1966ರಲ್ಲಿ ತೆರೆಕಂಡ ಡಾ. ರಾಜ್ಕುಮಾರ್ ಅಭಿನಯದ, T. V. ಸಿಂಗ್ ಠಾಕೂರ್ ನಿರ್ದೇಶನದ ಭಕ್ತಿ ಪ್ರಧಾನ ಚಿತ್ರ “ಮಂತ್ರಾಲಯ ಮಹಾತ್ಮೆ” ಈಗ ಪೈಂಟ್ಡಬದ್ದಲಿ ಮುಳುಗೆದ್ದು ” ವರ್ಣ ಚಿತ್ರವಾಗಿದೆ”. ಮೂಲ ಸಿನಿಮಾ ಕಪ್ಪು ಬಿಳುಪದಾಗಿತ್ತು. ರಾಜ್ಕುಮಾರ್ ಅವರು ನಟಿಸಿರುವ ಸಾರ್ವಕಾಲಿಕ ಶ್ರೇಷ್ಠ ಸಿನಿಮಾಗಳ ಪಟ್ಟಿಯಲ್ಲಿ ” ಮಂತ್ರಾಲಯ ಮಹಾತ್ಮೆ” ಅಗ್ರ ಸ್ಥಾನವನ್ನು ಅಲಂಕರಿಸುವುದು ಎಂದರೆ ತಪ್ಪಾಗಲಾರದು.
ಸಿನಿಮಾದ ಕಲರಿಂಗ್ ಪ್ರಕ್ರಿಯೆ ಶುರುವಾಗಿದ್ದು ಇನ್ನು 4 ತಿಂಗಳ ಒಳಗೆ ವೀಕ್ಷಣೆಗೆ, ಪೂರ್ಣವಾಗಿ ಸಿದ್ದವಿರುತ್ತದೆ. ಡಾ ರಾಜ್ ಅವರ ನಿಜ ಜೇವನದಲ್ಲಿರಾಯಯರ ಪರಮ ಭಕ್ತರು ಈ ಸಿನಿಮಾ ಅವರ ವೃತ್ತಿ ಹಾಗು ವಯ್ಯಕ್ತಿಕ ಬದುಕಲ್ಲು ಬಹಳ ಪ್ರಭವಕಾರಿಯಾಗಿದ್ದು, ಅವರ 3 ಮಕ್ಕಳಲ್ಲಿಎರಡರನೆಯವರಾದ ರಾಘವೇಂದ್ರ ರಾಜ್ಕುಮಾರ್ ಈ ಸಿನಿಮಾದ ಶೂಟಿಂಗಿನ ವೇಳೆ ಜನಿಸಿದಕ್ಕೆ ಅವರಿಗೆ ಈ ಯತಿಗಳ ಹೆಸರನ್ನು ಇಡಲಾಯಿತು.
ನಾವ್ಯಾರು ಗುರು ರಾಯರನ್ನು ನೇರವಾಗಿ ಕಂಡಿಲ್ಲಅದಾರೆ ಅವರ ಕಾರ್ಯ ಸಾಧನೆಗಳನ್ನಕೇಳಿದ್ದೀವಿ, ಕೃಪೆಯಲ್ಲಿಬದುಕಿದ್ದೀವಿ.. ಆದರೆ ಅವರ ಸ್ವರೂಪವನ್ನು ” ಮಂತ್ರಾಲಯ ಮಹಾತ್ನೆಯಲ್ಲಿ” ಡಾ ರಾಜ್ ಅವರು ಸಾಕ್ಷಿಕರಿಸಿದ್ದಾರೆ ಎನ್ನುವುದು ಎಲ್ಲರು ನಂಬುವ ಮಾತು.
ಈ ಹಿಂದೆ ಡಾ.ರಾಜ್ ಅವರು ಅಭಿನಯದ ಸತ್ಯ ಹರಿಶ್ಚಂದ್ರ, ಕಸ್ತೂರಿನಿವಾಸ ಸಿನಿಮಾ ಕಲರ್ ಸ್ವರೂಪ ಪಡೆದು ಎಲ್ಲರ ಮೆಚ್ಚುಗೆ ಪಡೆದಿತ್ತು.