ಮಲಯಾಳಂನಿಂದ ಕನ್ನಡಕ್ಕೆ “ಡಬ್” ಆಗಿ ಮೊದಲ ಬಾರಿಗೆ ಒಂದು ಚಿತ್ರ ಬಿಡುಗಡೆಯಾಗುತ್ತಿದೆ.
“ಮರಕ್ಕಾರ್” ಹೆಸರಿನಲ್ಲಿ ಅರಬ್ಬಿ ಕಡಲಿನಿಂಟ್ ಸಿಂಹಮ್ ಅನ್ನೋ ಮಲಯಾಳಂ ಸಿನಿಮಾ ಡಬ್ ಆಗಿ ಬಿಡುಗಡೆಗೆ ಸಿದ್ದವಾಗಿದೆ. ಚಿತ್ರದ ಟ್ರೇಲರ್ ಕನ್ನಡದಲ್ಲಿ ಬಿಡುಗಡೆಯಾಗಿದ್ದು ಯೂ ಟ್ಯೂಬ್ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ. ಚಿತ್ರದ ಕನ್ನಡ ಟ್ರೈಲರ್ ನ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಿಲೀಸ್ ಮಾಡಿರುವುದು ಚಿತ್ರಕ್ಕೆ ಮತ್ತಷ್ಟು ಪ್ರಚಾರ ತಂದುಕೊಟ್ಟಿದೆ.
ತಾರಾಂಗಣದಲ್ಲಿ ಮೋಹನ್ ಲಾಲ್,ಸುನಿಲ್ ಶೆಟ್ಟಿ, ಅರ್ಜುನ್ಸರ್ಜಾ,ಪ್ರಭು ಶಿವಾಜಿ, ಕೀರ್ತಿ ಸುರೇಶ್ ಮತ್ತು ಮಂಜು ವಾರಿಯರ್ ಇದ್ದಾರೆ.ಕನ್ನಡದಲ್ಲಿ ಅರ್ಜುನ್ ಸರ್ಜಾ ಅವರ ಪಾತ್ರಕ್ಕೆ ಅವರೇ ಡಬ್ ಮಾಡಿದ್ದಾರೆ.
ಪೋರ್ಚುಗೀಸರು ಭಾರತದ ಮೇಲೆ ದಾಳಿ ಮಾಡಲು ಕೇರಳ ಭಾಗಕ್ಕೆ,ಅರಬ್ಬಿ ಸಮುದ್ರದ ಮಾರ್ಗವಾಗಿ ಬಂದಾಗ, ಅವರಿಗೆ ಸಿಂಹ ಸ್ವಪ್ನವಾಗಿ ಕಾಡಿ, ಕಡಲಿನಲ್ಲಿ ಯುದ್ಧಮಾಡಿ ಅವರನ್ನು ಹೊಡೆದು ಓಡಿಸಿದ “ರಾಜಾ ಮರಕ್ಕಾರ್ರ್” ಕಥೆ ಇದು.
ಭಾರತದ ಮೊದಲ ನೌಕಾ ಪಡೆಯ ಅಧಿಪತಿ, ಅರಬ್ಬಿ ಕಡಲ ಸಿಂಹ ಎಂದೇ ಹೆಸರುವಾಸಿ ಈ ಕಡಲ ವೀರ.
ಇದೇ ಮಾರ್ಚ್ 26ಕ್ಕೆ ಮಾರಕ್ಕಾರ್ ದಂತಕಥೆ ನಿಮ್ಮ ಮುಂದೆ.ಮರಕ್ಕಾರಾಗಿ ಮೋಹನ್ ಲಾಲ್.