ಭಜರಂಗಿ-2 ಸಿನಿಮಾನ ಕಣ್ತುಂಬಿಸಿಕೊಳ್ಳಲು ಸಿನಿ ಪ್ರಿಯರ ದೊಡ್ಡ ಬಳಗವೇ ಕಾಯ್ತಿದೆ ಅದರಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣನ ಅಭಿಮಾನಿ ತಂಡವೊಂದು ಸಿನಿಮಾನ ದಸರಾ ದೀಪಾವಳಿಯಂತೆ ಸಂಭ್ರಮಿಸಿ ಸ್ವಾಗತಿಸಲು ಸಜ್ಜಾಗಿದೆ…. “ರಾಜ ಮರ್ಯಾದೆ”.
ಪದ್ಮನಾಭನಗರದ ಶ್ರೀನಿವಾಸ ಚಿತ್ರಮಂದಿರದಲ್ಲಿ ಬೆಳಗ್ಗೆ 6 ಘಂಟೆಗೆ ಫ್ಯಾನ್ಸ್ ಶೋ ಪ್ರಾರಾಂಭವಾಗಲಿದೆ, “ಬನಶಂಕರಿಯ ಶಿವು ಅಡ್ಡ” ಅಭಿಮಾನಿ ಸಂಘವು ಈ ಬಾರಿ ನೂತನ ರೀತಿಯಲ್ಲಿ ಚಿತ್ರವನ್ನ ಕೊಂಡಾಡಲಿದೇ!
ಥಿಯೇಟರ್ ಆವರಣದಲ್ಲಿ ಬರಿ ಕಟೌಟ್ ಅಲಂಕಾರ, ಪಟಾಕಿ ಸಿಡಿತ ಹಾಗೂ ಅನ್ನ ದಾನಕ್ಕೆ ಸೀಮಿತವಾಗದೆ ಚಿತ್ರಮಂದಿರದ ಒಳಗಡೆಯೇ ಸ್ಕ್ರೀನ್ ಎದುರೇ ದೊಡ್ಡದಾದ ಸಡಗರ ನೆರವೇರಲಿದ್ದು ಈಗಾಗ್ಲೇ ಶ್ರೀನಿವಾಸ್ ಚಿತ್ರಮಂದಿರ ರಂಗಿನ ಮಂಟಪದಾಂತೆ ತಯಾರಾಗಿದೆ.. ಪರದೆಯಮೇಲೆ ಶಿವಣ್ಣ ಅವರ ಎಂಟ್ರಿ ಸೀನ್ ವೇಳೆ ಹೇಗೆ ಆಚರಸ್ತೀರ? ಈ ಸರ್ತಿ ಏನು ಸ್ಪೆಷಲ್? ಅಂತ ಅಭಿಮಾನಿಗಳನ್ನ ಕೇಳಿದಕ್ಕೆ ಅವ್ರು ಉತ್ತರವಾಗಿ ಒಂದು ಸಣ್ಣ ಸುಳಿವು ಬಿಟ್ಟುಕೊಡದೆ ಹೇಳಿದ್ದೊ0ದೆ ನೀವೇ ಬಂದು ನೋಡಿ ಇಲ್ಲಿಯ ತನಕ ಯಾರು ಮಾಡಿರದ ಊಹಿಸಲೂ ಆಗದ ಬೃಹತ್ ಪ್ರಸಂಗಕ್ಕೆ ಸಾಕ್ಷಿಯಾಗುತ್ತೀರಾ…ಬನಶಂಕರಿ ಶಿವ ಅಡ್ಡ ತಂಡುವು ಸಿನಿಮಾನ ಮತ್ತು ಶಿವಣ್ಣನ ಮೇಲಿರುವ ಅಭಿಮಾನವನ್ನ ಅಗಸದೆತ್ತರಕ್ಕೆ ಕೊಂಡು ಹೋಗಲಿದ್ದಾರೆ…