ಒಂಟಿ ಸಲಗಾನ ಕಂಡ್ರೆ ಸಾಕು, ಅದು ಯಾರೇ ಆಗಲಿ ಭೀತರಾಗಿ ನಾಲ್ಕು ಹೆಜ್ಜೆ ಹಿಂದೆ ಇಡ್ತಾರೆ, ಆದ್ರೆ ಇಲ್ಲಿ ಒಂದು ಸಲಗಾನ ಕಾಣಲು ಜನ ಕಾತುರದಿಂದ ಕಾಯ್ತಿದ್ದಾರೆ..
ಸಾಹಸ ಪ್ರಧಾನ ಸಿನಿಮಾಗಳ ಅಧಿಪತಿಯಾಗಿರುವ ದುನಿಯಾ ವಿಜಯ್ ಇಷ್ಟು ದಿನ ಬ್ಲಾಕ್ ಕೋಬ್ರಾ ಇಮೇಜ್ ಹೊತ್ತು ರಾರಾಜಿಸಿ ಇದೀಗೆ “ಸಲಗ” ಆಗಿ ಕಾಣಲಿದ್ದಾರೆ. ಬೆಂಗಳೂರಿನ ಭೂಗತ ಲೋಕದಲ್ಲಿ ನಡೆದ ನೈಜ ಘಟನೆ, ಅಲ್ಲಿಯ ನೋವು, ರೋಚಕತೆ,ದುಗುಡ ದುಮ್ಮಾನ, ಪ್ರೀತಿ ಮತ್ತು ಪೌರುಷ ಎಲ್ಲವು ಒಳಗೊಂಡಿರುವ ಒಂದು ದೊಡ್ಡ ಕಥೆಯನ್ನ ಸಿನಿಮಾವಾಗಿಸಿದ್ದರೆ ನಟ ದುನಿಯಾ ವಿಜಯ್. ಮೊದಲಬಾರಿಗೆ ನಿರ್ದೇಶನದ ಜವಾಬ್ದಾರಿಯನ್ನ ನಿಭಾಯಿಸಿ ಮನೋರಂಜೆಯ ಆಯಾಮವನ್ನ ಮತ್ತಷ್ಟು ಹಿರಿದಾಗಿಸಲು ಮುಂದಾಗಿದ್ದಾರೆ. ಟಗರು ಖ್ಯಾತಿಯ ಕೆ.ಪಿ ಶ್ರೀಕಾಂತ್ ಸಿನಿಮಾಗೆ ಬಂಡವಾಳ ಹೂಡಿದ್ದು, ಚರಣ್ ರಾಜ್ ಅವರ ಅದ್ಭುತವಾದ ಸಂಗೀತ ಸಂಯೋಜನೆಯಿಂದ ಈಗಾಗ್ಲೇ ಎಲ್ಲಾ ಹಾಡುಗಳು ಸೂಪರ್ ಹಿಟ್ಟಾಗಿ ಜನರ ಬಾಯಲ್ಲಿ ಗುನುಗುತ್ತಿದೆ. ಸಿನಿಮಾದ ಟ್ರೈಲರ್ ಸೂಚಿಸುವಂತೆ ದುನಿಯಾ ವಿಜಯ್ ಸಲಗವಾಗಿ ಮಿಂಚುವ ಓರ್ವ ಅಂಡರ್ ವರ್ಲ್ಡ್ ಪಂಟರ್ ಇವರ ಎದುರು ನಿಂತು ಸೆಡ್ಡು ಹೊಡೆಯುವ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮೊದಲ ಬಾರಿಗೆ ಡಾಲಿ ಧನಂಜಯ್ ನಟಿಸಿದ್ದಾರೆ, ವಿಜಯ್ ಗೆ ಜೋಡಿಯಾಗಿ ನಟಿ ಸಂಜನಾ ಆನಂದ್ ಇರ್ತಾರೆ ಜೊತೆಗೆ ಅಚ್ಚುತ್ ಕುಮಾರ್, ರಂಗಾಯಣ ರಘು ಮತ್ತು ದೊಡ್ಡ ಪಡ್ಡೆ ಹುಡುಗರ ಪಡೆ ಇರುತ್ತದೆ. ಸಂಭಾಷಣೆಗಾರ ಮಾಸ್ತಿ ತಮ್ಮ ಡೈಲಾಗಳಿಂದ ಸನ್ನಿವೇಶವನ್ನು ಚುರುಕಾಗಿಸದ್ರೆ ಮತ್ತೊಂದೆಡೆ ಕ್ಯಾಮೆರಾಮೆನ್ ಶಿವ ಸೇನಾ ಅದಕ್ಕೆ ಇನ್ನಷ್ಟು ಬೆರಗನ್ನ ತುಂಬಿಟ್ಟಿದ್ದಾರೆ.
ಸಿನಿಮಾ ಅಂದ್ರೇನೇ ಒಂದು ಸಂಭ್ರಮ, ಕಲೆಯ ಆಚರಣೆ. ಸಿನಿಮಾಮಂದಿರಕ್ಕೆ ಜನರನ್ನ ಹೆಚ್ಚಿನ ಸಂಖ್ಯೆಯಲ್ಲಿ ಕರೆತರಲು ಚಿತ್ರದ ನಿರ್ದೇಶಕರು, ನಾಯಕ ಮತ್ತು ನಾಯಕಿಯ ಸಂದರ್ಶನ ಹಾಗೂ ಸಿನಿಮಾದ ಕುರಿತಾದಂತ ಚರ್ಚೆಗಳಾಗುವುದು ವಾಡಿಕೆ ಆದ್ರೆ ಸಲಗ ಸಿನಿಮಾ ವಿಶಯದಲ್ಲಿ ಒಂದು ಹೊಸ ಪ್ರಯತ್ನ ನಡೆದಿದೆ ಅದುವೆ ಪ್ರೊಮೋಷನ್ ಸಾಂಗ್ “ಟಿನಿಂಗ ಮಿನಿಂಗ ಟಿಶ್ಯಾ”. ಸಿನಿಮಾದ ರುಚಿ ಪರಿಚಯಿಸೋದಕ್ಕೆ ಕರ್ನಾಟಕದ ಸಿದ್ದಿ ಜಾನಪದದ ಗೆತಾಲಾಸ್ಯ ಬಳಕೆಯಾಗಿದ್ದು ಈಗಾಗ್ಲೇ ಎಲ್ಲೆಡೆ ಆ ಹಾಡು ಸಕ್ಕತ್ ಹಿಟ್ಟಾಗಿದೆ.. ಸಿದ್ದಿ ಜನಾ0ಗದ ಕಲಾವಿದರಾದ ಗೀತಾ ಸ್8ದ್ದಿ ಮತ್ತು ಗಿರಿಜಾ ಸಿದ್ದಿ ಅವರ ಕಂಠ ಸಿರಿಯಲ್ಲಿ, ಸಿದ್ದಿ ಮತ್ತು ಕನ್ನಡ ಭಾಷೆಯ ಮಿಶ್ರತವಾಗಿ ಈ ಹಾಡು ಮೂಡಿದೆ. ಸಿನಿಮಾದಲ್ಲಿ ಇದರ ಬಳಕೆ ಎಲ್ಲಿ ಹೇಗೆ ಆಗಿರುತ್ತದೋ ಎಂಬ ಕುತೂಹಲ ಕೂಡ ಉಂಟು ಮಾಡಿದೆ.. ಒಟ್ಟಾರೆಯಾಗಿ ಈ ಸಲಗ ಮನರಂಜನೆಯ ಅಂಬಾರಿ ಹೊತ್ತು ರಾಜ ಬೀದಿಯಲ್ಲಿ ರಾಜ ಗಾಂಭೀರ್ಯದಿಂದ ಸಾಗಲು ಸಿದ್ಧವಾಗಿದೆ.