ಮಿಸ್ ಯು ಕನ್ವರ್ ಲಾಲ್….

ಅಮರ ಜೀವಿ ಅಂಬಿ ರವರಿಗೆ ನಮ್ಮ ನಮನಗಳು ನೀವು ತೋರಿಸುವ ಪ್ರೀತಿ ಬೈಗುಳ ಕೇಳದೆ ಬಡವಾಗಿದೆ ಮತ್ತೊಮ್ಮೆ ಹುಟ್ಟಿ ಬನ್ನಿ ಕಲಿಯುಗ ಕಣ೯ ಮಂಡ್ಯದ ಗಂಡು ನಾಗರಹಾವು ಜಲೀಲ ರೆಬಲ್ ಸ್ಟಾರ್ ಅಂಬರೀಷ್ ಅಣ್ಣ ಅಂತ ನಾವು ಹೇಳಿದರೆ

ಅದಕ್ಕೆ ಉತ್ತರ ಹೀಗೆ ಕೊಡ್ಬೋದು ಅವರು ” ಲೇ ಬಡ್ಡೆತವ ಯಾಕೃಲಾ ಹಿಂಗ್ ಬಡ್ಕೊತಿರಾ ನಾನೆಲ್ಲೂ ಹೋಗಿಲ್ಲ ಕಣ್ರಲಾ ನಿಮ್ಗಳ್ ಮನಸ್ನಲ್ಲಿ ಸದಾ ಇರ್ತೀನಿ ಅಮಿಕೊಂಡ್ ಕ್ಯಾಮೆ ನೋಡೃಲ ನಿಮ್ ಹೆತ್ತವೃನ ಚೆನಾಗ್ ನೋಡ್ಕೊಳ್ರೋ ಅಷ್ಟೇ ಸಾಕು ನನಗೆ ಅಂದಾಗ ಅಲ್ಲಿ ಒಬ್ಬ ಅಭಿಮಾನಿ ಅಂಬಿ ಅಣ್ಣ ನಿಮ್ಗೊಸ್ಕರ ನಮ್ ಪ್ರಾಣ ಕೊಡ್ತಿವಣೋ ಅಂದ್ರೆ ಉಗಿರ್ಲಾ ಮಕ್ಕೆ ಅಂತಾರೆ, ಮಿಡಿಯಾದವರು ಅವರ ಹುಟ್ಟು ಹಬ್ಬದ ಸಮಾರಂಭ ಮುಗುಸ್ಕೊಂಡು ಎಲ್ಲೋಗ್ತಿರಾ ಅಂದರೆ ನಿನಗ್ಯಾಕ್ ಬೇಕದು ಅಂತಾರೆ..

ಚಿತ್ರರಂಗದಲ್ಲಿ ಯಾವುದೇ ಸಮಸ್ಯೆ ಪರಿಹಾರ ಮಾಡುವ ಸಾಮರ್ಥ್ಯ ಮತ್ತು ಗುಣ ಅವರಿಗಿತ್ತು, ನಮ್ಮ ಮೇರು ಪವ೯ತ ಅಣ್ಣಾವೃ ಸಹ ಯಾವುದೇ ನಿಧಾ೯ರ ತೆಗೆದುಕೊಳ್ಳುವ ಮುಂಚೆ ಅಂಬಿ ರವರನ್ನು ಕೇಳುತ್ತಿದ್ದರು, ನಿಜಕ್ಕೂ ಆ ಗತ್ತು, ಗಾಂಭೀರ್ಯ, ನಡೆ ,ನುಡಿ ಮತ್ಯಾರಿಗೂ ಬರೋಕೆ ಸಾಧ್ಯವಿಲ್ಲ, ವಿ ಮಿಸ್ ಯು ಒನ್ ಆಂಡ್ ಒನ್ಲೀ ಕನ್ವರ್ ಲಾಲ್…. 😥😥😥

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply