ಮಾಸದ ನೆನಪು “ಸೌಂದರ್ಯ”

ಹೆಸರಿಗೆ ತಕ್ಕಂತೆ ನೋಡಲು ಸ್ಪುರದ್ರೂಪಿ, ಅದ್ಭುತ ಕಲಾವಿದೆ ಯಾಗಿದ್ದ ಈಕೆ ಕನ್ನಡ,ಹಿಂದಿ,ತಮಿಳ್,ತೆಲುಗು ಮತ್ತು ಮಲಯಾಳಂ ಭಾಷೆ ಸೇರಿ 107 ಸಿನಿಮಾಗಳಲ್ಲಿ ಅಭಿನಯಿಸಿದ್ದರು.ವೃತ್ತಿ ಜೀವನದ ಪ್ರಾರಂಭಿಕ ದಿನಗಳಲ್ಲಿ  ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದರು.ನಂತರ ದಿನಗಳಲ್ಲಿ ದಕ್ಷಿಣ ಭಾರತದ ಸೂಪರ್ ಸ್ಟಾರ್ ನಾಯಕರುಗಳಾದ ರಾಜನಿಕಾಂತ್, ಚಿರಂಜೀವ, ನಾಗಾರ್ಜುನ, ರವಿಚಂದ್ರನ್, ಕಮಲಹಾಸನ್, ಮೋಹನ್ ಲಾಲ್,ಅರ್ಜುನ್ ಸರ್ಜಾ  ಮತ್ತು ಅಮಿತಾಬ್ ಬಚ್ಚನ್ ಅವರೊಂದಿಗೆ ನಾಯಕಿಯಾಗಿ ನಟಿಸಿ, ಅತಿರೇಕ ಹಾವಭಾವಗಳಿಲ್ಲದ: ಸರಳವಾದ ಅಭಿನಯ,ಸೂಕ್ಷ್ಮ ನೋಟ,ಗಂಭೀರವಾದ ಪಾತ್ರಗಳ ಆಯ್ಕೆಯಿಂದಾಗಿ ಎಲ್ಲರ ಮೆಚ್ಚಿನ ನಾಯಕಿಯಾಗಿದ್ದರು.

ಇಂದಿಗೆ(17/04/2020)ಪಂಚಬಾಷ ನಟಿ ಸೌಂದರ್ಯ ಅವರು ನಮ್ಮನ್ನ ಅಗಲಿ 16 ವರ್ಷಗಳಾಯಿತು..

ನಟನೆಯಷ್ಟೇ ಅಲ್ಲದೆ ನಿರ್ಮಾಣವು ಮಾಡಿದರು, ಗಿರೀಶ್ ಕಾಸರವಳ್ಳಿ ನಿರ್ದೇಶನದ “ದ್ವೀಪ” ಚಿತ್ರಕ್ಕೆ ಇವರೆ ಪ್ರೊಡ್ಯೂಸರ್. ಚಿತ್ರದಲ್ಲಿನ ಮನೋಗ್ನ್ಹ ಅಭಿನಯಕ್ಕಾಗಿ  ರಾಜ್ಯ ಪ್ರಶಸ್ತಿ ದೊರಕ್ಕಿತ್ತು. ಚಿತ್ರಕ್ಕೆ ರಾಷ್ಟ್ರ ಪ್ರಶಿಸ್ತಿ ಲಭಿಸಿತ್ತು.

ನಟಿಸಿದ ಕಡೆಯ ಸಿನಿಮಾ ಆಪ್ತಮಿತ್ರ.. ಆ ಸಿನಿಮಾದಲ್ಲಿನ “ನಾಗವಲ್ಲಿ” ಪಾತ್ರಕ್ಕೆ  ದೊರೆತ ಬಹುದೊಡ್ಡ  ಮನ್ನಣೆ,ಮೆಚ್ಚುಗೆಯಿಂದಾಗಿ 3-4 ಭಾಷೆಗಳಿಗೆ ಆ ಸಿನಿಮಾ ರೀಮೆಕ್ ಆಗಲು ಕಾರಣವಾಯಿತು.ನಾಗವಲ್ಲಿಯ ಪಾತ್ರ ಹದಿನೈದು ನಿಮಿಷಗಳೆ ಇದ್ದರು ಕೂಡ 16 ವರ್ಷಗಳಾದ್ರೂ ನಮ್ಮ ಮನಸಿನಲ್ಲಿ: ಮಾಸದೆ ಇಂದಿಗೂ ಹಚ್ಚ ಹಸಿರಾಗಿ ಉಳಿದಿದೆ.

ಸಿನಿಮಾದಲ್ಲಿನ ನಟನೆ ಜೊತೆಗೆ 2004ರಲ್ಲಿ ರಾಜಕೀಯ ನಂಟು ಆರಂಭವಾಗಿತ್ತು. ಲೋಕಸಭಾ ಚುನಾವಣೆಯ ಪ್ರಚಾರಕ್ಕೆಂದು ಆಂಧ್ರ ಪ್ರದೇಶಕ್ಕೆ, ವಿಶೇಷ ವಿಮಾನವೊಂದರಲ್ಲಿ ತೆರಳುವ ಸಂಧರ್ಭದಲ್ಲಿ ,ಉಂಟಾದ ವಿಮಾನ ಅಪಘಾತದಿಂದಾಗಿ 17/04/2004 ರಂದು  ವಿಧಿವಶರಾದರು.ಪೈಲೆಟ್ ಸೇರಿ ನಾಲ್ವರು ಮೃತಪಟ್ಟರು.ಅ ವಿಮಾನದಲ್ಲಿ ಅವರ ಸೋದರ ಅಮರನಾಥ ಕೂಡ ಇದ್ದರು.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply