ಏನೆಂದು ಬರೆಯಲಿ ಇವರ ಬಗ್ಗೆ …..
ಒಬ್ಬ ಸಾಮಾನ್ಯ ಮನುಷ್ಯರನ್ನ ಬಂಗಾರದ ಮನುಷ್ಯ ಮಾಡಿದ ಈ ದೇವರು ,
ಕನ್ನಡ ಚಿತ್ರರಂಗದ ಜನಪ್ರಿಯ ನಿಮಾ೯ಪಕರು,
ಮುದ್ದಾದ ಮೂರು ಮುತ್ತುಗಳನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದವರು,
ಕನ್ನಡ ಚಿತ್ರರಂಗದ ಶಕ್ತಿ ದೇವತೆ ,ಹೊಸ ನಾಯಕಿಯರಿಗೆ ಮೊದಲು ಅವಕಾಶ
ನೀಡುತ್ತಿದ್ದ ವಿಶಾಲ ಹೃದಯದವರು

ಕನ್ನಡ ಚಿತ್ರರಂಗದಲ್ಲಿ ನಿಮಾ೯ಣ, ನಿಮಾ೯ಪಕ ಕ್ಷೇತ್ರದಲ್ಲಿ ಹೆಚ್ಚು ಹೆಸರು ಮಾಡಿರುವ ನಮ್ಮ ನಿಮ್ಮೆಲ್ಲರ ಪ್ರೀತಿಯ ಆರಾಧ್ಯ ದೈವ ಡಾ. ರಾಜ್ ಕುಮಾರ್ ರವರ ಧಮ೯ಪತ್ನಿ , ಚಿತ್ರರಂಗದ ಅನ್ನದಾತರು, ಅಭಿಮಾನಿಗಳ ಪಾಲಿನ ಅಮ್ಮ , ದೊಡ್ಮನೆ ಕುಟುಂದ ಬೆನ್ನೆಲುಬು, ಇಡೀ ಕುಟುಂಬಕ್ಕೆ ದಾರಿದೀಪ ಪಾವ೯ತಮ್ಮ ರಾಜ್ ಕುಮಾರ್ 🙏
ಇವರ ಬಗ್ಗೆ ಹೇಳುತ್ತಿದ್ದರೆ ಪದಗಳು ಸಾಲದು ಈ ಸಂದರ್ಭದಲ್ಲಿ ಅವರು ನಿಮಾ೯ಣ ಮಾಡಿದ ಕೆಲವು ಚಿತ್ರಗಳ ಬಗ್ಗೆ ಒಂದು ನೋಟ….
ಡಾ. ರಾಜ್ ಕುಮಾರ್ ನಟನೆಯ ಚಿತ್ರಗಳು :-
ತ್ರಿಮೂರ್ತಿ ,ಗಿರಿಕನ್ಯೆ ,ಒಲವು ಗೆಲುವು ,ಶಂಕರ್ ಗುರು ,ತಾಯಿಗೆ ತಕ್ಕ ಮಗ ,ರವಿಚಂದ್ರ
ವಸಂತಗೀತ ,ಹಾವಿನಹೆಡೆ ,ನೀ ನನ್ನ ಗೆಲ್ಲಲಾರೆ,ಭಾಗ್ಯವಂತ ,ಹೊಸಬೆಳಕು
ಹಾಲುಜೇನು ,ಚಲಿಸುವ ಮೋಡಗಳು ,ಕವಿರತ್ನ ಕಾಳಿದಾಸ ,ಕಾಮನಬಿಲ್ಲು ,ಭಕ್ತ ಪ್ರಹ್ಲಾದ
ಶ್ರಾವಣ ಬಂತು ,ಸಮಯದ ಗೊಂಬೆ ,ಯಾರಿವನು ,ಅಪೂರ್ವ ಸಂಗಮ ,ಜ್ವಾಲಾಮುಖಿ
ಧೃವತಾರೆ ,ಭಾಗ್ಯದ ಲಕ್ಷ್ಮಿ ಬಾರಮ್ಮ ,ಅನುರಾಗ ಅರಳಿತು ,ಒಂದು ಮುತ್ತಿನ ಕಥೆ
ಶೃತಿ ಸೇರಿದಾಗ ,ಶಿವ ಮೆಚ್ಚಿದ ಕಣ್ಣಪ್ಪ ,ದೇವತಾ ಮನುಷ್ಯ ,ಪರಶುರಾಮ ,ಜೀವನ ಚೈತ್ರ
ಆಕಸ್ಮಿಕ ,ಒಡಹುಟ್ಟಿದವರು ,ಶಬ್ದವೇಧಿ
ಡಾ. ಶಿವರಾಜ್ ಕುಮಾರ್ ನಟನೆಯ ಚಿತ್ರಗಳು :-
ಆನಂದ್, ರಥಸಪ್ತಮಿ, ಆಸೆಗೊಬ್ಬ ಮೀಸೆಗೊಬ್ಬ, ಮನಮೆಚ್ಚಿದ ಹುಡುಗಿ, ಅರಳಿದ ಹೂವುಗಳು, ಅದೇ ರಾಗ ಅದೇ ಹಾಡು, ಸಂಯುಕ್ತ, ಇನ್ಸ್ಪೆಕ್ಟರ್ ವಿಕ್ರಮ್, ರಣರಂಗ, ಮೃತ್ಯುಂಜಯ , ಮಿಡಿದ ಶೃತಿ, ಓಂ, ಚಿಗುರಿದ ಕನಸು, ಮೋಡದ ಮರೆಯಲ್ಲಿ, ಜನುಮದ ಜೋಡಿ, ಹೃದಯ ಹೃದಯ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಚಿತ್ರಗಳು :-
ಅಪ್ಪು, ಅಭಿ, ಆಕಾಶ್, ಅರಸು, ವಂಶಿ, ಜಾಕಿ, ವಂಶಿ , ಹುಡುಗರು, ಅಣ್ಣಾಬಾಂಡ್, ಯಾರೇ ಕೂಗಾಡಲಿ.
ರಾಘವೇಂದ್ರ ರಾಜ್ ಕುಮಾರ್ ನಟನೆಯ ಚಿತ್ರಗಳು :-
ಚಿರಂಜೀವಿ ಸುಧಾಕರ್, ನಂಜುಂಡಿ ಕಲ್ಯಾಣಿ, ಗಜಪತಿ ಗವ೯ಭಂಗ, ಗೆಲುವಿನ ಸರದಾರ, ಸೂತ್ರಧಾರ, ಅನುಕೂಲಕೊಬ್ಬ ಗಂಡ , ಅನುರಾಗದ ಅಲೆಗಳು, ಕಲ್ಯಾಣ ಮಂಟಪ,ನಾವಿಬ್ಬರು ನಮಗಿಬ್ಬರು, ಸ್ವಸ್ತಿಕ್, ಟುವ್ವಿ ಟುವ್ವಿ ಟುವ್ವಿ .
ಎಷ್ಟೋ ಅಬಲೆ ಹೆಣ್ಣು ಮಕ್ಕಳ ಪಾಲಿಗೆ ಆಶ್ರಯ ನೀಡುವ ಸಲುವಾಗಿ ಮೈಸೂರಿನಲ್ಲಿ
“ಶಕ್ತಿ ಧಾಮ” ಸ್ಥಾಪಿಸಿದವರು, ಡಾ. ರಾಜ್ ಕುಮಾರ್ ಸಿವಿಲ್ ಸವಿ೯ಸಸ್ ಸಂಸ್ಥೆಯನ್ನು ಐ. ಎ. ಎಸ್ ಓದುವ ವಿದ್ಯಾರ್ಥಿಗಳು ಪ್ರಯೋಜನ ಪಡೆದು ದೇಶದ ಉನ್ನತಿಗೆ ಸಾಕ್ಷಿಯಾಗಬೇಕೆಂದು ಪ್ರಾರಂಭಿಸಿದವರು.

ಕನ್ನಡ ಚಿತ್ರರಂಗಕ್ಕೆ ಹಲವಾರು ಹೊಸ ಮುಖಗಳನ್ನು ನಟಿಯರಾಗಿ ಪರಿಚಯಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ, ಅವರಲ್ಲಿ ಕೆಲವರು :-
ಸುಧಾರಾಣಿ, ಆಶಾರಾಣಿ, ಮಾಲಾಶ್ರೀ, ಮೋಹಿನಿ, ಪ್ರೇಮ, ಶಿಲ್ಪ, ವಿದ್ಯ ವೆಂಕಟೇಶ್, ರಕ್ಷಿತ, ರಮ್ಯ, ಅನು ಪ್ರಭಾಕರ್ ಮತ್ತು ಕೆಲವರು..
ಒಂದು ಪುಟ್ಟ ಹಳ್ಳಿ “ಸಾಲಿಗ್ರಾಮ ” ದಲ್ಲಿ ಹುಟ್ಟಿ ಬೆಳೆದು ಕನ್ನಡದ ಧೃವತಾರೆ ಅಣ್ಣಾವ್ರನ್ನ ವರಿಸಿ ಅವರ ಸುಖ ದುಃಖ ನೋವು ನಲಿವಿನಲ್ಲಿ ಬೆರೆತು ಅಣ್ಣಾವ್ರ ಸಲಹೆ ಪಡೆದು ಅವರೇ ಧೃಡ ನಿಧಾ೯ರ ಮಾಡಿ ಸ್ವತಂತ್ರವಾಗಿ ಚಿತ್ರಗಳನ್ನು ನಿಮಾ೯ಣ ಮಾಡಿ ಲಾಭ ಮತ್ತು ನಷ್ಟದ ಬಗ್ಗೆ ಲೆಕ್ಕಿಸದೆ ಎಷ್ಟೋ ಕಲಾವಿದರಿಗೆ ಆಶ್ರಯ ನೀಡಿ ಅವರ ಕಷ್ಟಕ್ಕೆ ಸ್ಪಂದಿಸುವ ಮನೋಭಾವ ಹೊಂದುವುದು ತಮಾಷೆಯ ಮಾತಲ್ಲ, ನಿಜಕ್ಕೂ ಇವರ ಧೈರ್ಯ ಮತ್ತು ಸಾಹಸವನ್ನು ನಾವೆಲ್ಲರೂ ಮೆಚ್ಚಲೇಬೇಕು ಏನಂತೀರಿ ಮಿತ್ರರೇ…..?
ಬರುವಂತ ಹೊಸ ನಿಮಾ೯ಪಕರಿಗೆ ಮಾಗ೯ದಶ೯ಕರಾಗಿದ್ದರು ಅಮ್ಮ ಪಾವ೯ತಮ್ಮ ರಾಜ್ ಕುಮಾರ್ ರವರು.
ಇವರಿಗೆ ಸಂದ ಪ್ರಶಸ್ತಿ,ಪುರಸ್ಕಾರ ಹಲವು, ಅವುಗಳಲ್ಲಿ ಕೆಲವು :
ರಾಜ್ಯೋತ್ಸವ ಪ್ರಶಸ್ತಿ
ಸುವಣ೯ ಪ್ರಶಸ್ತಿ ( ಚಿತ್ರರಂಗದ ಸಾಧನೆಗಾಗಿ)
ಕನಾ೯ಟಕ ರಾಜ್ಯ ಸಿನಿಮಾ ಪ್ರಶಸ್ತಿ
ಮೊದಲ ಅತ್ಯುತ್ತಮ ಚಿತ್ರ : ಹಾಲು ಜೇನು ,ಜೀವನ ಚೈತ್ರ.
ಸಾಮಾಜಿಕ ಕಳಕಳಿ ಚಿತ್ರ : ಶಬ್ಧವೇಧಿ
ಅತ್ಯುತ್ತಮ ಚಿತ್ರ : ಬೆಟ್ಟದ ಹೂವು
ಅತ್ಯುತ್ತಮ ಚಿತ್ರ : ಭಾಗ್ಯದ ಲಕ್ಷ್ಮಿ ಬಾರಮ್ಮ
ಅತ್ಯುತ್ತಮ ಚಿತ್ರ : ಜಾಕಿ
ಅತ್ಯುತ್ತಮ ಚಿತ್ರ : ಜನುಮದ ಜೋಡಿ
ಜೀವಮಾನ ಸಾಧನೆ ಪ್ರಶಸ್ತಿ (ಫಿಲ್ಮ್ ಫೇರ್ ಪ್ರಶಸ್ತಿ) ಯನ್ನು ನೀಡಿ ಗೌರವಿಸಲಾಗಿದೆ .
ಕೊನೆಯ ಮಾತು : ಸಾಧನೆ ಮಾಡಲು ಗಂಡು ಹೆಣ್ಣು ಭೇದವಿಲ್ಲ ಸಾಧಿಸುಮ ಧೈರ್ಯ ಛಲವೊಂದಿದ್ದರೆ ಎಂತಹ ಕಾಯ೯ವನ್ನು ಸಾಧಿಸಬಹುದು, ಮಹಿಳೆಯಿಂದ ಏನುಬೇಕಾದರೂ ಮಾಡಬಹುದೆಂದು ತೋರಿಸಿಕೊಟ್ಟವರು ಅಮ್ಮ ಪಾವ೯ತಮ್ಮ ರವರು. ಮತ್ತೊಮ್ಮೆ ಈ ಕರುನಾಡಿನಲ್ಲಿ ಹುಟ್ಟಿ ಬನ್ನಿ ಅಮ್ಮ..
ಚಂದದ ಬರವಣಿಗೆ ಸರ್… ನಿಮ್ಮ ಬರಹಗಳು ಹೀಗೆಯೇ ಮುಂದುವರೆಯಲಿ..
Thank u.
Please tell your friends to read the articles also regularly.
Thank u.
Please tell your friends to read the articles also regularly.