ಜ್ಞಾನಪೀಠ ಪ್ರಶಸ್ತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು, ವರಕವಿ ಬೇಂದ್ರೆ ಯವರಿಂದ ‘ಯುಗದ ಕವಿ ಜಗದ ಕವಿ ‘ ಎನಿಸಿಕೊಂಡವರು.
ಒಂದು ಪುಟ್ಟ ಹಳ್ಳಿಯಲ್ಲಿ (ಕುಪ್ಪಳ್ಳಿ) ಹುಟ್ಟಿ ಬೆಳೆದ ನಮ್ಮ ನಿಮ್ಮೆಲ್ಲರ ನೆಚ್ಚಿನ ಕನಾ೯ಟಕ ರತ್ನ, ಜ್ಞಾನಪೀಠ, ಪದ್ಮ ಭೂಷಣ, ಪದ್ಮ ವಿಭೂಷಣ ಮತ್ತು” ಏನಾದರೂ ಆಗು ಮೊದಲು ಮಾನವನಾಗು “ಎಂಬ ಸಂದೇಶ ಕೊಟ್ಟ ವಿಶ್ವಮಾನವ ರಾಷ್ಟ್ರಕವಿ ಪ್ರಶಸ್ತಿಗೆ ಭಾಜನರಾದ ಹೆಮ್ಮೆಯ ಕನ್ನಡಿಗರಾದ ಶ್ರೀ. ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು) ರವರಿಗೆ ಜನುಮ ದಿನದ ಜಯಂತಿಯ ನಮನಗಳು 🌹
ಇವರು ಹಲವಾರು ಕ್ಷೇತ್ರಗಳಲ್ಲಿ ತಮ್ಮ ಅಧ್ಬುತ ಸಾಧನೆಯನ್ನು ಮಾಡಿರೋದನ್ನು ಇಲ್ಲಿ ಸ್ಮರಿಸಬಹುದು , ಕವಿ, ಕಾದಂಬರಿಕಾರರು, ಪ್ರೊಫೆಸರ್ ಕೂಡ ಆಗಿದ್ದರು. ಇವರು ಬರೆದಿರುವ ಹಲವಾರು ಪುಸ್ತಕಗಳು ಜನಮಾನಸದಲ್ಲಿ ಉಳಿದಿದೆ,
👉ಹಿಂದೂ ಪುರಾಣ : ಶ್ರೀರಾಮಾಯಣ ದರ್ಶನಂ, ಚಿತ್ರಾಂಗದಾ.
👉ಕಾದಂಬರಿಗಳು : ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮಧುಮಗಳು
👉ಇವರ ಜೀವನಚರಿತ್ರೆ : ನೆನಪಿನ ದೋಣಿಯಲ್ಲಿ
👉ನಾಟಕಗಳು : ಬಿರುಗಾಳಿ, ಮಹಾರಾತ್ರಿ, ರಕ್ತಾಕ್ಷಿ, ಯಮನ ಸೋಲು, ಚಂದ್ರ ಹಾಸ ಇನ್ನೂ ಮುಂತಾದವು.
👉ಬಯೋಗ್ರಫಿ :ಸ್ವಾಮಿ ವಿವೇಕಾನಂದ, ಶ್ರೀ ರಾಮಕೃಷ್ಣ ಪರಮಹಂಸ.
👉ಮಕ್ಕಳಿಗೆ ಕಥೆ ಮತ್ತು ಕವನ : ಬೊಮ್ಮನಹಳ್ಳಿಯ ಕಿಂದರಿಜೋಗಿ, ಮೇಘಪುರ, ನನ್ನ ಮನೆ, ನನ್ನ ಗೋಪಾಲ, ಪಾಂಚಜನ್ಯ, ಪ್ರೇಮ ಕಾಶ್ಮೀರ, ಆಮಲನ ಕಥೆ, ಸಾಹಸ ಪಾವನ,
👉ಚಲನಚಿತ್ರ :ಕಾನೂರು ಹೆಗ್ಗಡತಿ (ಗಿರೀಶ್ ಕಾರ್ನಾಡ್ ನಿದೇ೯ಶನ)
👉ಕಥಾ ಸಂಕಲನ : ಸನ್ಯಾಸಿ ಮತ್ತು ಇತರೆ ಕಥೆಗಳು, ನನ್ನ ಮನೆ ಮತ್ತು ಇತರೆ ಕಥೆಗಳು.
1937 ಏಪ್ರಿಲ್ 30 ರಂದು ಹೇಮಾವತಿಯವರನ್ನು ಕೈ ಹಿಡಿದರು, ಪೂರ್ಣಚಂದ್ರ ತೇಜಸ್ವಿ ಮತ್ತು ಕೋಕಿಲೋದಯ ಚೈತ್ರ ಎಂಬ ಪುತ್ರರು, ಇಂದುಕಲಾ ಮತ್ತು ತರಿಣಿ ಎಂಬ ಇಬ್ಬರು ಪುತ್ರಿಯರು, ರಾಮಕೃಷ್ಣ ಪರಮಹಂಸರ ಜೀವನದಿಂದ ಪ್ರಭಾವಿತರಾದ ಕುವೆಂಪುರವರು ಸ್ವಾಮಿ ಶಿವಾನಂದರಿಂದ ದೀಕ್ಷೆ ಪಡೆದಿದ್ದಾರೆ.
ಕುವೆಂಪು ರಾಷ್ಟ್ರೀಯ ಪ್ರತಿಷ್ಠಾನ ಇವರು ಜನಿಸಿದ ಮನೆಯನ್ನು ಕವಿಮನೆ ಹೆಸರಿನ ಮ್ಯೂಸಿಯಂ ಮಾಡಿದ್ದಾರೆ, 1987 ರಲ್ಲಿ ಶಿವಮೊಗ್ಗದಲ್ಲಿ ಕುವೆಂಪುರವರ ಗೌರವಾಥ೯ವಾಗಿ ಕುವೆಂಪು ವಿಶ್ವವಿದ್ಯಾಲಯ ಸ್ಥಾಪಿಸಲಾಯಿತು.
ಕುವೆಂಪು ಜೀವನಾಧಾರಿತ ಮುಖ್ಯ ಕೃತಿಗಳು :-
ಅಣ್ಣನ ನೆನಪು – ಪೂರ್ಣಚಂದ್ರ ತೇಜಸ್ವಿ.
ಯುಗದ ಕವಿ -ಕೆ ಸಿ ಶಿವರೆಡ್ಡಿ.
ಮಗಳು ಕೂಡ ಕುವೆಂಪು -ತರಿಣಿ ಚಿದಾನಂದ (ಕುವೆಂಪು ಎರಡನೇ ಪುತ್ರಿ).
ಶಿವಮೊಗ್ಗ ಕಡೆ ಪ್ರವಾಸ ಹೋದಾಗ ಒಮ್ಮೆ ರಾಷ್ಟ ಕವಿ ಮನೆ ಭೇಟಿ ಮಾಡಿ ಆ ಚೇತನರಿಗೆ ನಮಿಸಿ ಬನ್ನಿ, ಆಗ ನಾವು ಹುಟ್ಟಿದಕ್ಕೂ ಸಾಥ೯ಕ, ಮತ್ತೊಂದು ವಿಷಯ ಕೆಲವು ವಷ೯ಗಳ ಹಿಂದೆ ಕುವೆಂಪು ರವರ ಜನುಮ ದಿನದ ಅಂಗವಾಗಿ ನಮ್ಮ ಕಛೇರಿಯಲ್ಲಿ ಛಾಯಾಚಿತ್ರ ಪ್ರದಶ೯ನ ಏಪ೯ಡಿಸದ್ದರು, ಅದರ ಮೇಲ್ವಿಚಾರಣೆ ನನ್ನದಾಗಿತ್ತು, ಉಧ್ಘಾಟನೆಗೆ ಅವರ ಮಗಳು ತರಿಣಿ ಕುವೆಂಪು ಬಂದಿದ್ದರು, ಆ ಅಧ್ಭುತ ಕ್ಷಣ ಮರೆಯಲಾಗದು, ಅವರ ಬಳಿ ನಿಲ್ಲುವುದೇ ನಮ್ಮ ಭಾಗ್ಯ. ಪ್ರದಶ೯ನ ತುಂಬಾ ಚೆನ್ನಾಗಿ ನಡೆಯಿತು.
ಇವರು ಬರೆದಿರುವ ಮರೆಯಲಾಗದ ಸಾಲುಗಳು ನೆನೆಯುವುದಾದರೆ :-
💛❤ಎಲ್ಲಾದರೂ ಇರು ಎಂತಾದರೂ ಇರು
ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤
💜ಜೈ ಭಾರತ ಜನನಿಯ ತನುಜಾತೆ
ಜಯಹೇ ಕನಾ೯ಟಕ ಮಾತೆ
ಜಯ ಸುಂದರ ನದಿ ವನಗಳ ನಾಡೆ
ಜಯಹೇ ರಸ ರುಷಿಗಳ ಬೀಡೆ 💜
💕ನೇಗಿಲ ಹಿಡಿದು ಹೊಲದೊಳು
ಹಾಡುತ ಉಳುವಾ ಯೋಗಿಯ ನೋಡಲ್ಲಿ
ಕಷ್ಟದೊಳನ್ನವ ದುಡಿವನೆ ತ್ಯಾಗಿ
ಸೃಷ್ಟಿನಿಯಮದೊಳಗವನೆ ಭೋಗೀ
ಉಳುವಾ ಯೋಗಿಯ ನೋಡಲ್ಲಿ 💕
ಮಿತ್ರರೇ ಹಾಗೂ ಸಾಹಿತ್ಯಾಭಿಮಾನಿಗಳೆ ನಮ್ಮ ಕನ್ನಡ ನಾಡಿನ ಅಭಿಮಾನಿಗಳ ಆರಾಧ್ಯ ದೈವ ಡಾ ರಾಜ್ ಕುಮಾರ್ ಮತ್ತು ರಾಷ್ಟ್ರಕವಿ ಕುವೆಂಪುರವರ ಸ್ನೇಹ ಬಾಂಧವ್ಯ ಎಂಥದು ಎಂಬುದು ನಿಮಗೆ ತಿಳಿದಿದೆ, ಅದರಲ್ಲೂ ಎರಡು ವಿಷಯ ನಿಮ್ಮ ಹತ್ತಿರ ಹಂಚಿಕೊಳ್ಳಬಯಸುವೆ.
❤ ಕನ್ನಡ ರಾಜ್ಯೋತ್ಸವ ಬಂದರೆ ಕನ್ನಡದ ಹಬ್ಬ ಎಂದೂ ಮರೆಯದ ಹಾಡು “ಎಲ್ಲಾದರೂ ಇರು ಎಂತಾದರೂ ಇರು” ಈ ಗೀತೆ ಹಾಡಿರೋದು ನಮ್ಮ ಗಾನಗಂಧವ೯ರು, ಅಣ್ಣಾವೃ ಅವರ ಮನೆಗೆ ಭೇಟಿ ನೀಡಿದಾಗ ಅವರನ್ನು ಅಭಿನಂದಿಸಿದ್ದಾರೆ .
💜ಅಣ್ಣಾವ್ರಿಗೆ ಕನಾ೯ಟಕ ರತ್ನ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಕುವೆಂಪು ರವರ ಜೊತೆ ಪಡೆದದ್ದು ಆ ಮಹಾನ್ ಚೇತನಕ್ಕೆ ನೀಡಿದ ಗೌರವ.
ಕೊನೆಯ ಮಾತು -ಆಲದಮರದ ಬಗ್ಗೆ ಎಷ್ಟು ಹೇಳಿದರೂ ಸಾಲದು, ಹೇಳುತ್ತಾ ಹೋದರೆ ವಿಷಯಗಳು ಮುಗಿಯುವುದಿಲ್ಲ, ಕನ್ನಡ ನಾಡು ಉಸಿರಿರೊವರೆಗೂ ಇವರ ಸಾಧನೆ ಎಂದಿಗೂ ಅಜರಾಮರ. ಅವರು ಹಾಕಿಕೊಟ್ಟ ಸಂದೇಶವನ್ನು ನಾವು ಪಾಲಿಸುವ ಪ್ರಯತ್ನ ಮಾಡಿದರೆ ಸಾಕು. ಇಲ್ಲಿ ಕೆಲವು ವಿಚಾರಗಳು ಮಾತ್ರ ತಿಳಿಸಲು ಪ್ರಯತ್ನಿಸಿರುವೆ.
“ಓ ನನ್ನ ಚೇತನಾ ಆಗು ನೀ ಅನಿಕೇತನ, ಓ ನನ್ನ ಚೇತನಾ ಆಗು ನೀ ಅನಿಕೇತನ “