ರಿಯಲ್ ಸ್ಟಾರ್ ದಂಪತಿಗಳಿಗೆ ವಿವಾಹ ವಾಷಿ೯ಕೋತ್ಸವದ ಶುಭಾಶಯಗಳು
ವಿಶಿಷ್ಟವಾದ ನಿದೇ೯ಶನ ಶೈಲಿಯಿಂದ ವಿಭಿನ್ನ ಚಿತ್ರಕಥೆಗಳಿಂದ ಜನರು ಮನಸ್ಸನ್ನು ಮುಟ್ಟೋ ಹಾಗೆ ರಿಯಲ್ ಲೈಫ್ ಇನ್ಸಿಡೆಂಟ್ ಗಳನ್ನು ಬೆಳ್ಳಿ ತೆರೆಯ ಮೇಲೆ ತಂದು ಭಾರತದ ನಿದೇ೯ಶಕರ ಪಟ್ಟಿಯಲ್ಲಿ ಆವರ ಹೆಸರು ಇದೆ ಎನ್ನುವುದನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳುವ ಅವಯಾ೯ರು ಅಂತ ಗೊತ್ತಾಗಿರ್ಬೋದು ಅವರೇ ಕನ್ನಡ ಚಿತ್ರರಂಗದ ಜನಪ್ರಿಯ ರಿಯಲ್ ಸ್ಟಾರ್, ಫಿಲ್ಟರ್ ಇಲ್ಲದೆ ಇರೋದುನ್ನ ಹಾಗೆ ಜನಗಳಿಗೆ ತಲುಪುವಂತೆ ತೋರಿಸುವ ನಿದೇ೯ಶಕರು, ಪ್ರಜಾಕೀಯ ಪಕ್ಷದ ನಾಯಕರು, ಸೂಪರ್ ಸ್ಟಾರ್ ಉಪೇಂದ್ರ .
ಪ್ರೀತಿಗೆ ಭಾಷೆ ಬೇಕಿಲ್ಲ ಎರಡು ಹೃದಯಗಳು ಒಂದಾದರೆ ಸಾಕು, ಬದುಕಿ ಬಾಳುವ ಛಲ ಇರಬೇಕು. ಉಪ್ಪಿ ರವರು ಕುಂದಾಪುರ, ಪ್ರಿಯಾಂಕ ರವರು ಕಲ್ಕತ್ತ. ಇಬ್ಬರೂ ನಟರು ಸಂದಭ೯ ಭೇಟಿ ಒಪ್ಪಿಗೆ ವಿವಾಹ.
ರಿಯಲ್ ಸ್ಟಾರ್ ದಂಪತಿಗಳಿಗೆ ವಿವಾಹ ವಾಷಿ೯ಕೋತ್ಸವದ ಶುಭಾಶಯಗಳು ❤🌺🌷
ದೇವರು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಒಳ್ಳೆಯದು ಮಾಡಲಿ.
ನಿಮ್ಮ ನಿದೇ೯ಶನದ ಹೊಸ ಚಿತ್ರಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ ಅವರಲ್ಲಿ ನಾನೂ ಒಬ್ಬ.
ಶ್ರೀನಿವಾಸ್ ಎ
ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು.
ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ.
ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏
ಕಪ್ಪು ಬಿಳುಪು ಪಾತ್ರಗಳ ಕಥೆಗಳ ಸಿನಿಮಾಗಳ ಸರಮಾಲೆಯಲ್ಲಿ ಇದೊಂದು. ಡಿಕ್ಕಿ ಮಾಧವರಾವ್ ಹಳ್ಳಿಯಲ್ಲಿ ಗೌರವದಿಂದ ಬಾಳುವಾತ. ಆತನ ಹೆಂಡತಿ ಜಯಶ್ರೀ. ಅವರಿಬ್ಬರ ಮಗಳು ಹದಿನೈದರ ಬಾಲೆ (ಚಂದ್ರಕಲಾ).…