ಮೆಜೆಸ್ಟಿಕ್ ಚಿತ್ರದ ನಿದೇ೯ಶಕರು “ಪಿ ಎನ್ ಸತ್ಯ “

ಇನ್ನೂ ಇವರ ಕುಟುಂಬದ ಬಗ್ಗೆ ಹೇಳೋದಾದ್ರೆ ಮಡದಿ ರೂಪಶ್ರೀ ಮಕ್ಕಳು ರುತ್ವಿಕ್ ಮತ್ತು ಚಾವಿ೯.

ಇವರ ನಿದೇ೯ಶನದಲ್ಲಿ ಮೂಡಿ ಬಂದ ಚಿತ್ರಗಳ ಹಿಟ್ ಗೀತೆ :

🌹ಸುಮ್ನೆ ಸುಮ್ನೆ ಸುಮ್ನೆ ತಕರಾರು ಮಾಡ್ತಿಯಾ ಗುಟ್ಟು ಹೇಳ್ತೀನಂತ ಕೂಗಿ ಮಮ್ಮಿ ಮಾಡ್ತಿಯಾ – ಶಾಸ್ತ್ರಿ. 💙ಮುದ್ದು ಮನಸೆ ಪೆದ್ದು ಮನಸೆ ಬುದ್ಧಿ ಇಲ್ಲದ ಮನಸೆ – ಮೆಜೆಸ್ಟಿಕ್. 💜ಕದ್ದು ಕದ್ದು ನನ್ನ ನೋಡೊ ತುಂಟ ಕಣ್ಣು ನಿಂದೇನ – ಗೂಳಿ. 💚ಕಾವೇರಿ ಕಂದನು ಕೈ ಮುಗಿದು ಬಂದೆನು – ಡಾನ್. 

ಇವರ ನಿದೇ೯ಶನದ ಚಿತ್ರಗಳ ಕೆಲವು ಡೈಲಾಗ್ ಗಳು ನಿಮಗಾಗಿ :

🎻ಮಚ್ಚಿ ಜೀವನದಲ್ಲಿ ದೊಡ್ಡ ಮನುಷ್ಯ ಆಗ್ಬೇಕಂದ್ರೆ ಚಿಲ್ರೆ ಕೆಲಸ ಮಾಡೋದ್ನ ಬಿಡಬೇಕು – ಮೆಜೆಸ್ಟಿಕ್. 🎧ಈ ದಾಸ ಕೊಟ್ರೆ ವರ ಇಟ್ರೆ ಶಾಪ. 💥ಜಗತ್ತಲ್ಲಿ ಮೋಸ ಮಾಡದೆ ಇರೋ ಜೀವ್ಗಳು ಅಂದ್ರೆ ತಂದೆ ತಾಯಿ ಮಾತ್ರ ಅವ್ರನ್ ನಂಬಿ -ಗೂಳಿ. 🎩ನಿನ್ ಹಣೆಬರಹನ ತಿದ್ದಿ ಬರೆಯೊ ಬ್ರಹ್ಮ ಅನ್ಕೊ, ನಿನ್ ಎದುರು ಸಾವು ಅನ್ಕೊ – ಡಾನ್. 👒ನೀನ್ ಸತ್ರೂ ನಿನ್ ಡೆಡ್ ಬಾಡಿಗೆ ತಾಳಿನ ನಾನ್ ಕಟ್ಟೋದು – ಶಾಸ್ತ್ರಿ.

ಇಷ್ಟೆಲ್ಲಾ ಚಿತ್ರಗಳಲ್ಲಿ ನಟಿಸಿ ನಿದೇ೯ಶನ ಮಾಡಿದ ಪಿ ಎನ್ ಸತ್ಯ ರವರು ಇದ್ದಕ್ಕಿದ್ದ ಹಾಗೆ ಚಿತ್ರರಂಗದಿಂದ ಮರೆಯಾದರು, ಕಾರಣ ತಿಳಿಯಲಿಲ್ಲ, ಯಾವುದೇ ಮನುಷ್ಯ ಬದುಕಿದ ಮೇಲೆ ಒಂದಲ್ಲ ಒಂದು ದಿನ ಈ ಭೂಮಿ ಬಿಟ್ಟು ಹೋಗಬೇಕು, ವಿಧಿ ಯಾರನ್ನೂ ಬಿಡುವುದಿಲ್ಲ, ಅವರು ಹೋಗುವ ದಿನಕ್ಕಿಂತ ಹೆಚ್ಚು ಕಡಿಮೆ ದಶ೯ನ್ ರವರನ್ನು ಒಂದು ಚಿತ್ರದ ಮುಹೂರ್ತ ಸಮಾರಂಭದಲ್ಲಿ ಭೇಟಿ ಮಾಡಿದಾಗ ದಶ೯ನ್ ರವರೆ ಆಶ್ಚರ್ಯವಾಗುತ್ತಾರೆ, ಮೊದಲಿನಂತಿರದಿದ್ದರೂ ತುಂಬಾ ಇಳಿದು ಹೋದ ಹಾಗೆ, ಇವರೇನಾ ಮೆಜೆಸ್ಟಿಕ್ ನಿದೇ೯ಶಕರು ಅಂತ ಕಂಡು ಹಿಡಿಯಲಾಗದಹಾಗೆ. ಇವರಿಗೆ ಕ್ಯಾನ್ಸರ್ ಕಾಡುತ್ತಿತ್ತು ಹಾಗಾಗಿ ಬಹಳ ಸಣ್ಣಗಾಗಿದ್ದರು.


ನಿಮಗೆ ಒಂದು ಮಾತು ಹೇಳಬೇಕು ಕಾಕತಾಳೀಯ ಅಂದರೆ ಮೇ 05 2018 ಬಸವೇಶ್ವರನಗರ ಬಸ್ ನಿಲ್ದಾಣದಲ್ಲಿ ನಾನು ಬಸ್ ಗಾಗಿ ಕಾಯುತ್ತಿದ್ದೆ ಆಗ ಆಟೋನಲ್ಲಿ 4-5 ಜನ ಬಂದು ಪಿ ಎನ್ ಸತ್ಯ ರವರ ಮನೆ ಎಲ್ಲಿ ಬರುತ್ತೆ ಎಂದು ಕೇಳಿದರು ನನಗೆ ಗೊತ್ತಿಲ್ಲ ಮುಂದೆ ಯಾರನ್ನಾದರು ವಿಚಾರಿಸಿ ಎಂದೆ ಮತ್ತೆ ಕಾರಣ ಕೇಳಿದೆ ಇವರು ಮಂಡ್ಯದಿಂದ ಸತ್ಯ ರವರನ್ನು ನೋಡಲು ಬಂದಿರೋದು ಮತ್ತು ಪಿ ಎನ್ ಸತ್ಯ ರವರು ದೈವಾಧೀನರಾಗಿದ್ದಾರೆ ಅಂದಾಗ ನಂಬಲಾಗಲಿಲ್ಲ, ನಂತರ ಮನೆಗೆ ಬಂದು ಟಿವಿ ನೋಡಿದೆ ಅವರ ಪಾಥೀ೯ವ ಶರೀರ ತೋರಿಸುತ್ತಿರುವುದನ್ನು ನೋಡಿ ನನಗೆ ಅಳು ಬರುವ ಹಾಗಾಯ್ತು ಈ ವಿಷಯ ನಿಮ್ಮ ಬಳಿ ಇವರ ಬಗ್ಗೆ ಬರೆಯುವಾಗ ತಿಳಿಸುವುದು ಸರಿ ಅನ್ನಿಸಿತು. 


ಇಂಥ ಪಿ ಎನ್ ಸತ್ಯ ರವರು ಮತ್ತೆ ಹುಟ್ಟಿ ಬರಲಿ🙏
ಇವರು ಮಾಡಿರುವ ಚಿತ್ರಗಳ ಪಾತ್ರಗಳು ಮತ್ತು ಚಿತ್ರಗಳು ಎಂದಿಗೂ ಮರೆಯಲಾಗದು 😢

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply