ತಾರಾಗಣ:- ಜಾನ್ ಅಬ್ರಹಾಂ, ಸುನೀಲ್ ಶೆಟ್ಟಿ , ಕಾಜಲ್ ಅಗರ್ವಾಲ್, ಅಮೋಲ್ ಗುಪ್ತಿ, ಇಮ್ರಾನ್ ಹಶ್ಮಿ & ಪ್ರತೀಕ್ ಬಬ್ಬರ್.
ನಿರ್ದೇಶನ:- ಸಂಜಯ್ ಗುಪ್ತ
ಮುಂಬೈ ನಗರದ ಅರಬ್ಬೀ ಸಮುದ್ರಲ್ಲಿ ಮೂಡುವ ಅಲೆಗಿಂತ, ಮುಂಬೈ ಶೆಹರಿನ ಭೂಗತ ಲೋಕದ ಅಧಿಪತಿ ನಾನಗಬೇಕೆಂದು ಬಯಸುವ ಕ್ರೂರ ಮನಸ್ಸುಗಳೇ ಅಧಿಕವಾಗಿಹೆ, ಅಂತಹದ್ದೇ ಮನಸ್ಥಿತಿಯುಳ್ಳ ಓರ್ವ ಗ್ಯಾಂಗಸ್ತಾರ್ ಅಮರ್ತ್ಯ ರಾವ್ ( ಜಾನ್ ಅಬ್ರಹಾಂ) ಸುತ್ತ ನಡೆಯುವ ಕಥೆ ಇದು. ಬಹು(ಮಹೇಶ್ ಮಂಜರೇಕರ್) ಎಂಬ ಬಾಂಬೆಯ ಪ್ರಮುಖ ರಾಜಕೀಯ ನಾಯಕನ ಭಂಟನಾಗಿ ಕೆಲಸ ಮಾಡುತ್ತಾ ಅವನ ದೊಡ್ಡ ಅಕ್ರಮ ದಂಧೆಗಳಿಗೆ ಮಾನೇಜರ್ ಆಗಿರುವ ಅಮರ್ತ್ಯ ರಾವ್ ಮೇಲೇ ಎದುರಾಳಿಯಾದ ಗಾಯ್ತೊಂಡೆಯ(ಅಮೋಲ್ ಗುಪ್ತಿ) ಕೆಂಗಣ್ಣು. ಹಣ- ಪಟ್ಟಕ್ಕಾಗಿ ಸಂಚು ಹೊಂಚು ,ಹುನ್ನಾರ, ರಕ್ತಪಾತ, ಗುಂಡಿನ ಚಕಮಕಿ ಎಲ್ಲದಕ್ಕು ಅಂತ್ಯ ಹೇಳುವ ಹೊಣೆಗಾರಿಕೆ ನಿಷ್ಠಾವಂತ ಪೊಲೀಸ್ ಅಧಿಕಾರಿ ವಿಜಯ್ ಸಾವರ್ಕರನ(ಇಮ್ರಾನ್ ಹಶ್ಮಿ) ಪಾಲಾಗುತ್ತೆ. ಕರ್ತವ್ಯ ಪರಿಪಾಲನೆ ಆಗುತ್ತಾ? ಅಮರ್ತ್ಯ ಮತ್ತು ವಿಜಯ್ ನಡುವಿನ ಸಂಘರ್ಷದಲ್ಲಿ ಜಯ್ ಯಾರಿಗೆ? ಅನ್ನ್ನೋದಕ್ಕೆ ಸಿನಿಮಾನೆ ಉತ್ತರ ಹೇಳುತ್ತೆ. ಜಾನ್ ಅಬ್ರಹಾಮ್, ಅಮೋಲ್ ಗುಪ್ತಿ, ಮಹೇಶ್ ಮಂಜರೆಕರ್ ಮತ್ತು ಇಮ್ರಾನ್ ಹಶ್ಮಿ ಅವರ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದಾರೆ. ನಾಯಕನ ಪತ್ನಿಯಾಗಿ ನಟಿಸಿರುವ ಕಾಜಲ್ ಅಗರವಾಲ್ ರ ಪಾತ್ರ ಚಿಕ್ಕದಾದ್ರು ಚಂದವಾಗಿ ಕಾಣ್ತಾರೆ.
ವರ್ತಮಾನದಲ್ಲಿನ ಮಹಾರಾಷ್ಟ್ರದ ರಾಜಕೀಯ ಅವಸ್ಥೆಯನ್ನ ಸೂಕ್ಷ್ಮವಾಗಿ ಪ್ರತಿಬಿಂಬಿಸುವಲ್ಲಿ ನಿರ್ದೇಶಕ ಸಂಜಯ್ ಗುಪ್ತ ಯಶಸ್ವಿಯಾಗ್ಗಿದ್ದಾರೆ ಹೊರೆತು ಇನ್ನುಳಿದಂತೆ ಅದೇ ಹಳಸಿದ ಕಥೆಯನ್ನ, ಹಳೆ ಪಂಚ್ ಡೈಲಾಗ ಸನ್ನಿವೇಶಗಳಿಂದ ಭರ್ತಿಗೊಳಿಸಿ, ಕಾಲಿ ಲೋಟದೊಳಗೆ ಕಲ್ಲು ಹಾಕಿ ಅಲ್ಲಾಡಿಸಿದ್ದಾರೆ.
ಬಾಂಬೆ ನಗರವನ್ನ ಗುಂಡಾಗಿರಿಯ ರಾಜಧಾನಿಯೆಂದು ಪದೇ ಪದೇ ಬಿಂಬಿಸುವ ಬಾಲವುಡ್ನ ಮತ್ತೊಂದು ಪ್ರಯತ್ನ.
ಚತ್ರೋದ್ಯಮ ರೇಟಿಂಗ್: 3/10.