ಜುಲೈ 28ರೆಂದು ಬಿಡುಗಡೆಗೆ ಸಿದ್ದವಾಗಿರುವ ವಿಕ್ರಾಂತ್ ರೋಣ ಚಿತ್ರದ ಟ್ರೈಲರನ್ನು ಬಿಡುಗಡೆಗೊಳಿಸಿದ್ದಾರೆ, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಚಿತ್ರವಾಗಿರುವ ವಿಕ್ರಾಂತ್ ರೋಣ ಸಿನೆಮಾವನ್ನು ನಾವು 3D ಯಲ್ಲಿ ನೋಡಬಹುದು.
ಬಹುತಾರಾಗಣವನ್ನು ಹೊಂದಿರುವ ಈ ಚಿತ್ರದಲ್ಲಿ ಕಿಚ್ಚ ಸುದೀಪ್, ನಿರುಪ್ ಭಂಡಾರಿ, ರವಿಶಂಕರ್ ಗೌಡ, ನೀತಾ ಅಶೋಕ್, ಜಕ್ಕ್ಯುಲೈ ಫೆರ್ನಾಂಡಿಜ್ , ಮೊದಲಾದವರು ತಾರಾಗಣವಿದೆ, ಈ ಚಿತ್ರವನ್ನು ಅನೂಪ್ ಭಂಡಾರಿಯವರು ನಿರ್ದೇಶನವನ್ನು ಮಾಡಿದ್ದಾರೆ, ಶಾಲಿನಿ ಮಂಜುನಾಥ್ ಮತ್ತು ಜಾಕ್ ಮಂಜುರವರು ಚಿತ್ರದ ನಿರ್ಮಾಪಕರಾಗಿದ್ದಾರೆ,
ಈ ಚಿತ್ರಕ್ಕೆ ಬಿ ಅಜನೀಶ್ ಲೋಕನಾಥ್ ರವರು ಸಂಗೀತವನ್ನು ನೀಡಿದ್ದಾರೆ, ನೃತ್ಯ ಸಂಯೋಜನೆಯನ್ನು ಜಾನಿ ಮಾಸ್ಟರ್ ನೀಡಿದ್ದಾರೆ, ಈಗಾಗಲೇ ರಾ ರಾ ರಕ್ಕಮ್ಮ ಗೀತೆಯು ಎಲ್ಲಾ ಕಡೆ ಹೆಚ್ಚು ಸೌಂಡ್ ಮಾಡುತ್ತಿದೆ, ವಿಕ್ರಾಂತ್ ರೋಣ ಚಿತ್ರದ ಟ್ರೈಲರ್ ರೋಮಾಂಚನದಿಂದ ಕೂಡಿದೆ.
ಟ್ರೈಲರ್ನಲ್ಲಿ ಸಿನಿಮಾದ ದೃಶ್ಶಗಳು ಅದ್ಭುತವಾಗಿ ಮೂಡಿಬಂದಿದೆ, ಎಲ್ಲರ ಕುತೂಹಲವು ಹೆಚ್ಚಾಗಿದೆ, ಎಲ್ಲರ ಚಿತ್ತ ಈಗ ಸಿನಿಮಾದ ಬಿಡುಗಡೆಯ ಮೇಲಿದೆ, ಒಟ್ಟಿನಲ್ಲಿ ಚಿತ್ರವೂ ಬಿಡುಗಡೆಯಾಗಿ ಶತದಿನೋತ್ಸವ ಆಚರಿಸಲೆಂದು ಚಿತ್ರೋದ್ಯಮ,ಕಾಂ ಆಶಿಸುತ್ತದೆ.