ರಾಜಕುಮಾರ್ ಎಂಬ ಹೆಸಿರಿನಲ್ಲೇ ಏನೋ ಒಂದು ಶಕ್ತಿ ಇದೆ. ರಾಜಕುಮಾರವರಿಗೆ- ರಾಜಕುಮಾರವರೇ ಸರಿ ಸಾಟಿ, ನಟನ ಸಾಮರ್ಥ್ಯದಲ್ಲಿ ಅವರೊಬ್ಬ ಮೇರುಪರ್ವತ. ಬಾರತೀಯ ಚಿತ್ರರಂಗದ ಹಲವು ನಟನ ದಿಗ್ಗಜರಲ್ಲಿ ಇವರು ಒಬ್ಬರು. ಹಾಡು ಮುಟ್ಟದ ಸೊಪ್ಪಿಲ್ಲ, ಮುತ್ತುರಾಜ್ ರವರು ಮಾಡದ ಪಾತ್ರವಿಲ್ಲ.
ಬೇಡರ ಕಣ್ಣಪ್ಪ ನಿಂದ ಹಿಡಿದು, ಶಬ್ದವೇದಿ ಯ ತನಕ ಬಹಳ ವೈವಿದ್ಯವಾದ ಪಾತ್ರಗಳು, ಒಂದೊಂದು ಪಾತ್ರದಲ್ಲೂ ಪರಕಾಯ ಪ್ರವೇಶವನ್ನು ಮಾಡಿ ಆ ಪಾತ್ರಕ್ಕೆ ಜೀವ ತುಂಬಬಲ್ಲ ಏಕೈಕ ನಟ ಎಂಬುವುದರಲ್ಲಿ ಅತಿಶಯೋಕ್ತಿಯಲ್ಲ. ರಾಜ್ರವರ ಒಂದೊಂದು ಸಿನಿಮಾ ಗಳು ಒಂದೊಂದು ಮುತ್ತು. ಕೇವಲ ಸಿನೆಮಾಗಳಿಗಷ್ಟೇ ಅವರು ಸೀಮಿತ ವಾಗಿರಲಿಲ್ಲ,
ಅವರು ಎಷ್ಟೋ ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡ್ಡಿದ್ದ ನಿಜವಾದ ಬಂಗಾರದ ಮನುಷ್ಯ. ಒಟ್ಟಿನಲ್ಲಿ ರಾಜಕುಮಾರ್ ರವರ ಕರ್ತವ್ಯ ನಿಷ್ಠೆ, ಶ್ರದ್ದೆ, ಇವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನದ ಸಾರ್ಥಕತೆಯನ್ನು ಕಾಣಬಹುದು.