ಲಿವಿಂಗ್ ಲೆಜೆಂಡ್ ಶಿವಣ್ಣ @ 58

( ಮುಂದುವರೆದ ಭಾಗ )

ಟಾಪು ಟಾಪು ಅಂತ ಭ್ರಮೆನಲ್ಲಿ ಟಾಪಾಗಿದಿವಿ ಅನ್ಕೊಳೊರು ಒಂದ್ಸಲ ಕೇಳಿ‌‌…

 2000 ರ ನಂತರ ಈ ಜಗತ್ತಿಗೆ ಬಂದು ಕಣ್ಬಿಟ್ಟ ಮಕ್ಕಳಿಗೆ ಸಿನಿಮಾ ಅನ್ನೋ ಪದ ಅರ್ಥವಾಗೋ ಅಷ್ಟರಲ್ಲಿ ಕಡಿಮೆ ಅಂದ್ರು 10 ರಿಂದ 15 ವಯಸ್ಸಿಗೆ ತಲುಪಿರ್ಬೇಕು… ಅಷ್ಟರಲ್ಲಿ ಶಿವಣ್ಣ ಅನ್ನೋ ಶ್ರೇಷ್ಟ ನಟ ಬಾಕ್ಸ್ ಆಫೀಸ್ ನ ಬ್ರಹ್ಮನಾಗಿ ದಾಖಲೆಗಳ ಸೃಷ್ಟಿಕರ್ತನಾಗಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರ್ತಾರೆ….

ಶಿವಣ್ಣ ಇಂಡಸ್ಟ್ರಿ ಗೆ ಬಂದದ್ದು 1986 ರಲ್ಲಿ ಅಂದ್ರೆ ಶಿವಣ್ಣನಿಗೆ ಅಂದಿನ 15 ರಿಂದ 20 ವರ್ಷದ ಹುಡುಗರು ಮತ್ತು ಕನ್ನಡ‌ ಚಿತ್ರರಂಗದಲ್ಲಿ ಒಂದು ಹೊಸ ಮುಖವನ್ನು ನೋಡಲು ಕಾಯ್ತಿದ್ದ ಸಿನಿ ರಸಿಕರಿಗೆಲ್ಲಾ ಶಿವಣ್ಣ ನೆಚ್ಚಿನ ನಟನಾಗಿ ಅಭಿನಾನಿಗಳ ಹೃದಯ ಸಾಮ್ರಾಜ್ಯದ ಅರಸನಾಗ್ತಾರೆ… ರಾಜ್ ಕುಮಾರ್ ವಿಷ್ಣುವರ್ದನ್ ಅಂಬರೀಶ್ ಶಂಕರ್ ನಾಗ್ ರವಿಚಂದ್ರನ್ ಅನಂತ್ ನಾಗ್ ಶ್ರೀನಾಥ್ ರಂತಹ ಗಟಾನುಗಟಿಗಳ‌ ಮಧ್ಯೆ  ಸತತವಾಗಿ ತನ್ನ 3 ಸಿನಿಮಾಗಳನ್ನು ಸಿಲ್ಬರ್ ಜೂಬ್ಲಿ ಆಚರಸಿಕೊಂಡ ಭಾರತೀಯ ಚಿತ್ರರಂಗದ ಏಕೈಕ ನಟ ಶಿವಣ್ಣ

ಈಗ ನಾವು ಮಾತಾಡೋ ಬಾಕ್ಸ್ ಆಫೀಸ್, ಮೊದಲ ವಾರದ‌ ಕಲೆಕ್ಷನ್, ಕೋಟ್ಯಾಂತರ ಹಣ, ಅಂತರರಾಜ್ಯಗಳಲ್ಲಿ ಬಿಡುಗಡೆ, ದಾಖಲೆ ಕಲೆಕ್ಷನ್, 1 ವರ್ಷ ಓಡಿದ ಸಿನಿಮಾ ಹೀಗೆ ಮುಂತಾದ ಮಾತುಗಳು ಹುಟ್ಡಿದ್ದೇ ಶಿವಣ್ಣನ ಸಿನಿಮಾಗಳಿಂದ ಶಿವಣ್ಣನ ಅಭಿಮಾನಿಗಳಿಂದ….

💐ನಮ್ ಹೀರೋಗೆ YouTube Views ಜಾಸ್ತಿ, ನಮ್ ಹೀರೋಗೆ Facebook Likes ಜಾಸ್ತಿ ನಮ್ ಹೀರೋಗೆ Followers ಜಾಸ್ತಿ ಅಂತ ಹೊಡ್ಕೊಳೊ ತುಂಡೈಕ್ಳುಗಳು ಒಂದನ್ನ ಅರ್ಥ ಮಾಡ್ಕೊಬೇಕು ಸೋಶಿಯಲ್‌ ಮೀಡಿಯಾಗಳು ಹುಟ್ಟಿದ್ದು ನೀವು ಈ ಜಗತ್ತಿಗೆ ಕಳಚ್ಕೊಂಡು ನೀವು ಬೆಳೆದು ನಿಂತ ಮೇಲೆ ಅಂದ್ರೆ 7-8 ವರ್ಷಗಳಿಂದೀಚೆಗೆ… 1986 ರಲ್ಲಿದ್ದ 70% ಜನರು ಮತ್ತು ಶಿವಣ್ಣನ ಅಭಿಮಾನಿಗಳೆಲ್ಲಾ ಇಂದಿನ Child ಚಪಾತಿಗಳ ಜನಕರು… ಅಂತ ಎಷ್ಷೋ ಲಕ್ಷಾಂತರ ವಯಸ್ಕ Technology ಅರಿಯದ ಬಳಸದ ಶಿವಣ್ಣನ ಅಭಿಮಾನಿಗಳು ಇಂದು ತಮ್ನ ಹೆಂಡತಿ-ಮಕ್ಕಳೆಂಬ ಸಂಸಾರದ‌ ಜಂಜಾಟದಲ್ಲಿ ಜವಾಬ್ದಾರಿಯುತ ಜೀವನದಲ್ಲಿ ಅವರಿಗೆ‌‌ ನಾವು ನೀವು ಬಳಸೋ Facebook, Twitter, YouTube, ETC ಇವುಗಳ ಮೇಲೆ ಆಸಕ್ತಿ ಕಡಿಮೆ. 1st day 1st show ನೋಡೊಕೆ ಕೆಲಸ ಬಿಟ್ಟು‌ ಬಂದು ಕೂರೊ ನೋಡೊ ಸ್ಥಿತಿಯಲ್ಲಿ ಅವರಿರಲ್ಲ… ಹಾಗಾಗಿ 1st day collection, YouTube Views, Likes, Followers ಅಂತ Comparison ಮಾಡೋದ್ರಲ್ಲಿ ಅರ್ಥವಿಲ್ಲ… ಅಂತ ನೂರಾರು ದಾಖಲೆಗಳನ್ನೆಲ್ಲಾ‌ ನೋಡಿ ಮಾಡಿ ಇಂದು‌ ಮಕ್ಕಳ ಟೊಳ್ಳು ಹಾರಾಟ ಕೂಗಾಟಗಳನ್ನ ನೋಡಿ‌ ಹುಸಿನಗುವಿನಲ್ಲಿ ನಗೋರು ಶಿವಣ್ಣನ ಅಭಿಮಾನಿಗಳು.

80 ರ ದಶಕದ ನಟ

90 ರ ದಶಕದ‌ ನಟ

20 ದಶಕದ ನಟ

Still 21ದಶಕದ ನಟ

🐎Classical Dancer ಆಗಿ ಬೆಳ್ಳಿ ತೆರೆಮೇಲೆ Dancing Star ಅನ್ನಿಸಿ‌ಕೊಂಡ ಏಕೈಕ‌ ನಟ

👒ಮೊದಲ 3 ಸಿನಿಮಾಗಳು ಸಿಲ್ವರ್ ಜೂಬ್ಲಿ

😍ಹೊರರಾಜ್ಯದಲ್ಲಿ 50 ದಿನಗಳನ್ನು ಪೂರೈಸಿದ ಮೊದಲ ಕನ್ನಡ ಸಿನಿಮಾ “ಆನಂದ್”

☘️ಶಿವಣ್ಣನ ಹೇರ್ ಸ್ಟೈಲ್ ಅಂದಿನ ಆಲ್ ಟೈಮ್ ಫೇವರೇಟ್..

🌺ಶಿವಣ್ಣನ “ಓಂ” ಚಿತ್ರವು 500+ ಬಾರಿ Re-Release ಆದ ಭಾರತದ ಏಕೈಕ ಸಿನಿಮಾ..

🌲ರೌಡಿಸಂ ಚಿತ್ರಗಳಲ್ಲಿ ಲಾಂಗ್ (ಮಚ್ಚು) ಬಳಸಿದ ಮೊದಲ ಭಾರತೀಯ ನಟ..

🦆”ಗಂಧದಗುಡಿ-2″ ಮೈಸೂರಿನ

6 ಥಿಯೇಟರ್ ನಲ್ಲಿ ರಿಲೀಸ್ ಆದ ಮೊದಲ ಕನ್ನಡ ಚಿತ್ರ..

🦃ಮೊದಲಬಾರಿ 10 ಕೋಟಿ ಇಂದ 25 ಕೋಟಿ‌ Budget ನ ಸಿನಿಮಾಗಳನ್ನು ಕೊಟ್ಟ ಮೊದಲ‌ ನಟ..

🐿ರಾಜ್ ಕುಮಾರ್ ಅವರ ನಂತರ ಸರಾಸರಿ ಅತಿಹೆಚ್ಚು ಹಿಟ್ ಸಿನಿಮಾ‌ ಕೊಟ್ಟ ನಟ

🦚”ಜನುಮದ‌ ಜೋಡಿ” ಒಂದು ವರ್ಷ 3 ಥಿಯೇಟರ್ಗಳಲ್ಲಿ‌ ಹೋಡಿದ ಮೊದಲ ಸಿನಿಮಾ

🦜”ಜನುಮದ ಜೋಡಿ” ಅಮೇರಿಕಾದ ಯೂನಿವರ್ಸಿಟಿಯೊಂದರಲ್ಲಿ ಬಳಕೆಯಾಗುತ್ತಿರುವ ಮೊದಲ‌ ಕನ್ನಡ‌ ಸಿನಿಮಾ..

🐥ಮೊದಲ ವಾರದಲ್ಲಿ 2.5 crore Collection ಮಾಡಿದ ಮೊದಲ ಕನ್ನಡ‌ ಸಿನಿಮಾ “AK.47”

🌻16 ಥಿಯೇಟರ್ ಗಳಲ್ಲಿ 100 ದಿನಗಳನ್ನು ಪೂರೈಸಿದ ಮೊದಲ‌ ಕನ್ನಡ ಸಿನಿಮಾ “ಜೋಗಿ”

🌷ಪೂರ್ವ ಬೆಂಗಳೂರಿನಲ್ಲಿ 100 ದಿನ‌ ಓಡಿದ ಸಿನಿಮಾ ಕೊಟ್ಟ ಮೊದಲ‌ ಏಕೈಕ ನಟ

🌳ವಿಜಯಪುರ & ಗೌರಿಬಿದನೂರು (ತೆಲುಗು ಏರಿಯಾ) ಗಳಲ್ಲಿ 100 ದಿನ ಓಡಿದ ಸಿನಿಮಾ‌ ಕೊಟ್ಟ ಮೊದಲ ಏಕೈಕ ನಟ..

🌸ಡಾ. ರಾಜ್ ಕುಮಾರ್ ನಂತರ ಅಭಿಮಾನಿಗಳಿಂದ ಅತಿ‌ಹೆಚ್ಚು ಬಿರುದುಗಳನ್ನು ಪಡೆದ ಏಕೈಕ ನಟ…

🦄ತನ್ನ 54ನೇ ವಯಸ್ಸಿನಲ್ಲಿ ದೇಹವನ್ನು ದಂಡಿಸಿ ಸಿನಿಮಾಗೋಸ್ಕರ Six Pack ಮಾಡಿಕೊಂಡ ಮೊದಲ‌ ಭಾರತೀಯ‌ ನಟ…

🦆”ಭಜರಂಗಿ” ಕೆ.ಜಿ.ರೋಡ್‌ನಲ್ಲಿ ಫ್ಯಾನ್ ಶೋ Trend ಆರಂಬಿಸಿದ ಮೊದಲ ಕನ್ನಡ‌ ಸಿನಿಮಾ…

🌴ತನ್ನ ಎಲ್ಲಾ ಅಭಿಮಾನಿಗಳನ್ನು ಮನೆಯೊಳಗೆ ಬಿಟ್ಟುಕೊಳ್ಳೋ ಏಕೈಕ ಭಾರತೀಯ ನಟ..

🍩ಸಿನಿಮಾಗಳಲ್ಲಿ ಶಿವಣ್ಣನ Entry ಗೆ ಚಿಲ್ಲರೆ ಕಾಯನ್ಸ್ ಎಸೆಯೋ ಟ್ರೆಂಡ್ ಹುಟ್ಟಿದ್ದು ಶಿವಣ್ಣನ ಅಭಿಮಾನಿಗಳಿಂದ…

🍟Screen ಮುಂದೆ ಹೋಗಿ ಕುಣಿಯೋ Trend ಹುಟ್ಟಿದ್ದೆ ಶಿವಣ್ಣನ ಅಭಿಮಾನಿಗಳಿಂದ..

ಇಂತ ಸಾವಿರಾರು ಉದಾಹರಣೆಗಳು, ನೂರಾರು ದಾಖಲೆಗಳು ಸಿಕ್ತವೆ.

( ಮುಂದುವರೆಯುವುದು )

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply