ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣೆ ದಂಪತಿಗಳಿಬ್ಬರಿಗೂ ಕೋವಿಡ-19 ಸೋಂಕು ಪತ್ತೆಯಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರಲ್ಲು ಸೂಕ್ಷ್ಮ ಲಕ್ಷಣಗಳು ಕಂಡು ಬಂದಿದ್ದು, ತಕ್ಷಣ ಚಿಕಿತ್ಸೆ ಪಡೆದಿದ್ದಾರೆ.
ಚಿರು ಸರ್ಜಾ ಅಗಲಿ ಇನ್ನು ತಿಂಗಳಷ್ಟೇ ಆಗಿದೆ ಆದರೆ ಬೆನ್ನಲ್ಲೇ ಮತ್ತೊಂದು ನೋವಿನ ಸಂಗತಿ ಉಂಟಾಗಿದೆ. ಜೊತೆಗೆ ಅರ್ಜುನ್ ಸರ್ಜಾರ ಮಗಳಾದ, ಖ್ಯಾತ ನಟಿ ಐಶ್ವರ್ಯ ಸರ್ಜಾಗೆ ಕೂಡ ಮೊನ್ನೆಯಷ್ಟೇ ಕೊರೊನಾ ಸೋಂಕು ಧೃಢಪಟ್ಟಿದೆ. ಎಳೆಯದಾದ ಲಕ್ಷಣಗಳು ಕಂಡುಬಂದ ಸಲುವಾಗಿ ಟೆಸ್ಟ್ ಮಾಡಿಸಿಕೊಬ್ಬರಂತೆ. ಈಗ ವೈದ್ಯರ ಸಲಹೆಯ ಅನುಸಾರ ಮನೆಯಲ್ಲೇ ಇದ್ದು ಚಿಕಿತ್ಸೆ ಪಡಿತಿದ್ದಾರೆ..