ಮುಂಚಿನಿಂದಲೂ ರಷ್ಯನ್ನರು ಹೊಸ ರೀತಿಯ ಸಂಶೋಧನೆಗಳಿಗೆ ಹೆಸರಾದವರು. ಅದೇ ರೀತಿ ಈಗ ಅವರು ಸಿನಿಮಾರಂಗಕ್ಕೆ ಸಂಬಂಧಪಟ್ಟಂತೆ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.
ಬಾಹ್ಯಾಕಾಶ ಕತೆಯನ್ನು ಹೊತ್ತ ಹಲವಾರು ಸಿನಿಮಾಗಳು ಈಗಾಗಲೇ ತೆರೆಯ ಮೇಲೆ ಬಂದಿವೆ. ಅವುಗಳನ್ನು ನಾವು ನೋಡಿದ್ದೇವೆ ಕೂಡ. ಈಗ ಇನ್ನೊಂದು ಹೊಸ ಥರ ಸಿನಿಮಾ ಬರ್ತಿದೆ. ಸಿನಿಮಾದ ಹೆಸರು – “ಚಾಲೆಂಜ್”. ಈ ಸಿನಿಮಾ ಮಾಡ್ತಾ ಇರೋದು ರಷ್ಯನ್ನರು. ಇದರಲ್ಲೇನಪ್ಪಾ ವಿಶೇಷ ಅಂತೀರಾ? ಇದು ಬಾಹ್ಯಾಕಾಶ ಸಿನಿಮಾ. ಅಂದರೆ ಬಾಹ್ಯಾಕಾಶದ ಕತೆ ಹೊತ್ತ ಸಿನಿಮಾ ಅಲ್ಲ. ಬಾಹ್ಯಾಕಾಶದಲ್ಲೇ ನಿರ್ಮಾಣವಾಗುತ್ತಿರುವ ಸಿನಿಮಾ. ಕ್ಲಿಮ್ ಶಿಫೆನ್ಕೋ ಈ ಸಿನಿಮಾದ ನಿರ್ದೇಶಕರು. ಬಾಹ್ಯಾಕಾಶದಲ್ಲಿ ಶೋಟಿಂಗ್ ಮಾಡುವುದು ಅಷ್ಟು ಸುಲಭವಲ್ಲ. ಅದಕ್ಕೆ ತಕ್ಕ ತಯಾರಿ ಕೂಡ ಬೇಕು. ಸದ್ಯಾಕೆ ಬಾಹ್ಯಾಕಾಶ ಪ್ರಯಾಣಕ್ಕೆ ಬೇಕಾದ ಶೂನ್ಯ ಗುರುತ್ವ, ಪ್ಯಾರಾಚೂಟ್ ಬಳಕೆ – ಇವುಗಳ ಬಗ್ಗೆ ನಟ-ನಟಿಯರಿ ತರಬೇತಿ ನೀಡಲಾಗುತ್ತಿದೆ. ಸಧ್ಯದಲ್ಲೇ ವಿಶ್ವದ ಮೊದಲ ಬಾಹ್ಯಾಕಾಶದಲ್ಲಿ ಶೂಟ್ ಆದ ಸಿನಿಮಾದ ಆಕ್ಷನ್ – ಕಟ್ ಹೇಳೋಕೆ ನಿರ್ದೇಶಕರು ತಯಾರಾಗಿದ್ದಾರೆ.