ಯಶಸ್ವಿಯಾದ ಸಿನಿಮಾ ಸರಣಿಗಳಲ್ಲಿ ಬಾಂಡ್ ಚಿತ್ರಗಳ ಸಾಧನೆ ಉತ್ತಮವಾಗಿದ್ದು ಇದುವರೆಗೂ ಜೇಮ್ಸ್ ಬಾಂಡ್ ಶೈಲಿಯಲ್ಲಿ 25 ಚಿತ್ರಗಳು ತೆರೆ ಕಂಡಿವೆ.
ಡೆನಿಯಲ್ ಕ್ರೇಗ್ ನಟನೆಯಲ್ಲಿ ಮೂಡಿ ಬಂದ ಬಾಂಡ್ ಶೈಲಿಯ 25 ನೇ ಚಿತ್ರ ನೋ ಟೈಂ ಟು ಡೈ ಕೂಡ ತೆರೆ ಕಾಣುವ ಮೊದಲು ತೀವ್ರ ಸಂಚಲನವನ್ನು ಮೂಡಿಸಿತ್ತಾದರೂ ತೆರೆ ಕಂಡ ನಂತರ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಚಿತ್ರದ ಅವಧಿ 2 ಗಂಟೆ 43 ನಿಮಿಷವಿದ್ದು ಈ ಚಿತ್ರದಲ್ಲಿ ಆರಂಭದಲ್ಲಿ ಬರುವ ಇವರ ಆಕ್ಷನ್ ದೃಶ್ಯಗಳು ರೋಮಾಂಚಕಾರಿ ಯಾಗಿವೆ. ಈ ಚಿತ್ರದ ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಉತ್ತಮವಾಗಿದ್ದು ಟ್ವಿಸ್ಟ್ ಗಳು ಪ್ರೇಕ್ಷಕರ ಊಹೆಗೂ ಕೂಡ ನಿಲುಕುವುದಿಲ್ಲ. ಅದರಲ್ಲೂ ಕ್ಲೈಮ್ಯಾಕ್ಸ್ ನಲ್ಲಿ ಬರುವ ಆಕ್ಷನ್ ದೃಶ್ಯಕ್ಕಿಂತಲೂ ಚಿತ್ರದ ಆರಂಭದಲ್ಲಿ ಬರುವ ಆಕ್ಷನ್ ದೃಶ್ಯಗಳೇ ಹೆಚ್ಚು ಕುತೂಹಲವನ್ನು ಮೂಡಿಸಿದೆ ಎಂದು ಹಲವಾರು ಜನರು ತಮ್ಮ ಅನಿಸಿಕೆಯನ್ನು ಹೇಳಿಕೊಂಡರೆ ಇನ್ನೂ ಕೆಲವರಿಗೆ ಈ ಚಿತ್ರವು ಸ್ವಲ್ಪ ಇಷ್ಟವಾಗದಿದ್ದು ಅತೀ ನಿರೀಕ್ಷೆಯೊಂದಿಗೆ ಈ ಚಿತ್ರವನ್ನು ನೋಡಬೇಡಿ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.