ಬಿಗ್ ಬಾಸ್
ಪ್ರಸ್ತುತ ಕರ್ನಾಟಕದಲ್ಲಿ , ಆಂದ್ರ, ತಮಿಳುನಾಡು, ಮಹಾರಾಷ್ಟ್ರ ಅಷ್ಟೇ ಏಕೆ ಈಡೀ ದೇಶದಲ್ಲೇ ಪ್ರಖ್ಯಾತಿ ಪಡೆದಿರುವ ರಿಯಾಲಿಟಿ ಶೋ..
ಬಿಗ್ ಬಾಸ್ ಅಂದ್ರೆ ಸುದೀಪ್ ನೆನಪಾಗ್ತಾರೆ ಮತ್ತು ಚಾನೆಲ್ ನೆನಪಾಗುತ್ತೆ ಇದುವರೆಗೂ ನಡೆದ ಏಳು ಶೋಗಳ ವಿನ್ನರ್ ಯಾರ್ಯಾರು ಎಂದು ಲೆಕ್ಕ ಹಾಕಿದರೆ ಮಾತ್ರ ಹೆಸರುಗಳು ನೆನಪಾಗಬಹುದು.ಬಿಗ್ ಬಾಸ್ ಕಾರ್ಯಕ್ರಮಕ್ಕೆ ಒಂದು ದೊಡ್ಡ ಅಭಿಮಾನಿ ಬಳಗವೇ ಇದೆ.ಪ್ರತಿ ಸೀಜನ್ ಶುರುವಾದಾಗಲೂ ಅದೇ ಕುತೂಹಲದಿಂದ ಜನ ನೋಡಲು ಪ್ರಾರಂಭಿಸುತ್ತಾರೆ. ಕಾರ್ಯಕ್ರಮದುದ್ದಕ್ಕೂ ಸ್ಪರ್ಧಿಗಳನ್ನು ಬೆಂಬಲಿಸುತ್ತಾ ಟೀಕಿಸುತ್ತಾ ಭಾವನಾತ್ಮಕವಾಗಿ ಸ್ಪಂದಿಸುವ ಜನ ಕಾರ್ಯಕ್ರಮ ಮುಗಿದ ಬಳಿಕ ಮತ್ತದೇ ಯಾಂತ್ರಿಕ ಜೀವನಕ್ಕೆ ಮರಳುತ್ತಾರೆ.ಇಷ್ಟೆಲ್ಲಾ ಪೀಠಿಕೆ ಯಾಕೀಗ ಅಂತೀರಾ..?
ನಮಗೆಲ್ಲಾ ತಿಳಿದಹಾಗೆ ನಮ್ಮ ನೆಚ್ಚಿನ ನಟ ಕಿಚ್ಚ ಸುದೀಪ್ ಸಾರಥ್ಯದಲ್ಲಿ ನಡೆಯುವ ಬಿಗ್ ಬಾಸ್ ಕಾರ್ಯಕ್ರಮ ಈಗಾಗಲೇ ಪ್ರಾರಂಭವಾಗಿ ಎರಡು ವಾರವಾಗ್ತಾ ಬಂತು.ನಮ್ಮಲ್ಲಿ ಬಹಳ ಜನಕ್ಕೆ ಬಿಗ್ ಬಾಸ್ ನೆದರ್ಲ್ಯಾಂಡ್ಸ್ ಮೂಲದ “ಬಿಗ್ ಬ್ರದರ್” ಎಂಬ ರಿಯಾಲಿಟಿ ಶೋನಿಂದ ಪ್ರೇರಿತ ಕಾರ್ಯಕ್ರಮ ಎಂದು ತಿಳಿದಿರಲಿಕ್ಕಿಲ್ಲ. ಈ ಬಿಗ್ ಬ್ರದರ್ ನ ಉದ್ದೇಶ ಸಹ ಇದೇ ಆಗಿತ್ತು. ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ಜನಸಾಮಾನ್ಯರಿಗೆ ಸದಾ ಕುತೂಹಲ ಇದ್ದೇ ಇದೆ.ನಮ್ಮ ನೆಚ್ಚಿನ ನಟ,ನಟಿ,ಕ್ರೀಡಾಪಟು,ಸಾಹಿತಿ ಮತ್ತಿತರ ಖ್ಯಾತನಾಮರ ದಿನಚರಿ ಹೇಗೆ ಶುರುವಾಗಬಹುದು..? ಅವರು ಊಟಕ್ಕೆ ಏನು ಬಳಸಬಹುದು..? ಅವರು ಮೇಕಪ್ ಇಲ್ಲದೆ ಹೇಗಿರಬಹುದು..? ಐಶಾರಾಮಿ ಅಲ್ಲದ ಅವರ ಬದುಕು ಹೇಗಿರುತಿತ್ತು..? ಮುಂತಾದ ಪ್ರಶ್ನೆಗಳು ಜನಸಾಮಾನ್ಯರ ಮನಸ್ಸಲ್ಲಿ ಆಗಾಗ ಸುಳಿಯುತ್ತದೆ. ಅಷ್ಟೇ ಅಲ್ಲ ನಮಗೆ ಸದಾ ‘ಕಂಡೋರ ಮನೆ ವಿಷಯಗಳಲ್ಲೇ ಕುತೂಹಲ’ ಎಂಬುದು ಸಹಾ ಲೋಕಾರೂಡಿ ಮಾತಲ್ಲವೇ..?
ಈ ಕಾರಣಕ್ಕಾಗಿಯೇ ನೆದರ್ಲ್ಯಾಂಡ್ಸ್ ನ ಬಿಗ್ ಬ್ರದರ್ ಅಮೇರಿಕೆಯ ಬಿಗ್ ಬ್ರದರ್ ಇಷ್ಟೋದು ಪ್ರಚಾರ ಗಳಿಸಿ ಖ್ಯಾತಿ ಪಡೆದದ್ದು ಮತ್ತೀಗ ನಾವು ಭಾರತೀಯರು ಸಹ ಬಿಗ್ ಬಾಸ್ ಕಾರ್ಯಕ್ರಮದ ಸರಣಿಗಳಿಗೆ ಅಷ್ಟೇ ಕುತೂಹಲಿಗಳಾಗಿದ್ದೇವೆ.ಅದೇನೆ ಇರಲಿ ಆದರೆ ಕಾರ್ಯಕ್ರಮದ ಉದ್ದೇಶವಿಷ್ಟೆ ಬದುಕಲು ಸದಾ ನಮಗೆ ಪ್ರತಿಕೂಲ ಹವಮಾನ,ವ್ಯವಸ್ಥೆ, ಪರಿಸ್ಥಿತಿ ಗಳು ಎದುರಾದಾಗ ಒಂದೇ ಮಾದರಿಯಲ್ಲಿರುವುದಿಲ್ಲ ಕೆಲವು ಬಾರಿ ನಮಗೆ ಪೂರಕ ಮತ್ತೆ ಕೆಲವು ಬಾರಿ ಮಾರಕವಾಗಬಹುದು ಆದರೆ ಯಾವ ಯಾವ ಸಂದರ್ಭಗಳಲ್ಲಿ ನಾವು ಹೇಗಿರಬೇಕು ಎಂಬುದನ್ನು ನಾವು ನೋಡಿ ಕಲಿಯಬಹುದು ಎಂಬ ಕಾರಣಕ್ಕೆ ನಾವು ಬಿಗ್ ಬಾಸ್ ನೋಡಲೇಬೇಕು.
ಸ್ಪರ್ದಿಗಳ ಮನಸ್ಥಿತಿ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುವುದನ್ನು ನಾವು ನೋಡಬಹುದು.ಯಾರು ಎಷ್ಟೇ ಸ್ಕ್ರಿಪ್ಟೆಡ್ ಶೋ ಎಂದರೂ ನಾವು ಸ್ಪರ್ದಿಗಳ ಆಟ ನೋಡುತ್ತಾ ಜೀವನ ಪಾಠ ಕಲಿಯೊ ಅವಕಾಶ ಮಿಸ್ ಮಾಡ್ಕೋಬಾರದಷ್ಟೆ.
ಇದಿಷ್ಟು ಬಿಗ್ ಬಾಸ್ ನ ಬಗ್ಗೆ ಸಣ್ಣ ಪರಿಚಯ.ಉಳಿದದ್ದೆಲ್ಲಾ ನಿಮಗೆ ತಿಳಿದೇ ಇದೆ.
ಮುಂದಿನ ಭಾಗದಲ್ಲಿ ನಿರೀಕ್ಷಿಸಿ.. ಆಡದೆ ಗೆಲ್ಲಲು ಸಾಧ್ಯವೇ..? ಆಡಿದವರೆಲ್ಲ ಗೆಲ್ಲಲು ಸಾಧ್ಯವೇ???
ಕಂಡವರ ಮನೆ ಸುದ್ದಿ ನಮಗ್ಯಾಕೆ ಅಂದುಕೊಂಡು ನಾವು ನೋಡ್ತೀವಿ… ಅದನ್ನೇ ಗುರಿಯಾಗಿಟ್ಟು ಸಿದ್ಧವಾಗಿರುವುದೇ ಈ ಬಿಗ್ಬಾಸ್..