್ರವನ್ನು ನಿರ್ವಹಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಯೋಪಿಕ್ ಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ತಮ್ಮ ೩೮ ವರ್ಷಗಳ ಹಿಂದಿನ ಚಿತ್ರ ರಂಗದ ಜೀವನದಲ್ಲಿ ಸುಮಾರು ೪೫೦ ಚಿತ್ರಗಳಲ್ಲಿ ನಟಿಸಿರುವ ಇವರು ಹಿಂದಿ ಚಿತ್ರ ರಂಗ ಕಂಡ ಬಹುಮುಖ ಪ್ರತಿಭೆ ಹೊಂದಿರುವ ಪ್ರತಿಭಾನ್ವಿತ ಹಿರಿಯ ನಟರು ಎಂದು ಹೇಳಿದರೆ ತಪ್ಪಾಗಲಾರದು.
ಮತ್ತು ಕಿರುತೆರೆಯ ಕಾರ್ಯಕ್ರಮಗಳಾದ ಸೇ, ನಾ, ಸಮ್ ಥಿಂಗ್ ಟು ಅನುಪಮ್ ಅಂಕಲ್, ಸವಾಲ್ ದಸ್ ಕರೋಡ್ ಕಾ ಮತ್ತು ಇತ್ತೀಚಿನ ಲೀಡ್ ಇಂಡಿಯಾದ ನಿರೂಪಕರಾಗಿ ಕೂಡ ಕಾಣಿಸಿಕೊಂಡಿದ್ದಾರೆ. ತಮ್ಮ ಹಿಂದಿ ಚಿತ್ರಗಳಲ್ಲಿ ಹಲವು ಬಗೆಯ ಪಾತ್ರಗಳನ್ನು ನಿರ್ವಹಿಸಿ ಅಪಾರ ಪ್ರಮಾಣದ ಜನಪ್ರಿಯತೆಯನ್ನು ಪಡೆದ ಇವರಿಗೆ ಉತ್ತಮ ನಟನೆಗಾಗಿ ಫಿಲಂಫೇರ್ ಹಾಸ್ಯ ನಟ, ಫಿಲಂ ಫೇರ್ ಪೋಷಕ ನಟ ಪ್ರಶಸ್ತಿಗಳು ಸೇರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಸ್ಟಾರ್ ಸ್ಕ್ರೀನ್ ಪ್ರಶಸ್ತಿ ಮತ್ತು ಬಾಲಿವುಡ್ ಮೂವಿ ಪ್ರಶಸ್ತಿಯನ್ನು ಪಡೆದಿದ್ದಾರೆ.
ಪ್ರಸ್ತುತ ತಮ್ಮ ೬೭ ನೇ ವರ್ಷದ ಇಳಿ ವಯಸ್ಸಿನಲ್ಲಿ ಇವರು ಇಂದಿಗೂ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.