ಲಾಕ್ಡೌನ್ ನ ವೇಳೆ ತಮ್ಮ ಆಪ್ತ ಸ್ನೇಹಿತರು ಮತ್ತು ಸಂಸಾರದ ಜೊತೆಗೆರಿಯಲ್ ಸ್ಟಾರ್ ಉಪೇಂದ್ರ,ಅವರದೇ “ರುಪ್ಪಿಸ್” ರೇಸಾರ್ಟಿನಲ್ಲಿ ಸಮಯ ಕಳೆಯುತ್ತಿದ್ದಾರೆ.
ಅಭಿಮಾನಿಗಳುಉಪ್ಪಿಯವರನ್ನ ಮತ್ತೆ ನಿರ್ದೇಶನಮಾಡಲು ಒತ್ತಾಯಿಸುತ್ತಿದ್ದಾರೆ.
ಆದ್ರೆ ಉಪ್ಪಿ ಈ ಬಾರಿ ಅತಿ ದೊಡ್ಡ ಬಜೆಟ್ನಯೋಜನೆಗೆ ತಾಯರಿಮಾಡ್ಕೋತಾ ಇದ್ದಾರೆ. ಆ ಯೋಜನೆಯ ಮೊತ್ತ ಬರೋಬರಿ “2.5 ಲಕ್ಷ ಕೋಟಿ”!!!
ಅಷ್ಟು ದೊಡ್ಡ ಪ್ರಮಾಣದ ಸಿನಿಮನಾ?..
ಇದು ಸಿನಿಮಾ ಅಲ್ಲ ಬದಲಿಗೆ, ಇದು ಕರ್ನಾಟಕ ರಾಜ್ಯದ ಒಂದು ವರ್ಷದ ಬಜೆಟ್ ನ ಮೊತ್ತ..
“ಬುದ್ದಿವಂತ ಉಪೇಂದ್ರ”ಈ ಬಾರಿ ಸಿನಿ ಪ್ರಿಯರಿಗೆ ಮನೋರಂಜನೆ ನೀಡುವ ಸಲುವಾಗಿ ಪೆನ್ ಮತ್ತು ಪೇಪರ್ಹಿಡಿದಿಲ್ಲ ಬದಲಾಗಿ ಇಡೀ ರಾಜ್ಯದ ಒಳಿತಿಗಾಗಿ,ಏಳಿಗೆಗಾಗಿ, ಸುವ್ಯವಸ್ಥೆಗಾಗಿಪೆನ್ಹಿಡಿದಿದ್ದಾರೆ.. ತಾವು ಸ್ಥಾಪಿಸಿದ ಪ್ರಜಾಕೀಯಪಕ್ಷದಿಂದ ಮುಂದಿನ ದಿನಗಳಲ್ಲಿ ಆಗಬೇಕಾದ ಕಾರ್ಯ ಕೆಲಸಗಳರೂಪುರೇಷೆಸಿದ್ಧತೆಯಲ್ಲಿನಿರತರಾಗಿದ್ದಾರೆ..
ನಿರ್ದೇಶಕನಾಗಿ ಚಿತ್ರರಂಗಕ್ಕೆ ಬಂದು ಹೊಸ ಸಂಚಲನ ತಂದ ಉಪ್ಪಿ ಈಗ ಹೆಚ್ಚಿನ ಸಮಯ ಪ್ರಜಾಕೀಯದ ಕೆಲಸಕ್ಕೆ ಮುಡಿಪಾಗಿಟ್ಟಿದ್ದಾರೆ