ಜೋ ಜೋ…Rabbit..
Oscar ನಾಮಾಂಕಿತ ಚಿತ್ರ.
ಜೋಜೋ ಪುಕ್ಕಲ.
ಆತನಿಗೆ ಮಕ್ಕಳ ಸೈನಿಕ ಕ್ಯಾಂಪ್ನಲ್ಲಿ ಕ್ಯಾಪ್ಟನ್ ಕೆ ಹೇಳಿದಂತೆ ಮೊಲದ ಕತ್ತು ಕುಯ್ಯಲು ಆಗುವುದಿಲ್ಲ…ಬೇಗ ಓಡಿ ಹೋಗು ಎಂದು ಮೊಲಕ್ಕೆ ಆದೇಶಿಸುವಂತೆ ಕೆ..ಅದರ ಕತ್ತು ತಿರುಗಿಸುತ್ತಾನೆ..
ಯಾವಾಗಲೂ ಬಂದು ಹುರಿದುಂಬಿಸುವಂತೆ ಇಂದೂ ಪ್ರತ್ಯಕ್ಷವಾಗುವ ಕಾಲ್ಪನಿಕ ಹಿಟ್ಲರ್‌ನಿಂದಾಗಿ hand Granade ಪಕ್ಕದಲ್ಲೇ ಸಿಡಿದು..ಜೋ ಕುರೂಪಿಯಾಗುತ್ತಾನೆ..
ಜೋನ ಅಪ್ಪ ಎಲ್ಲೋ ದೂರದಲ್ಲಿ ಸೈನ್ಯದಲ್ಲಿರುತ್ತಾನೆ,ಅಮ್ಮ ಹೇಳಿದಂತೆ..
ಅಮ್ಮ ತನ್ನ ಹಿರಿಮಗಳು ಇಂಗಾಳನ್ನು ಕಳೆದುಕೊಂಡು. ಜ್ಯೂ ಳಾದ ಎಲ್ಸಾಳನ್ನು ಮನೆಯಲ್ಲಿ ಬಚ್ಚಿಟ್ಟಿರುತ್ತಾಳೆ..ಜೋ ಅವಳನ್ನು ಆಕಸ್ಮಿಕವಾಗಿ ಕಂಡು ಹುಡುಕುತ್ತಾನೆ…..
ಇದು ೧೦ರ ನಾಝಿ, ಜೋ ಮತ್ತು ತಲೆಯಲ್ಲಿ ಕೊಂಬಿರುವಂತಹಾ, ಜ್ಯೂ , ೨೦ರ ಎಲ್ಸಾಳ ನಡುವಿನ ಪ್ರೇಮ ಕತೆ.
ಅಪ್ಪನೂ ಇಲ್ಲ ಕೊನೆಗೆ ಅಮ್ಮನನ್ನೂ ಕಳೆದುಕೊಳ್ಳುವ ಜೋ..ಹಿಟ್ಲರ್‌ಗೆ get out ಅನ್ನುವಷ್ಟರಲ್ಲಿ…ಕತೆಗೆ ತಾರ್ಕಿಕ ಅಂತ್ಯ ಬಂದರೂ..
ಚಿತ್ರ ಇನ್ನೂ ಸ್ವಲ್ಪ ದೂರ ಓಡುತ್ತದೆ.
ಒಂದು ವಿಮರ್ಶೆಯ ಪ್ರಕಾರ ಶಹೀನ್ ಬಾಘ್ ಪ್ರಕರಣಕ್ಕೆ ಈ ಚಿತ್ರವನ್ನು ಉದಾಹರಿಸಿದರೂ..ಹಾಗೇನೂ ಇಲ್ಲ.
ಒಂದು ಉತ್ತಮ ಮಕ್ಕಳ ಚಿತ್ರವನ್ನಾಗಿ ನೋಡಬಹುದು.
WW2 ಅಂತ್ಯದ ಸನ್ನಿವೇಶ.
ಮಿತ್ರಕೂಟ ಯುದ್ಧ ಜಯಿಸುತ್ತಿದ್ದಂತೆಯೇ ಚಿತ್ರ ಮುಗಿಯುತ್ತದೆ……..
ಕ್ಯಾಪ್ಟನ್ ಕೆ…ಜೋನ ಜರ್ಮನ್ ಅಂಗಿ ತೆಗೆದು..ಈತ ಜ್ಯೂ..ಜ್ಯೂ…ಎಂದು ಕ್ಯಾಕರಿಸಿ ಉಗಿಯುತ್ತಾನೆ
ಸುಳ್ಳು ಹೇಳಿದ್ದಕ್ಕಾಗಿ ಎಲ್ಸಾ ಜೋನ ಕೆನ್ನೆಗೊಂದು ಹೊಡೆದು..ಮನೆಯ ಹೊರಗಡೆ ನರ್ತಿಸುತ್ತಾರೆ…