D- ಬಾಸ್ ಅವರ ಹವಾ ಅಂದ್ರೆ ಅದು ಸಾಮಾನ್ಯವೇ ಅಲ್ಲಾ, ಸಿನಿಮಾದ ಕಲೆಕ್ಷನ್ ಇರಲಿ ಅಥವಾ ಅಭಿಮಾನಿಗಳ ಅಬ್ಬರವೇ ಆಗಲಿ ಎಲ್ಲವೂ ಜೋರಾಗಿಯೇ ಇರುತ್ತೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅಭಿನಯದ ರಾಬರ್ಟ್ಸಿ ಸಿನಿಮಾ ಮಾರ್ಚ್ 11ಕ್ಕೆ ದೇಶದಾದ್ಯಂತ ಬಿಡುಗಡೆಯಾಗಲಿದ್ದು ಸಾಕಷ್ಟು ಪ್ರಚಾರ ಹೊಂದಿದೆ.ನೆಚ್ಚಿನ ನಟನನ್ನು ಪರದೆಯ ಮೇಲೆ ನೋಡಲು ಅಭಿಮಾನಿಗಳ ಕಾತುರ ದಿನೇ ದಿನೇ ಹೆಚ್ಚಿದೆ, ಈ ಮಧ್ಯೆ ಸಿನಿಮಾ ತಂಡ ವಾರಾಕ್ಕೊಂದು ವಿಡಿಯೋ ಸಾಂಗ್ ಬಿಡುಗಡೆ ಮಾಡಿ ಮತ್ತಷ್ಟು ಜೋಶ್ ತರಲು ಕಾರಣವಾಗಿದೆ. ಸಿನಿಮಾದಲ್ಲಿನ “ರಾಮ ನಾಮ ಹಾಡಿರೋ ರಾಮ ಬರುವನು” ಹಾಡು ಸೂಪರ್ ಹಿಟ್ಟಾಗಿ, ಗುನುಗುತ್ತಾ ಗುನುಗುತ್ತಾ ಹಲವರ ಕಾಲರ್ ಟ್ಯೂನ್ ಕೂಡ ಇದಾಗಿದೆ, ಇಷ್ಟೇ ಅಲ್ಲದೆ ಒಂದು ಹೆಜ್ಜೆ ಮುಂದೆ ಹೋಗಿ ಆ ಹಾಡಿನ ಕವರ್ ವರ್ಷನ್ ಚಿತ್ರೀಕರಣ ಕೂಡ ನಡೀತಿದೆ. ಸುಮಾರು 60 ಡ್ಯಾನ್ಸರ್ಸ್ ಗಳು ಒಗ್ಗೂಡಿ ಮದನ್ ಮಾಸ್ಟರ್ ಅವರ ಸಾರ್ಥ್ಯದಲ್ಕಿ “ಜೈ ಶ್ರೀ ರಾಮ ರಾಮ” ಹಾಡಿನ ಪ್ರೊಮೋ ಶೂಟ್ ನಡೆಯುತ್ತಿದೆ. ಇಸ್ರೋ ಲೇಔಟ್ ನಲ್ಲಿರುವ ಗ್ರೌಂಡ್ ಒಂದರಲ್ಲಿ ಹಾಡಿನ ಶೂಟಿಂಗ್ ಭರದಿಂದ ಸಾಗುತ್ತಿದೆ.
ಅತಿ ಶೀಘ್ರದಲ್ಲೇ ಈ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಹಾಡಿನಲ್ಲಿ ಭಾಗಿಯಾಗಿದ್ದ ಎಲ್ಲಾ ಹುಡುಗರಿಗೂ ತಾವು D-ಬಾಸ್ ಅವರ ಹಾಡಿಗೆ ಕುಣಿಯುತ್ತಿದ್ದೀವಿ ಅನ್ನೋ ಸಂತೋಷ್ ತುಂಬಿ ತುಳುಕುತ್ತಿತ್ತು.