ಬಾಲಿವುಡ್ ಚಿತ್ರರಂಗದಲ್ಲಿ ದಿಗ್ಗಜ ನಟರನ್ನ ಕಳೆದುಕೊಳ್ಳುವ ಗಟ್ಟಿ ಮನಸ್ಸು ಮಾಡಿಕೊಂಡಿರಬೇಕು ಅಂತ ನನಗೆ ಅನ್ನಿಸಿದೆ.
“❤ಜೀನಾ ಯಹಾ ಮನಾ೯ ಯಹಾ ಇಸ್ಕೆ ಸಿವಾ ಜಾನಾ ಕಹಾ
ಜೀ ಚಾಹೆ ಜಬ್ ಹಮ್ಕೊ
ಆವಾಜ್ ದೇ ಹಮ್ ಹೇ ವಹೀ ದೋನೋ ಜಹಾ❤ “
ಜೀವನದ ನಿಜವಾದ ಅಥ೯ ಈ ಹಾಡಿನಲ್ಲಿದೆ, ಇಲ್ಲೇ ಬದುಕಬೇಕು, ಇಲ್ಲೇ ಸಾಯಬೇಕು, ಇದನ್ನು ಬಿಟ್ಟು ಬೇರೆ ಜಾಗವಿಲ್ಲ ಎಂದು.
ತಂದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿದ ರಾಜ್ ಕಪೂರ್ ರವರ “ಮೆರ ನಾಮ್ ಜೋಕರ್ ” ಚಿತ್ರದ ಮೂಲಕ ಬಾಲನಟರಾಗಿ ಕಾಣಿಸಿಕೊಂಡ “ರುಷಿ ಕಪೂರ್ “ನಂತರ ನಟಿಸಿದ ಎಷ್ಟೋ ಚಿತ್ರಗಳು ಜನರನ್ನು ಸೆಳೆದಿದ್ದಾರೆ, “ಚಾಕ್ಲೇಟ್ ಬಾಯ್ ಹುಡುಗೀರ ಹಾಟ್ ಫೇವರೆಟ್“
ಕಭಿ ಕಭಿ, ಅಮರ್ ಅಕ್ಬರ್ ಆಂಟನಿ, ಬಾಬಿ, ಕಜ್೯, ಸಗ೯ಂ, ಚಾಂದಿನಿ, ಹಮ್ ಕಿಸೀಸೆ ಕಮ್ ನಹೀ, ಝಹ್ರೀಲ ಇನ್ಸಾನ್, ಕೂಲಿ, ಕಾರೋಬಾರ್, ಪ್ರೇಮ್ ರೋಗ್, ಪ್ರೇಮ್ ಗ್ರಂಥ್ ಬೋಲ್ ರಾಧ ಬೋಲ್, ದೀವಾನ, ಪೋಷಕ ನಟರಾಗಿ ಅಗ್ನೀಪಥ್, ಪಟಿಯಾಲ ಹೌಸ್, ಹಮ್ ತುಮ್, ಫನಾ, ನಮಸ್ತೇ ಲಂಡನ್, ಲವ್ ಆಜ್ ಕಲ್, 102 ನಾಟೌಟ್, ದಿ ಬಾಡಿ, ಜಬ್ ತಕ್ ಹೇ ಜಾನ್ ಇನ್ನೂ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ರಾಜೇಶ್ ಖನ್ನಾ, ಅಕ್ಷಯ್ ಖನ್ನಾ ಮತ್ತು ಐಶ್ವರ್ಯ ರೈ ರವರನ್ನು ಸೇರಿಸಿಕೊಂಡು “ಆ ಅಬ್ ಲೌಟು ಚಲೆ ” ಚಿತ್ರ ನಿದೇ೯ಶನ ಮಾಡಿರೋದು ಹೆಮ್ಮೆಯ ವಿಷಯ.
ಇವರ ಚಿತ್ರರಂಗದ ಸಾಧನೆಗೆ ಪ್ರಶಸ್ತಿಗಳು ಇವರ ಮಡಿಲಿಗೇರಿವೆ.
🦆ಮೆರಾ ನಾಮ್ ಜೋಕರ್ ಚಿತ್ರದ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ.
🐧ಬಾಬಿ ಚಿತ್ರದ ಅತ್ಯುತ್ತಮ ನಟ ಪ್ರಶಸ್ತಿ ಫಿಲಂ ಫೇರ್ ರವರಿಂದ.
🌺ಜೀವಮಾನ ಸಾಧನೆಗೆ ಫಿಲಂ ಫೇರ್ ಪ್ರಶಸ್ತಿ.
🐔ರಷ್ಯಾ ಸಕಾ೯ರದಿಂದ ಸಿನಿಮಾ ಗೌರವ ಪ್ರಶಸ್ತಿ.
🌹ಜೀ ಸಿನಿ ಪ್ರಶಸ್ತಿ ಅತ್ಯುತ್ತಮ ಜೋಡಿ ನೀತು ಸಿಂಗ್ ಜೊತೆ.
🦄ಅತ್ಯುತ್ತಮ ಖಳನಟ ಅಗ್ನೀಪಥ್ ಚಿತ್ರಕ್ಕೆ ಟೈಮ್ಸ್ ಆಫ್ ಇಂಡಿಯಾ ವತಿಯಿಂದ.
🌸ಕಪೂರ್ ಆಂಡ್ ಸನ್ಸ್ ಚಿತ್ರಕ್ಕೆ ಅತ್ಯುತ್ತಮ ಪೋಷಕ ನಟ ಮತ್ತು ಹಾಸ್ಯ ನಟ ಪ್ರಶಸ್ತಿ ಜೀ ಸಂಸ್ಥೆಯಿಂದ.
ಇವರ ಮಡದಿ ನೀತು ಸಿಂಗ್(ನಟಿ), ಇವರಿಗೆ ಮಗ ಮತ್ತು (ನಟ) ರಣ್ಬೀರ್ ಕಪೂರ್ ಹಾಗೂ ಮಗಳು ರಿಧಿಮಾ ಕಪೂರ್.
ಇನ್ನೊಬ್ಬರು “ಇಫಾ೯ನ್ ಖಾನ್ “ಥಿಯೇಟರ್ ನಿಂದ ಬಂದು ಬಾಲಿವುಡ್, ಹಾಲಿವುಡ್ ,ಬ್ರಿಟಿಷ್ ಮತ್ತು ಅಮೇರಿಕನ್ ಚಿತ್ರರಂಗದ ವರೆಗೂ ತಮ್ಮ ಕಲೆಯನ್ನು ಪಸರಿಸಿದ್ದಾರೆ, ಗಮನಾರ್ಹ ವಿಷಯವೆಂದರೆ ಇವರು ನಮ್ಮ ಕನ್ನಡ ಚಿತ್ರ “ಲೂಸಿಯಾ” ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ರವರ ಕನಸು ನನಸಾಗಲಿಲ್ಲ ಇವರನ್ನು ಕನ್ನಡಕ್ಕೆ ಕರೆತರುವುದು ಸಫಲವಾಗಿಲ್ಲ, ಭಾರೀ ಯಶಸ್ಸು, ಹೆಸರು ಗಳಿಸಿ ಅಭಿಮಾನಿಗಳನ್ನು ಅಗಲಿದ್ದಾರೆ.
ಇವರ ನಟನೆಗೆ ಸಾಕ್ಷಿ ಇವರಿಗೆ ದೊರೆತ ಪ್ರಶಸ್ತಿಗಳು..
🌺ಹಾಸಿಲ್ ಚಿತ್ರದ ಅತ್ಯುತ್ತಮ ಖಳನಟ ಪ್ರಶಸ್ತಿ ಫಿಲಂ ಫೇರ್ ವತಿಯಿಂದ.
🌸ಲೈಫ್ ಇನ್ ಎ ಮೆಟ್ರೋ ಚಿತ್ರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಫಿಲಂ ಫೇರ್ ವತಿಯಿಂದ.
🌹ಲಂಚ್ ಬಾಕ್ಸ್ ಚಿತ್ರದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ಏಷಿಯನ್ ಫಿಲಂ ರವರಿಂದ.
💐ಹಿಂದಿ ಮೀಡಿಯಂ ಚಿತ್ರದ ನಟನೆಗೆ ಅತ್ಯುತ್ತಮ ನಟ ಫಿಲಂ ಫೇರ್ ಪ್ರಶಸ್ತಿ.
🦆ಭಾರತ ಸರ್ಕಾರದ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಇವರ ಕಲಾಸೇವೆಗೆ.
ಸ್ಲಮ್ ಡಾಗ್ ಮಿಲೇನಿಯರ್, ದಿ ಲಂಚ್ ಬಾಕ್ಸ್, ಪೀಕು, ತಲ್ವಾರ್, ಸಲಾಂ ಬಾಂಬೆ, ಹಾಸಿ, ಮಕ್ಬೂಲ್, ಲೈಫ್ ಇನ್ ಎ ಮೆಟ್ರೋ, ದಿ ಅಮೇಜಿಂಗ್ ಸ್ಪೈಡರ್ ಮ್ಯಾನ್, ಗುಂಡೇ, ಹೈದರ್, ಜುರಾಸಿಕ್ ವಲ್ಡ್೯, ಹಿಂದಿ ಮೀಡಿಯಂ, ಅಂಗ್ರೇಜಿ ಮೀಡಿಯಂ ಇನ್ನೂ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ಈ ಇಬ್ಬರನ್ನೂ ಭಾರತೀಯ ಚಿತ್ರರಂಗ ಕಳೆದುಕೊಂಡಿರುವುದು ತುಂಬಾ ವಿಷಾದನೀಯ😥
“ಮನುಷ್ಯನಾಗಿ ಹುಟ್ಟಿದ ಮೇಲೆ ಒಂದಲ್ಲ ಒಂದು ದಿನ ಯಾರೇ ಆಗಲಿ ತಮ್ಮ ಕತ೯ವ್ಯ ಮುಗಿಸಿಕೊಂಡು ಹೋಗಬೇಕು ಸಹಜ ಕೂಡ ಆದರೆ ನಾವು ಇದ್ದಷ್ಟು ಒಳ್ಳೆಯ ಹೆಸರು ಮಾಡಿ ಹೋಗಬೇಕು”
ರೊಮ್ಯಾಂಟಿಕ್ ಹೀರೋ ರಿಷಿ ಕಪೂರ್ ತಾವು ಆಸ್ಪತ್ರೆಯಲ್ಲಿದ್ದಾಗ ಅವರನ್ನು ನೋಡಿಕೊಳ್ಳುತ್ತಿದ್ದ ಡಾಕ್ಟರ್ ಅವರ ಚಿತ್ರದ ಹಾಡಿನ ಸಾಲುಗಳಿಂದ ಅವರನ್ನು ಖುಷಿ ಪಡಿಸಿ ನಗಿಸುವ ಪ್ರಯತ್ನ ಮಾಡಿದ್ದಾರೆ,
ಇಬ್ಬರು ಕುಟುಂಬದವರಿಗೂ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಆಶಿಸೋಣ 🙏