ಯಾರಪ್ಪ ಈ ಭಕ್ಷಿ ಸಾಹೇಬ್ರು ಎಲ್ಲಿ ಎಂಟ್ರಿ ಕೊಟ್ರು ಅನ್ನೋದೇ ವಿಶೇಷ.
ಆರ್. ಚಂದ್ರು ನಿರ್ದೇಶಿಸುತ್ತಿರುವ ಬಹುಕೋಟಿ ವೆಚ್ಚದಲ್ಲಿ ತಯಾರಾಗ್ತಿರೋ ಭಾರತದ ಭೂಗತ ಜಗತ್ತಿನ ಪೂರ್ವಾಪರವನ್ನ ಎಳೆ ಎಳೆಯಾಗಿ ಬಿಚ್ಚಿಡುವ ಸಾಹಸಕ್ಕೆ “ಕಬ್ಜಾ”ಸಿನಿಮಾ ಸಾಕ್ಷಿಯಾಗಲಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರು ನಾಯಕನಾಗಿ ಅಭಿನಯಿಸ್ತಿದ್ರೆ ಮತ್ತೊಂದೆಡೆ ಕಿಚ್ಚಾ ಸುದೀಪ್ ” ಭಾರ್ಗವ ಭಾಕ್ಷಿ” ಅನ್ನೋ ದಕ್ಷ ಪೋಲಿಸ್ ಅಧಿಕಾರಯಾಗಿ ಕಾಣಲಿದ್ದಾರೆ.
ಭಾರ್ಗವ ಭಕ್ಷಿ(ಕಿಚ್ಚಾ ಸುದೀಪ್) ಸಾಹೇಬರು ರಾಜ್ಯದ ಖುಖ್ಯಾತ ಗಾಂಗ್ಸ್ಟರ್ಸ್ ಗಳನ್ನ ಒಂದೆಡೆ ಸೇರಿಸಿ ಬೇಸ್ ವಾಯ್ಸ್ನಲ್ಲಿ ಚಳಿ ಬಿಡಿಸುವ ಕಾರ್ಯಕ್ರಮದಲ್ಲಿ ತಲ್ಲೀನರಾಗಿದ್ರು. ಭಕ್ಷಿ ಸಾಹೇಬರು ಬಹಳ ಖಡಕ್ಕಾಗಿ, ಸ್ಟೈಲಿಶ್ ಆಗಿ , ಚುರುಕಾಗಿ ಮಿಂಚ್ತಾ ಇದ್ರು. ಕೆಂಪೇಗೌಡ, ಹುಬ್ಬಳ್ಳಿ ಅಂತಹ ಸಿನಿಮಾಗಳಲ್ಲಿ ಸುದೀಪ್ ಪೊಲೀಸರಾಗಿ ನಟಿಸಿದಾಗ, ಅದನ್ನ ಕಂಡು ನಾವು ಎಷ್ಟು ಇಷ್ಟಪಟ್ಟೆವೋ ಅದೇ ರೀತಿ ಕಬ್ಜಾ ಚಿತ್ರದ ಈ ಪಾತ್ರವು ಬೆರಗು ಮೂಡಿಸುವುದು ಖಚಿತವಾಗಿದೆ. ಹೈದ್ರಾಬಾದಿನ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ವಿಭಿನ್ನವಾದ ದೊಡ್ಡ ಸೆಟ್ ನಿರ್ಮಿತವಾಗಿದ್ದು, ಒಟ್ಟು 20 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.