ಮಿಸ್ಸ್ ಮಾಡದೆ ನೋಡಿ ‘ಆಚಾರ್ ಅಂಡ್ ಕೋ’

Achar & co

ಅಬ್ಬಾ ತುಂಬಾ ದಿನಗಳ ನಂತರ ಕ್ಲೀನ್ ಕಾಮಿಡಿ ಕನ್ನಡ ಚಿತ್ರ ಒಂದನ್ನು ನೋಡಿ ಬಂದ ಸಮಾಧಾನವಾಯಿತು, ಸಿನಿಮಾ ಮುಗಿಯವರೆಗೂ ಮಲ್ಟಿಪ್ಲೆಕ್ಸ್ ನಲ್ಲೂ shy why ಪಡದೆ, ನಾವು ಗೆಳತಿಯರು ಜೋರುಜೋರಾಗಿ ನಕ್ಕು, ಚಪ್ಪಾಳೆ ಹೊಡೆದು ಹೊಟ್ಟೆ ತುಂಬಾ ನಕ್ಕು ಬಂದೆವು.

ಈ ನಡುವೆ ಟಿವಿ ಅಲ್ಲಿ ಆಗಲಿ, ಚಲನ ಚಿತ್ರಗಳಲ್ಲಾಗಲಿ ಕಾಮಿಡಿ ನೋಡಿ ನಗದೇ, ಮುಜುಗರದಿಂದ ತಲೆ ತಗ್ಗಿಸಬೇಕಾಗುವ ಸಂಧರ್ಭಗಳು ನಿರ್ಮಾಣವಾಗುತ್ತಿವೆ, ಅಂಥಹುದರಲ್ಲಿ PRK ಪ್ರೊಡಕ್ಷನ್ಸ್ ರವರ ಆಚರ ಅಂಡ್ ಕೋ ಬೆಂಗಳೂರು slang ಅಲ್ಲಿ ಹೇಳುದಾದ್ರೆ ಸಕ್ಕತ್ತಾಗಿತ್ತು….!
ಈ ಸಿನಿಮಾ ಸಕ್ಕತ್ತಾಗಿದೆ ‘ಮಸ್ಟ್ ವಾಚ್’ ಯಾಕೇ..? ಎಂದರೆ..

ಸಿನಿಮಾ 60 ಹಾಗೂ 70 ರ ದಶಕದ ಉದ್ಯಾನ ನಗರಿ ಬೆಂಗಳೂರಿನ ಹಿನ್ನಲೆ ಇಟ್ಟುಕೊಂಡು ಮಾಡಿದ ಚಿತ್ರವಾಗಿದೆ. ಆಚಾರ ಅಂಡ್ ಕೋ 70 ರ ಜಮಾನದ ಜನರ ಸವಿನೆನಪುಗಳನ್ನ ಕೆದಕಿದರೆ, “ಹೌದು ಹೀಗಿತ್ತಂತೆ…” ಎಂದು ನಾವು 90 ರ ಜಮಾನದವರು ನೋಡಿ ಒಪ್ಪಿಕೊಂಡರೆ, ಹೌದಾ ಆಗ ಹೀಗಿತ್ತಾ …? ಎಂದು ಮೂಗು ಮೇಲೆ ಬೆರಳು ಇಟ್ಟುಕೊಳ್ಳುತ್ತಾರೆ 2000 ಜಮಾನದವರು.

Achar & co

ಆಚರ ಅಂಡ್ ಕೋ ಮಸ್ಟ್ ವಾಚ್ ಯಾಕಂದ್ರೆ ಇದು ಮಹಿಳಾ ಪ್ರಧಾನ ಚಿತ್ರ. ನನ್ನ ಇಷ್ಟದ ಸಿನಿಮಾ ಪ್ರಬೇಧ. ಪುರುಷ ಪ್ರಾಧಾನ್ಯತೆ ಇರುವ ಕಾಲ ಘಟ್ಟದಲ್ಲಿಯೂ ಮಹಿಳಾ ಪ್ರಧಾನ್ಯತೆಯನ್ನು ಎತ್ತಿ ಹಿಡಿದ್ದಿದ್ದಾರೆ, ಸುಮ (ಸಿಂಧು ನಾಯಕಿ ನಿರ್ದೇಶಕಿ ) ಮದುವೆ ಮಾಡಿಕೊಂಡು ಗಂಡನ ಜೊತೆ ಲಂಡನ್ ಗೆ ಹೋಗುವ ಕನಸು ಕಂಡಿರುತ್ತಾಳೆ. ಅವಳಿಗೆ ಲಂಡನ್ ಗೆ ಹೋಗಲು ಮದುವೆ ಒಂದೇ ದಾರಿ ಎಂದು ತಿಳಿದ ಆ ಕಾಲದ ಯೋಚನಾ ಲಹರಿಯನ್ನು ತೋರಿಸುತ್ತಾ, ಹತ್ತು ವರ್ಷದಲ್ಲಿ ಅಂತಹ ಯೋಚನೆಯಲ್ಲಿ ಬದಲಾವಣೆ ಹೇಗಾಯಿತು ಎಂದು ಮಹತ್ತರ ತಿರುವಿನೊಂದಿಗೆ ಚಲನಚಿತ್ರ ಮುಗಿದೇ ಹೋಗುತ್ತದೆ, ನಮ್ಮ ಮೊಗದಲ್ಲಿ ನಗುವು ಮಾತ್ರ ಹಾಗೇ ಇರುತ್ತದೆ. ಆಗಿನಿಂದ ಈಗಿನ ಕಾಲದವರೆಗೂ ಅಪ್ಪನಿಗೆ ಮಗ ಇಂಜಿನಿಯರ ಆಗಬೇಕು ಎನ್ನುವುದು ಮಾತ್ರ ಬದಲಾಗಿಲ್ಲ ಅದ್ರೆ ಆಗ ಇಂಜಿನಿಯರ್ ಆಗೋದು ಈವಾಗಿನಷ್ಟು ಸುಲಭವಾಗಿರಲಿಲ್ಲ ಎಂದು ಸಿನಿಮಾ ವಾಸ್ತವ ತೋರಿಸುತ್ತದೆ.

ಸ್ಟಾರ್ ಕಾಸ್ಟ ಅಂತ ದೊಡ್ಡ ಕಲಾವಿದರು ಇಲ್ಲದಿದ್ದರೂ ಎಲ್ಲರು ನಾಟಕ ರಂಗದಿಂದ ಬಂದ ಹೊಸ ಮುಖಗಳಿವೆ.

‘ಮಧುಸೂಧನ ಆಚರ ‘ ಪಾತ್ರದಲ್ಲಿ ಕಾಣಿಸಿಕೊಂಡು ಹಿರಿಯ ನಟ ಅಶೋಕ ,ಸಿಡುಕುವ PWD ಇಂಜಿನಿಯರಾಗಿ ಪಾತ್ರಕ್ಕೆ ಘಡುಸುತನ ತಂದಿದ್ದರೆ. ಹತ್ತು ಮಕ್ಕಳಲ್ಲಿ ಮೂರೂ ಗಂಡು ಮಕ್ಕಳು ಇಂಜಿನಿಯರ್ ಆಗಲಿ ಎಂದು ತಂದೆಯ ಮಹಾದಾಸೆ ಆಗಿರುತ್ತದೆ. ಹೆಣ್ಣುಮಕ್ಕಳನ್ನು ವರ ನೋಡಿ ಮದುವೆ ಮಾಡಿ ಕೈಬಿಡೋದ ಎನ್ನುವ ಲೆಕ್ಕಾಚಾರದ ಅವರ ಸಂಭಾಷಣೆ, ಎಲ್ಲರೂ ಒಟ್ಟಾಗಿ ತೊಂದರೆ ಆದರೂ, ಇಕ್ಕಟ್ಟಾದರೂ ಒಂದೇ ಸೂರಿನಡಿಯಲ್ಲಿ ಇರಬೇಕು ಎನ್ನುವ ಆ ದಿನಗಳ ಧೋರಣೆಯನ್ನು ಅಶೋಕ್ ಅವರು ಸೊಗಸಾಗಿ ಅಭಿನಯಿಸಿದ್ದಾರೆ, ತಾಯಿಯ ಪಾತ್ರದಲ್ಲಿ ಸುಧಾ ಬೆಳ್ವಾಡಿ ಅವರಿಂದ ಇನ್ನೂ ಹೆಚ್ಚಿನ ಅಭಿನಯವನ್ನು ನಿರೀಕ್ಷಿಸಿದ್ದೆ, ಆದರೆ ಅವರಿಗೆ ಸ್ಕೋಪ್ ತುಂಬಾ ಕಡಿಮೆ ಸಿಕ್ಕಿದೆ. ಸಿಂಧು ಅವರೇ ಎಲ್ಲ ಫ್ರೆಮಿನಲ್ಲೂ ವಿಜೃಂಭಿಸಿದ್ದಾರೆ.

ಅನಿರುದ್ಧ್ ಆಚರ ಅವರ ಲುಕ್ಸ್ ನಾಗರ ಹಾವಿನ ವಿಷ್ಣು ಸರ್ ಅವರನ್ನು ಹೋಲುತ್ತದೆ. ಅವರ ಕಾಮಿಡಿ ಟೈಮಿಂಗ್ ಸಕತ್ತಾಗಿದೆ. ಟೈಮ್ ಗೆ ಸರಿಯಾಗಿ ಮದುವೆ ಆಗುವುದು ಮುಖ್ಯ odd pair ಅನ್ನುವ ಕಾನ್ಸೆಪ್ಟ್ ಆಗೆಲ್ಲ ಇರಲಿಲ್ಲ ಎನ್ನುವುದನ್ನು ನಗಸ್ತಾ ಹೇಳಿದ್ದಾರೆ. ಅನಿರುದ್ಧ್ ವೀಕ್ಷಕರ ಗಮನ ಸೆಳೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.

ನಿರ್ಮಾಪಕರು ಅಶ್ವಿನಿ ಪುನೀತ್ ರಾಜಕುಮಾರ, ನಾಯಕಿ ನಿರ್ದೇಶಕಿ ಸಿಂಧು, ಅಷ್ಟೇ ಅಲ್ಲ ಸಂಗೀತ ಸಂಯೋಜನೆ ಕೂಡ ಮಹಿಳೆಯಿಂದ ಪೂರ್ಣಗೊಂಡಿದೆ. ಆದರಿಂದ ಇದು ಪರದೆಯ ಮೇಲೆ ಹಾಗೂ ಹಿಂದೆ ಕೂಡ ಮಹಿಳಾ ಪ್ರಧಾನವಾಗಿದೆ ಎಂದು ಖುಷಿ ಪಡಬಹುದು. ಸಂಗೀತ ನಿರ್ದೇಶಕಿ ಬಿಂದು ಮಾಲಿನಿ ರೆಟ್ರೋ ಹಾಡುಗಳಲ್ಲಿ ವಿಭಿನ್ನತೆಯನ್ನು ತಂದುಕೊಟ್ಟಿದ್ದಾರೆ .

ಇಂಪಾದ ಹಳೆಯ ಹಾಡುಗಳನ್ನು ತಿರುಚಿ ಅದನ್ನು ರಿಮಿಕ್ಸ್ ಹೆಸರಿನಲ್ಲಿ ಹಾಳುಗೆಡುವಿತ್ತಿರುವ ಬಾಲಿವುಡ್ದವರಿಗೆ ಬಿಂದು ಮಾಲಿನಿ ಸಡ್ಡು ಹೊಡೆದು ನಿಂತಿದ್ದಾರೆ. ಪಿಕಲ್ ಸಾಂಗ್, ಸುಪ್ರಭಾತ ಸಾಂಗ್, ಹಿನ್ನಲೆ ಸಂಗೀತ, ಹಾಗು ಹಾಡುಗಳ ಸಾಹಿತ್ಯ ಚೇತೋಹಾರಿ ಆಗಿವೆ.

ನನಗೆ ಕ್ಯಾಮೆರಾ ವರ್ಕ್ ಕೂಡ ತುಂಬಾ ಹಿಡಿಸಿತು, ಬೇರೆ ಬೇರೆ ಆಂಗಲನಿಂದ ದೃಶ್ಯಗಳನ್ನು ಸೆರೆಹಿಡಿದು ಚಿತ್ರವನ್ನು ರಂಗುರಂಗಾಗಿ ಚಿತ್ರಿಸಿದ್ದಾರೆ. Red Oxide ನೆಲವಿರುವ, ಸಣ್ಣ ಗೇಟಿನ, ಹಸಿರಾದ ದೊಡ್ಡ ಅಂಗಳದ ಮನೆ, ಸೈಕಲ್, ಎಂಬಾಸೆಡರ್ ಕಾರ್, ಕಾಟನ್ ಸೀರೆ, ಮಾರುದ್ದ ಎರಡು ಜಡೆಯ ಕನ್ಯೆಯರು, ಬಿಳಿ ಲುಂಗಿ ತೊಟ್ಟ ದಪ್ಪ ಮೀಸೆಯ ಹುಡುಗರು ರೆಟ್ರೋ ಲುಕ್ ಅನ್ನು ಸಮರ್ಪಕವಾಗಿ ತೆರೆಗೆ ತಂದಿದ್ದಾರೆ. ಮಾಧ್ವ ಮುದ್ರೆಗಳು ಮಧುಸುಧನ ಆಚರರ ಮುಖಕ್ಕೆ ಇನ್ನಷ್ಟು ಕಳೆ ತಂದಿದೆ.

ಕಥೆಯಲ್ಲಿ depth ಇಲ್ಲ ಅಂತ ಮೊಸರಲ್ಲಿ ಕಲ್ಲು ಹುಡುಕುವ ವಿಮರ್ಶೆಗಳಿರಬಹುದು ಆದ್ರೆ ಹೊಸ ಪ್ರಯತ್ನ ಚೆನ್ನಾಗಿಯೇ ಮೂಡಿ ಬಂದಿದೆ. ಅದೇ ಹಳೇ ಫಾರ್ಮುಲಾಗಳ ಬಾವಿಯಿಂದ ಹೊರ ಬಂದು ಚಿತ್ರ ವಿಭಿನ್ನ ಆಕಾಶಕ್ಕೆ ಹಾರಿದೆ ಎಂದು ಖಂಡಿತವಾಗಿಯೂ ಹೇಳಬಹುದು.

ಕೊನೆಯದಾಗಿ ನಾನು ಈ ಸಿನಿಮಾ ಥಿಯೇಟರ್ನಲ್ಲಿಯೇ, ಮೊದಲ ವಾರದಲ್ಲಿಯೇ ನೋಡಲು ಕಾರಣ ಇದೊಂದು ‘ಬ್ರಾಹ್ಮಣ ಕುಟುಂಬದ’ ಕಥೆ, ಜೊತೆಗೆ ನನ್ನ ನೆಚ್ಚಿನ ರೀಲ್ಸ್ ಸ್ಟಾರ್ ಸೋನು ವೇಣುಗೋಪಾಲ ಅವರ ದೊಡ್ಡ ಪರದೆಯ ಮೇಲೆ ಚೊಚ್ಚಲ ಪದಾರ್ಪಣೆ. ‘ಸೋನು’ ಅವರ ಪಾತ್ರ ಪುಟ್ಟಾದಾದರೂ, ಎಂದಿನಂತೆ ಅವರ ಉತ್ತರ ಕರ್ನಾಟಕದ ಭಾಷಾ ಶೈಲಿ ನನಗೆ ಆಕರ್ಷಣೆಯ ಕೇಂದ್ರ ಬಿಂದು. ತಿಥಿ ರವೆ ಉಂಡೆ ಕೂಡ “ಕೈಯಲ್ಲಿ ಕೊಟ್ಟ ಬಿಡಿ”, ಮನೆಗೆ ತೊಗೊಂಡು ಹೋಗ್ತಿವಿ ಅನ್ನುವ ಸೋನು BBC ಟೀಮ್ ನಗಿಸುವಲ್ಲಿ ಪೂರ್ಣ ಅಂಕಗಳಿಸಿದ್ದಾರೆ.

ಒಟ್ಟಾರೆ ಫ್ಯಾಮಿಲಿ ಜೊತೆ ನಗನಗ್ತಾ ಎರಡು ಗಂಟೆ ಕಳಿಬೇಕು, ಕಳಪೆ ದ್ವಂದ್ವಾರ್ಧವಿರುವ ಸಂಭಾಷಣೆಯಿಂದ ದೊರ ಸರಿಯಬೇಕೆನ್ನುವರು ಮೊದಲು ‘ಆಚರ್ ಅಂಡ್ ಕೋ’ ಅವರ ಆಚರ್ ಟೇಸ್ಟ್ ಮಾಡಲೇಬೇಕು. ಇನ್ನೊಬ್ಬರಿಗೆ ಟೇಸ್ಟ್ ಮಾಡಿ ಎಂದು ಹೇಳಲೇಬೇಕು…

ಲೇಖಕರು: ಮೃಣಾಲಿನಿ. ಪಿ. ಅಗರಖೇಡ್
ಬೆಂಗಳೂರು.

ಪರಿಚಯ:

ಹೆಸರು : ಮೃಣಾಲಿನಿ. ಪಿ. ಅಗರಖೇಡ್

ಮೃಣಾಲಿನಿ. ಪಿ. ಅಗರಖೇಡ್, MCom Mphil. ಬೆಂಗಳೂರು ನಿವಾಸಿ. ಹವ್ಯಾಸಿ ಬ್ಲಾಗರ್. ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ, ಇಂಗ್ಲಿಷ್ ಹಾಗು ಹಿಂದಿ ಭಾಷೆಯಲ್ಲಿ 2000 ಕಿಂತ ಹೆಚ್ಚು ಬರಹಗಳು ಪ್ರಕಟಗೊಂಡಿವೆ. ಜೊತೆಗೆ ಹಲವು ದಿನಪತ್ರಿಕೆ ಹಾಗು ವಾರ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗಿವೆ. ಸಿನಿಮಾ ವಿಮರ್ಶೆ ಬರೆಯುವುದು ನನಗೆ ತುಂಬಾ ಇಷ್ಟವಾಗುವ ಪ್ರಬೇಧ.

ಮೃಣಾಲಿನಿ ಅಗರಖೇಡ್

ಮೃಣಾಲಿನಿ ಅಗರಖೇಡ್

Leave a Reply