ಮರೆಯಲಾಗದ ರಾಮಯ್ಯ.. ಚಾಮಯ್ಯ ಮೇಷ್ಟ್ರು 🙏

ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳು ಎಂದಿಗೂ ಮರೆಯಲಾಗದ ಚಿತ್ರ ಅದು ಡಾ ರಾಜ್ ಕುಮಾರ್ ರವರ ಅವಿಸ್ಮರಣೀಯ ನಟನೆ “ಕಸ್ತೂರಿ ನಿವಾಸ ” ಈ ಚಿತ್ರದಲ್ಲಿ ಒಬ್ಬರ ಪಾತ್ರ ಪ್ರಾರಂಭದಿಂದ ಕೊನೆಯವರೆಗೂ ಇರೋದು, ಅಣ್ಣಾವೃ ಪ್ರತೀ ಸನ್ನಿವೇಶದಲ್ಲಿ ರಾಮಯ್ಯ.. ರಾಮಯ್ಯ ಅಂತ ಕರೆಯೋ ಹಾಗೂ ಅವರ ಜೊತೆ ಸಂಭಾಷಣೆ ಮಾಡೋ ದೃಶ್ಯಗಳು ನಾವು ನೋಡಿತೀ೯ವಿ, ಅದ್ರಲ್ಲೇನಿದೆ ವಿಶೇಷತೆ ಅಂತ ಕೇಳಿದ್ರೆ ಯಾವುದೇ ಒಬ್ಬ ನಟ ನಿದೇ೯ಶಕರು ಹೇಳಿದ ಹಾಗೆ ನಟಿಸೋದು ಸಾಮಾನ್ಯ ಆದರೆ ಆ ರಾಮಯ್ಯ ಪಾತ್ರ ಮನೆಯ ಯಜಮಾನರನ್ನು ನೋಡಿಕೊಳ್ಳೋದು, ಆ ಪಾತ್ರ ಗಮನಿಸಿ ತಲೆ ತಗ್ಗಿಸಿ ಬಗ್ಗಿ ನಡೆಯೋ ಪಾತ್ರ ಯಾವುದೇ ದೃಶ್ಯದಲ್ಲಿ ತಲೆ ಎತ್ತದೆ ಯಜಮಾನರಿಗೆ ಗೌರವ ನೀಡೋದು, ಈಗಿನ ಕಾಲದಲ್ಲಿ ಯಾವ ಕಲಾವಿದರಾದರೂ ಹೀಗೆ ಪಾತ್ರ ಮಾಡೋದು ನಾವು ನೋಡಲು ಸಾಧ್ಯವೇ..

ಸರಳತೆ, ಶ್ರಧ್ಧೆ, ಶಿಸ್ತು ಮೂಲಕ ಜೀವನ ಮಾಡಿ ತಮ್ಮ ಸ್ವಪ್ರಯತ್ನದಿಂದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿ ಪೋಷಕ ಪಾತ್ರಗಳಲ್ಲಿ ಅತ್ಯುತ್ತಮ ಅಭಿನಯ ನೀಡಿದ ಚಾಮಯ್ಯ ಮೇಷ್ಟ್ರು ಅಲಿಯಾಸ್ ಕೆ ಎಸ್ ಅಶ್ವಥ್ ರವರ ಪುಣ್ಯ ಸ್ಮರಣೆ ಇಂದು, ಅವರ ಅಭಿಮಾನಿಗಳಾದ ನಾವೆಲ್ಲರೂ ಗೌರವ ಸಲ್ಲಿಸೋಣ 🙏

ಇವರ ಬಗ್ಗೆ ಹೇಳಲು ನಾನು ತುಂಬಾ ಚಿಕ್ಕವನು ಇಂಥ ಮಹಾನ್ ಕಲಾವಿದರ ಬಗ್ಗೆ ಬರೆಯಲು ಸ್ವಲ್ಪ ಕೈ ನಡುಗುತ್ತೆ ಯಾಕೇಳಿ ನಾಗರಹಾವು ಚಿತ್ರದ ಚಾಮಯ್ಯ ಮೇಷ್ಟ್ರು ಪಾತ್ರ ಮತ್ತು ಅವರ ಶಿಸ್ತಿನ ದೃಶ್ಯಗಳು ಕಣ್ಮುಂದೆ ಬರುತ್ತೆ.

ಇವರು ಸರಿಸುಮಾರು 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ, ನೂರು ಚಿತ್ರದಲ್ಲಿ ಪೋಷಕ ಪಾತ್ರಗಳಲ್ಲಿ ತಮ್ಮ ನಟನೆಯನ್ನು ಮಾಡಿದ್ದಾರೆ,

ಮೇರು ಕಲಾವಿದರ ಜೊತೆ ತಮ್ಮ ತೆರೆಯನ್ನು ಹಂಚಿಕೊಂಡಿದ್ದಾರೆ, ಅವರಲ್ಲಿ ಡಾ. ರಾಜ್ ಕುಮಾರ್, ಡಾ. ವಿಷ್ಣು ವಧ೯ನ್, ಡಾ. ಅಂಬರೀಷ್, ಅನಂತ್ ನಾಗ್, ಡಾ. ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್,ರಾಘವೇಂದ್ರ ರಾಜ್ ಕುಮಾರ್, ಶಂಕರ್ ನಾಗ್, ರಮೇಶ್ ಅರವಿಂದ್ ಇನ್ನೂ ಹಲವಾರು ಕಲಾವಿದರ ಜೊತೆ ಪಾತ್ರಕ್ಕೆ ತಕ್ಕ ಹಾಗೆ ತಮ್ಮ ನಟನಾ ಕೌಶಲ್ಯತೆಯನ್ನು ನೀಡಿದ್ದಾರೆ.

ಅಣ್ಣಾವ್ರ ಜೊತೆ ನಟಿಸಿದ ಚಿತ್ರಗಳಲ್ಲಿ ಕೆಲವು ಹೇಳುವುದಾದರೆ :-ಜಗಜ್ಯೋತಿ ಬಸವೇಶ್ವರ, ರಣಧೀರ ಕಂಠೀರವ, ಗಾಳಿಗೋಪುರ, ನಾಗಾಜು೯ನ, ಭಕ್ತ ಕನಕದಾಸ, ದಶಾವತಾರ, ಕಲಿತರು ಹೆಣ್ಣೆ, ವೀರ ಕೇಸರಿ, ಸಂತ ತುಕಾರಾಮ್, ಸತಿಶಕ್ತಿ, ಶ್ರೀ ರಾಮಾಂಜನೇಯ ಯುದ್ಧ, ಸತ್ಯ ಹರಿಶ್ಚಂದ್ರ, ಬೆಟ್ಟದ ಹುಲಿ, ಸಂಧ್ಯಾರಾಗ, ಜೇಡರ ಬಲೆ, ಇಮ್ಮಡಿ ಪುಲಿಕೇಶಿ, ಭಾಗ್ಯದ ಬಾಗಿಲು, ಚೂರಿಚಿಕ್ಕಣ್ಣ, ಕಸ್ತೂರಿ ನಿವಾಸ, ಸಿಪಾಯಿ ರಾಮು, ಜಗ ಮೆಚ್ಚಿದ ಮಗ, ಹೃದಯ ಸಂಗಮ,ಬಿಡುಗಡೆ,ದೂರದ ಬೆಟ್ಟ, ಮೂರುವರೆ ವಜ್ರಗಳು, ಬಂಗಾರದ ಪಂಜರ, ಎರಡು ಕನಸು, ಮಯೂರ, ರಾಜ ನನ್ನ ರಾಜ, ಬಡವರ ಬಂಧು, ವಸಂತಗೀತ, ನೀ ನನ್ನ ಗೆಲ್ಲಲಾರೆ, ಹೊಸ ಬೆಳಕು, ಚಲಿಸುವ ಮೋಡಗಳು, ಕಾಮನ ಬಿಲ್ಲು, ಶ್ರಾವಣ ಬಂತು, ಅನುರಾಗ ಅರಳಿತು, ಜೀವನ ಚೈತ್ರ, ಒಡಹುಟ್ಟಿದವರು, ಶೃತಿ ಸೇರಿದಾಗ, ಧೃವತಾರೆ, ಜ್ವಾಲಾಮುಖಿ, ಭಾಗ್ಯದ ಲಕ್ಷ್ಮಿ ಬಾರಮ್ಮ, ದೇವತಾ ಮನುಷ್ಯ ಮತ್ತು ಶಭ್ಧವೇಧಿ.

ಹಾಸ್ಯ ಪಾತ್ರಗಳು ನಮಗೆ ಜ್ನಾಪಕ ಬರೋದು ಬಂಗಾರದ ಪಂಜರ, ಹೊಸ ಬೆಳಕು.
ಅತ್ಯುತ್ತಮ ಪಾತ್ರ ಕಸ್ತೂರಿ ನಿವಾಸದ ಪೋಷಕ ಪಾತ್ರ (ನನಗೆ ಅನ್ನಿಸಿದ್ದು)
ಯಜಮಾನ, ಮಾಲೀಕ ಪಾತ್ರ ಬಡವರ ಬಂಧು, ಅನುರಾಗ ಅರಳಿತು.
ಅಚ೯ಕರ ಪಾತ್ರ ದೇವತಾ ಮನುಷ್ಯ.
ಪೋಲಿಸ್ ಆಫೀಸರ್ ಮತ್ತು ಖಳನಾಯಕ ಪಾತ್ರ ಶಭ್ಧವೇಧಿ.

ಇವರು ನಟನೆಯಲ್ಲಿ ತಮ್ಮ ಪ್ರೌಢಿಮೆ ತೋರಿಸಿದವರು, ಅಣ್ಣಾವ್ರ ಯಾವುದೇ ಚಿತ್ರಗಳಲ್ಲಿ ಇವರಿಗೆ ಪಾತ್ರ ಸೃಷ್ಟಿ ಆಗುತ್ತಿತು, ಇವರಿಬ್ಬರ ಬಾಂಧವ್ಯ ಕೂಡ ಹಾಗೇ ಇತ್ತು, ಸಂಭಾವನೆ ವಿಷಯದಲ್ಲಿ ಅವರು ತೆಗೆದುಕೊಳ್ಳುತ್ತಿದ್ದದ್ದು ನಿಗದಿತ. ಎಷ್ಟು ಎನ್ನುವುದು ಬಹುಶಃ ನಿಮಗೆಲ್ಲರಿಗೂ ತಿಳಿದಿರುವ ವಿಚಾರ.

ಡಾ. ವಿಷ್ಣುವಧ೯ನ್ ಜೊತೆ ನಟಿಸಿದ ಮತ್ತು ದಾಖಲೆ ಬರೆದ ಪುಟ್ಟಣ್ಣ ಕಣಗಾಲ್ ರವರ ನಿದೇ೯ಶನದಲ್ಲಿ ಸೃಷ್ಟಿಸಿದ ಚಾಮಯ್ಯ ಮೇಷ್ಟ್ರು ನಾಗರಹಾವು ಚಿತ್ರ ಅವರ ಅಮೋಘ ಕಲೆಗೆ ಸಾಕ್ಷಿ, ಮೇಷ್ಟ್ರು ಅಂದರೆ ಹೀಗಿರಬೇಕು, ಅವರ ಮತ್ತು ಶಿಷ್ಯ ಬಾಂಧವ್ಯ ಎಂಥದು ಎಂಬುದನ್ನು ತೋರಿಸಿದ ಚಿತ್ರ, ಹಾಗೆ ಕಣ೯ ಚಿತ್ರದಲ್ಲಿ ತಂದೆಯ ಪಾತ್ರ, ಕರುಣಾಮಯಿ, ದಾದಾ,ಮರೆಯಲಾಗದ ಚಿತ್ರ ಮುತ್ತಿನ ಹಾರ,ಜನನಾಯಕ, ಸಿರಿವಂತ ಇನ್ನೂ ಮುಂತಾದವು.

ಡಾ. ಅಂಬರೀಷ್ ರವರ ಜೊತೆ ಕಣ೯ನ ಸಂಪತ್ತು ,ಹೃದಯ ಹಾಡಿತು, ಅಮರ್ ನಾಥ್, ಮುಸುಕು , ಮುಂಜಾನೆಯ ಮಂಜು, ಮಣ್ಣಿನ ದೋಣಿ ಮುಂತಾದವು.

ಡಾ. ಶಿವರಾಜ್ ಕುಮಾರ್ ರವರ ಜೊತೆ ಮೃತ್ಯುಂಜಯ, ಆಸೆಗೊಬ್ಬ ಮೀಸೆಗೊಬ್ಬ, ಇನ್ಸ್ಪೆಕ್ಟರ್ ವಿಕ್ರಮ್, ಸಂಯುಕ್ತ , ಗಂಧದ ಗುಡಿ -2 ,ಮೋಡದ ಮರೆಯಲ್ಲಿ, ಆನಂದ ಜ್ಯೋತಿ , ಚಿರಬಾಂಧವ್ಯ ಇನ್ನೂ ಮುಂತಾದವು.

ರಾಘವೇಂದ್ರ ರಾಜ್ ಕುಮಾರ್ ರವರ ಜೊತೆ ಅನುರಾಗದ ಅಲೆಗಳು, ಗಜಪತಿ ಗವ೯ಭಂಗ ಇನ್ನೂ ಮುಂತಾದವು.

ಕರಾಟೆ ಕಿಂಗ್ ಶಂಕರ್ ನಾಗ್ ರವರ ಜೊತೆ ಗೀತ, ಹದ್ದಿನ ಕಣ್ಣು, ಆಟೋ ರಾಜ ಮುಂತಾದವು.

ಅನಂತ್ ನಾಗ್ ರವರ ಜೊತೆ ಚಂದನದ ಗೊಂಬೆ, ಬಯಲು ದಾರಿ, ಮಾತು ತಪ್ಪದ ಮಗ, ನಾರದ ವಿಜಯ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಪುಟ್ಟಣ್ಣ ಕಣಗಾಲ್ ರವರ ಹೆಸರು ಇಲ್ಲಿ ಹೇಳಲೇಬೇಕು ಗೆಜ್ಜೆಪೂಜೆ, ನಾಗರಹಾವು ಚಿತ್ರದಲ್ಲಿ ಚಾಮಯ್ಯ ಮೇಷ್ಟ್ರು, ಶರಪಂಜರ, ಶುಭಮಂಗಳ , ಬೆಳ್ಳಿ ಮೋಡ, ಸೀತಾ ಹೀಗೆ ಹಲವಾರು ಚಿತ್ರಗಳಲ್ಲಿ ಇವರಿಗೆ ಅವಕಾಶ ನೀಡಿದಕ್ಕೆ 🌹

ಪುನೀತ್ ರಾಜ್ ಕುಮಾರ್ ರವರು ಬಾಲನಟರಾಗಿ ನಟಿಸಿರೋದು ಯಾರಿಂದಲೂ ಮರೆಯೋಕೆ ಸಾಧ್ಯವಿಲ್ಲ, ಭಾಗ್ಯವಂತ ಚಿತ್ರದ ಆ ಹಾಡು ಇಂದಿಗೂ ನೆನಪಿನಲ್ಲಿ ಉಳಿಯುವ ಹಾಗಿದೆ.

ಚಾಮಯ್ಯ ಮೇಷ್ಟ್ರು

ತಂದೆಯಾಗಿ, ಸಹೋದರನಾಗಿ, ಪತಿಯಾಗಿ, ತಾತನಾಗಿ, ನಾರದನಾಗಿ, ಹಳ್ಳಿಗನಾಗಿ, ಪಟ್ಟಣಿಗನಾಗಿ, ಗುರುವಾಗಿ, ಅಧಿಕಾರಿಯಾಗಿ, ಸೇವಕನಾಗಿ, ಋಷಿಯಾಗಿ ಹೀಗೆ ವಿಭಿನ್ನ ನೆಲೆಗಳಲ್ಲಿ ಅವರು ಅವರ ಪಾತ್ರಗಳಿಗೆ ನೀಡಿದ ಬೆಲೆ ಅಸದೃಶವಾದದ್ದು.

ಬದುಕಿದರೆ ಯಾರ ಹಂಗೂ ಇಲ್ಲದೆ ಸ್ವಪ್ರಯತ್ನದಿಂದ ಮುಂದೆ ಬರುವುದು ಕಷ್ಟವಲ್ಲ ಎಂದು ತೋರಿಸಿಕೊಟ್ಟ ಇಂಥಾ ನಟನರನ್ನು ಪಡೆದ ನಾವೇ ಧನ್ಯರು, ಎಷ್ಟೇ ವಷ೯ವಾದರೂ ಚಾಮಯ್ಯ ಮೇಷ್ಟ್ರು ಮತ್ತು ಕಸ್ತೂರಿ ನಿವಾಸ ರಾಮಯ್ಯ ಪಾತ್ರ ಜನಮಾನಸದಲ್ಲಿ ಉಳಿಯುತ್ತದೆ ಎಂದು ಹೇಳಿದರೆ ತಪ್ಪಾಗಲಾರದು.

ಕೆಲ ಚಲನಚಿತ್ರ ನಿರ್ದೇಶಕರು ಇವರಿಗೆ ಚಾನ್ಸ್ ಕೊಡುವ ನೆಪದಲ್ಲಿ ಶೂಟಿಂಗ್ ಗಳಲ್ಲಿ ಕರೆಸಿ ಅವರ ಪಾತ್ರಕ್ಕೆ ಕರೀತಾರೆ ಶೂಟಿಂಗ್ ಸೆಟ್ ನಲ್ಲಿ ಕಾಯ್ದು ಕೂತವರನ್ನು ಕರೆಯದೆ ಬೇರೆ ನಟರನ್ನು ಬಳಸಿ ಚಿತ್ರ ಶಾಟ್ ಮುಗಿಸಿ ಆಮೇಲೆ ಕರೀತಿವೀ ಅಂತ ಹೇಳಿ ಕರೆಯದೇ ಇರೋ ಎಷ್ಟೋ ಘಟನೆಗಳು ಇವರಿಗೆ ನೋವುಂಟು ಮಾಡಿವೆ ಕಾರಣ ವಯಸ್ಸಾಗಿದೆ ಎನ್ನೋದು, ಅಂತ ವಿಷಯಕ್ಕೆ ಯಾಕೆ ಇಂಥ ದೊಡ್ಡ ಕಲಾವಿದರನ್ನ ಕರೆಸಿ ಅವಮಾನ ಮಾಡೋದು…. ಈ ಕಾರಣದಿಂದಾಗಿ ಅಶ್ವಥ್ ಸರ್ ರನ್ನು ನಾವು ಚಿತ್ರರಂಗದಲ್ಲಿ ಆಕಸ್ಮಿಕವಾಗಿ ನೋಡಲಾಗಲಿಲ್ಲ, ಯಾಯಾ೯ರು ಹೀಗೆ ಮಾಡಿದ್ದಾರೋ ಅವರಿಗೆ ದೇವರು ಬುಧ್ಧಿ ಕಲಿಸದೆ ಬಿಡಲ್ಲ.. ಇದೇನಾ ಮೇರು ನಟರಿಗೆ ನೀಡುವ ಗೌರವ..?

ಒಂದು ತಿಳಿಯಿರಿ ಕಲಾವಿದರಿಗೆ ವಯಸ್ಸಾಗೋದು ಆದರೆ ಕಲಾವಿದರ ಕಲೆಗೆ ಎಂದೂ ವಯಸ್ಸು ಕಡಿಮೆಯಾಗದು.

ಇವರ ಚಿತ್ರರಂಗದ ಸೇವೆಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ,

❤ಸತತ 50 ವಷ೯ಗಳ ಸೇವೆಯನ್ನು ಗುರುತಿಸಿ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.
💜ಮೂರು ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿದ್ದಾರೆ
💖ಡಾ.ರಾಜ್ ಕುಮಾರ್ ಪ್ರಶಸ್ತಿ
💛❤ಕನ್ನಡ ರಾಜ್ಯೋತ್ಸವ ಪ್ರಶಸ್ತಿ,
💕ಹಂಸರತ್ನ ಪ್ರಶಸ್ತಿ,
🌺ಸಾಥ೯ಕ ಸುವಣ೯ ಪ್ರಶಸ್ತಿ,
🍀ಏಳು ಬಾರಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಮೆದ್ರಾಸ್ ಫಿಲಂ ಫ್ಯಾನ್ಸ್ ಅಸೋಸಿಯೇಷನ್.

ಇಂಥ ಕಲಾವಿದರು ಈಗ ಬರುತ್ತಿರುವ ಹಲವಾರು ಹೊಸ ಕಲಾವಿದರಿಗೆ ಸ್ಪೂರ್ತಿ .

ಮೂಲತಃ ಇವರು ಮೈಸೂರಿನ ಹೊಳೇನರಸೀಪುರದವರು ಫುಡ್ ಇನ್ಸ್ಪೆಕ್ಟರ್, ಡೆಪ್ಯುಟಿ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ, ಬಹುಶಃ ಇವರ ಶಿಸ್ತು ಈ ಕೆಲಸದಿಂದ ಬಂದಿದೆ ಎಂಬ ನನ್ನ ಭಾವನೆ.

ಇನ್ನೂ ಇವರ ಸುಪುತ್ರರಾದ ಶಂಕರ್ ಅಶ್ವಥ್ ರವರು ತಂದೆ ಹೇಳಿ ಕೊಟ್ಟ ದಾರಿಯಲ್ಲಿ ನಡೆಯುತ್ತಿದ್ದಾರೆ, ಇವರು ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ, ಇವರ ಸಿನಿ ಮತ್ತು ಖಾಸಗಿ ಜೀವನದ ಪಯಣ ಚೆನ್ನಾಗಿ ಸಾಗಲಿ. ಮುಖಪುಟದಲ್ಲಿ ಗೆಳೆಯರಾದ ಮೇಲೆ ನಾನು ಅವರನ್ನು ಫೋನ್ ಮೂಲಕ ಸಂಪಕಿ೯ಸಿದಾಗ ಥೇಟ್ ತಂದೆಯ ಧ್ವನಿ ಅವರು ಮಾತಾಡೋದು, ಮೇಷ್ಟ್ರನ್ನ ನೋಡಿ ಕಣ್ತುಂಬಿಕೊಳ್ಳುವ ಭಾಗ್ಯ ನಮಗಿಲ್ಲ ಆದರೆ ಅವರ ಕುರಿತ ವಿಚಾರಗಳು ನಮಗೆ ತಿಳಿಯಲಿ.

ಇವರ ಜ್ನಾಪಕಾಥ೯ವಾಗಿ ಕೆಂಗೇರಿ ಸೆಟಲೈಟ್ ಟೌನಿನಲ್ಲಿ ಕೆ. ಎಸ್. ಅಶ್ವಥ್‌ ಸ್ಮರಣಾರ್ಥ ಮಕ್ಕಳ ಉದ್ಯಾನವನ್ನು ನಿಮಿ೯ಸಲಾಗಿದೆ.

“ಬಾನ ದಾರಿಯಲ್ಲಿ ಸೂಯ೯ ಜಾರಿ ಹೋದ
ಚಂದ್ರ ಮೇಲೆ ಬಂದ ಮಿನುಗುತಾರೆ ಅಂದ
ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ
ನನ್ನ ಪುಟ್ಟ ಕಂದ “

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply