“Orphan” English

ಕೆಲವು ಸಿನೆಮಾಗಳು ಹೇಗಿರುತ್ತವೆ ಎಂದರೆ, ‘ಈ ಸಿನೆಮಾ ಹೇಗಿದೆ?’ ಅಂತ ಯಾರಾದರೂ ಕೇಳಿದಾಗ ‘ಸಕತ್ತಾಗಿದೆ’ ಅನ್ನಬಹುದೇ ಹೊರತೂ ‌ಮತ್ತೇನೂ ವರ್ಣಿಸಲು ಸಾಧ್ಯವಿಲ್ಲ. ಯಾಕೆಂದರೆ ವರ್ಣಿಸಲು ಪದಗಳೇ ಇರೋಲ್ಲ.

“Orphan” ಸಹ ಅದೇ ಕ್ಯಾಟೆಗರಿ.

ಸುಮ್ಮನೆ ಸಿನೆಮಾ ನೋಡಿ ವಿಸ್ಮಿತರಾಗಿ ನಾವು ಮೂಕರಾಗಬೇಕಷ್ಟೇ.. ಫಿಲಂ ಹೇಗಿದೆ?? Awesome!! ಆದರೆ ಕಥೆ…?? ಉಹುಂ ಹೇಳಲಾಗೋಲ್ಲ.

ಓರ್ವ ದಂಪತಿಗಳು ತಮಗೆ ಈಗಾಗಲೇ ಎರಡು ಮಕ್ಕಳಿದ್ದರೂ ಮತ್ತೊಂದು ಮಗುವನ್ನು ದತ್ತು ಪಡೆಯಲು ನಿರ್ಧರಿಸುತ್ತಾರೆ. ಕಾರಣವೇನೆಂದರೆ ಅವರ ಮೂರನೇ ಮಗು ಹುಟ್ಟುವ ಮೊದಲೇ ಸತ್ತಿರುತ್ತದೆ. ಆ ದುಃಖ ಮರೆಯಲು ಒಂದು ಅನಾಥ ಮಗುವನ್ನು‌ ದತ್ತು ಪಡೆಯುತ್ತಾರೆ. ಆ ಮಗು ಇವರ ಮನೆಗೆ ಬಂದಂದಿನಿಂದ ಮನೆಯೊಳಗೆ ವಿಚಿತ್ರ ಘಟನೆಗಳು ನಡೆಯತೊಡಗುತ್ತವೆ.

ಓಹ್… ಅವಳು ದೆವ್ವ ಇರಬೇಕು!! ಅಂದ್ಕೊಂಡ್ರಾ?

ಅಲ್ಲ.. ಇದು ಹಾರರ್ ಸಿನೆಮಾ ಅಲ್ಲ. ಬದಲಿಗೆ ಸೈಕಾಲಾಜಿಕಲ್ ಥ್ರಿಲ್ಲರ್ ಇದು. ಮಧ್ಯಂತರದ ನಂತರದ ಘಟನೆಗಳನ್ನು ನೀವು ಕಾಲು ನೀಡಿ, ಆರಾಮವಾಗಿ ಕುಳಿತು ನೋಡಲಾರಿರಿ. ಮುಂದಿನ ತಿರುವುಗಳು ನಮ್ಮನ್ನು ಭಯಾಶ್ಚರ್ಯಕ್ಕೆ ದೂಡಿ ನಾವು ನೋಡುತ್ತಿರುವುದೇ ಸುಳ್ಳೇ ಎನ್ನುವಂತೆ ಮಾಡುತ್ತವೆ. ನಮ್ಮ ಮೆದುಳು ಯೋಚಿಸುವುದನ್ನು ನಿಲ್ಲಿಸಿ ಕಂಗಾಲಾಗುತ್ತದೆ.

ಹೌದು…. ಯಾರೂ ಊಹಿಸಲಾಗದ ತಿರುವು ಇದು!

ಒಂದು ಅನಾಥ ಮಗುವಿಗೆ ಬಾಳು ಕೊಡಲು ಹೊರಟವರು ತಮ್ಮ ನಿಜವಾದ ಮಕ್ಕಳನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ನಾಯಕಿ ತನ್ನ ಚಾತುರ್ಯದಿಂದ ತನ್ನ ಮಕ್ಕಳನ್ನು‌ ಕಾಪಾಡಿಕೊಳ್ಳುತ್ತಾಳೆ. ಆದರೆ ಈ ನಡುವೆ ಆ ಮಕ್ಕಳು ಅನುಭವಿಸಿದ ಮಾನಸಿಕ ಹಿಂಸೆ…?

ಬೀದಿಯಲ್ಲಿದ್ದ ಮಾರಿಯನ್ನು ಮನೆಗೆ ಕರೆದಂತಾಗುತ್ತದೆ ಅವರ ಪರಿಸ್ಥಿತಿ. ಆ Orpgan kid ಅನ್ನು ಇಟ್ಟುಕೊಳ್ಳಲಾರರು, ಬಿಡಲಾರರು ಆ ದಂಪತಿಗಳು.

ಪ್ರತಿಯೊಬ್ಬರ ಅಭಿನಯವೂ ಅಮೋಘ. ವಿಶೇಷವಾಗಿ ಆ ಅನಾಥ ಪಾತ್ರ ಮಾಡಿರುವ ನಟಿ… ಅದ್ಭುತ ಎಂದಷ್ಟೇ ಹೇಳಿದರೆ ಕಡಿಮೆ ಎನಿಸುತ್ತದೆ. ವಿಲನ್ ಪಾತ್ರವಾದರೂ ಆಕೆಯ ನಟನೆಯನ್ನು ಮನಸಾರೆ ಪ್ರಶಂಸಿಸಬಹುದು.

ಈ ಸಿನೆಮಾದಲ್ಲಿ ಹೇಳಲಾಗದ ರಹಸ್ಯ ಏನಿರಬಹುದು ಅಂತ ನೋಡಿಯೇ ತಿಳಿದು ಭಯಾಶ್ಚರ್ಯ ಪಡಬೇಕು… ಅಲ್ಲಿಯೇ ಮಜಾ ಇರುವುದು.. ಅಮೆಜಾನ್ ಪ್ರೈಮಿನಲ್ಲಿ ಲಭ್ಯವಿದೆ.

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply