( ಮುಂದುವರೆದ ಭಾಗ )
ಆದರೆ ವಿಧಿಯ ಆಟ ಬಲ್ಲವರಾರು? ಅಲ್ಲವೇ.
೧೯೭೬ ರಲ್ಲಿ ಹಾಂಕಾಂಗ್ ನಲ್ಲಿದ್ದ ಸಮಯದಲ್ಲಿ ಚಿತ್ರೋದ್ಯಮದ ವಿಲ್ಲಿ ಚಾನ್ ಎಂಬ ನಿರ್ಮಾಪಕರಿಂದ ಜಾಕಿಚಾನ್ ಗೆ ಒಂದು ಟೆಲಿಗ್ರಾಂ ಬಂದಿತು. ಇವರಿಗೆ ಅವಕಾಶ ಕೊಡಲು ಪ್ರಮುಖ ಕಾರಣ ಜಾಕಿಚಾನ್ ಹಿಂದೆ ನೀಡಿದ್ದ ಸಾಹಸ ಪ್ರದರ್ಶನದ ವೈಖರಿಯನ್ನು ಮೆಚ್ಚಿದ್ದರು. ವಿಲ್ಲಿ ಚಾನ್ ನಿರ್ಮಾಣದ ಲೋವಿ ನಿರ್ದೇಶನದಲ್ಲಿ ಮೂಡಿ ಬಂದ ನ್ಯೂ ಫಿಸ್ಟ ಆಫ್ ಫ್ಯೂರಿ ಚಿತ್ರದಲ್ಲಿ ಜಾಕಿಚಾನ್ ನಟಿಸಿದ್ದರು. ಆದರೆ ಈ ಚಿತ್ರ ಯಶಸ್ಸನ್ನು ಪಡೆಯಲಿಲ್ಲ.
ಆದರೂ ನಿರ್ಮಾಪಕ ವಿಲ್ಲಿ ಚಾನ್ ಜಾಕಿಚಾನ್ ಗೆ ಇದೇ ಮಾದರಿಯ ಚಿತ್ರಗಳಲ್ಲಿ ನಟಿಸಲು ಅವಕಾಶ ಕಲ್ಪಿಸಿದರು. ಲೀಸಿಯು ಲಿಂಗ್ ( ಚೀನಿ ಭಾಷೆಯಲ್ಲಿ ಪುಟ್ಟ ಡ್ರಾಗನ್ ಎನ್ನುವರು) ಎಂಬ ರಂಗನಾಮ ಹೊಂದಿರುವ ಬ್ರೂಸ್ಲಿ ನಂತರದ ಜಾಕಿಚಾನ್ ನನ್ನು ಮತ್ತೋರ್ವ ಕಲಾವಿದನನ್ನಾಗಿ ರೂಪಿಸಬೇಕೆಂದು ನಿರ್ಮಾಪಕ ವಿಲ್ಲಿ ಚಾನ್ ಉದ್ದೇಶವಾಗಿತ್ತು.
ಆದರೆ ಬ್ರೂಸ್ಲಿಯ ಕದನ ಕಲೆಗಳ ಶೈಲಿ ಜಾಕಿಚಾನ್ ಗೆ ಬೇಗ ಅರ್ಥವಾಗಲಿಲ್ಲ. ಹಲವು ಚಿತ್ರಗಳು ಸೋಲು ಕಂಡರೂ ಸತತ ಪ್ರಯತ್ನದಿಂದ ಗಲ್ಲಾಪೆಟ್ಟಿಗೆಯಲ್ಲಿ ಅಲ್ಪ ಪ್ರಮಾಣದ ಯಶಸ್ಸು ಕಂಡರು. ಆದರೆ ಎರಡು ವರ್ಷಗಳ ನಂತರ ೧೯೭೮ ರಲ್ಲಿ ಜಾಕಿಚಾನ್ ನಟಿಸಿದ ಸ್ಮಾಲ್ ಇಂದ ಈಗಲ್ ಶ್ಯಾಡೋ ಚಿತ್ರ ಅನಿರೀಕ್ಷಿತ ರೀತಿಯಲ್ಲಿ ಜಯಗಳಿಸಿತು.
ಈ ಸಮಯದಲ್ಲಿ ಬ್ರೂಸ್ಲಿ ಯೊಂದಿಗೆ ಇರುವ ರಂಗ ನಾಮದಂತೆ ಜಾಕಿಚಾನ್ ಗೂ ಪ್ರಾಶಸ್ತ್ಯ ನೀಡುವ ಸಲುವಾಗಿ ರಂಗನಾಮ (ಲಸಿಂಗ್ ಲಿಂಗ್ ( ಚೀನಿ ಭಾಷೆಯಲ್ಲಿ ಡ್ರ್ಯಾಗನ್ ಎನ್ನುವರು) ಎಂಬುದಾಗಿ ಬದಲಾಯಿಸಿತು. ಈ ಚಿತ್ರ ಸೀಜನಲ್ ಫಿಲಂ ಕಾರ್ಪೋರೇಷನ್ ಅಡಿಯಲ್ಲಿ ಎರಡು ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಈ ಚಿತ್ರ ನಿರ್ಮಾಣವಾಗಿತ್ತು. ಈ ಚಿತ್ರ ಯಾವ ಪ್ರಮಾಣದಲ್ಲಿ ಜನಪ್ರಿಯ ಗೊಂಡಿತ್ತು? ಎಂಬುದು ನಿಮಗೆ ಗೊತ್ತೇ?
ಯುಯೇಸ್ ಫೂ ಸಿಂಗ್ ಎಂಬ ನಿರ್ದೇಶಕನಿಂದ ಬಂದ ಈ ಚಿತ್ರದಲ್ಲಿ ಜಾಕಿಚಾನ್ ಗೆ ಸಾಹಸ ಸಂಯೋಜನೆ ಕಾರ್ಯಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿತ್ತು. ಈ ಸಿಕ್ಕ ಅವಕಾಶವನ್ನು ಉತ್ತಮವಾಗಿ ಉಪಯೋಗಿಸಿಕೊಂಡ ಜಾಕಿಚಾನ್ ಕುಂಗು ಫೂ ಪ್ರಕಾರದ ವಿನೂತನ ಹಾಸ್ಯಭರಿತ ಸಾಹಸ ಸಂಯೋಜನೆ ಪ್ರಯೋಗ ಮಾಡಿದರು. ಈ ಚಿತ್ರ ಬಿಡುಗಡೆಯಾದ ನಂತರ ನೋಡಿದ ಹಾಂಕಾಂಗ್ ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡಿತು. ನಂತರ ಬಂದ ಡ್ರಂಕನ್ ಮಾಸ್ಟರ್ ಚಿತ್ರ ಇವರನ್ನು ಮುಖ್ಯ ವಾಹಿನಿಯ ಯಶಸ್ಸಿನ ಕಡೆ ಕರೆ ತಂದಿತು. ಇಲ್ಲಿಂದ ಜಾಕಿಚಾನ್ ಹಿಂತಿರುಗಿ ನೋಡಲಿಲ್ಲ.ಲೋವಿಯೋ ಸ್ಟುಡಿಯೋ ಗೆ ಹಿಂದಿರುಗಿದ ಚಾನ್ ಡ್ರಂಕನ್ ಮಾಸ್ಟರ್ ಚಿತ್ರ ಮಾದರಿಯಲ್ಲಿ ಲೂಫ್ ಆಫ್ ಕುಂಗ್ ಫೂ ಮತ್ತು ಸ್ಪಿರಿಚ್ಯುಯಲ್ ಕುಂಗ್ ಫೂ ಚಿತ್ರಗಳನ್ನು ನಿರ್ಮಿಸಿದ್ದರು.
( ಮುಂದುವರೆಯುವುದು )