ಹೆಸರೇ ಹೇಳುವಂತೆ ರಾಜ್ (ರಾಜ್ಕುಮಾರ್) ಒಬ್ಬ ಸಿ.ಐ.ಡಿ. ಮಿಲಿಟರಿ ಆಫೀಸರ್ ಮಗ. ರಾಜ್ ತಮ್ಮ ಮೋಹನ್ (ರಂಗ) ಒಬ್ಬ ಪೈಲಟ್. ಅವನು ಕಳ್ಳ ಸಾಗಾಣಿಕೆದಾರರ ಗುಂಪಿಗೆ ಸೇರಿರುತ್ತಾನೆ. ಅಶ್ವತ್ಥ್ ಒಬ್ಬ ದಾನವೀರಶೂರ. ಅವನ ಮಕ್ಕಳು ರೇಣುಕ(ರಾಜಶ್ರೀ), ದೇವಿಕ(ಪ್ರೇಮಲತ). ಅಶ್ವತ್ಥ್ ಒಬ್ಬ ಕಳ್ಳ ಸ್ವಾಮೀಜಿಯ ಶಿಷ್ಯನಾಗಿರುತ್ತಾನೆ. (ದಿನೇಶ್ ಹೊರಗೆ ಸ್ವಾಮಿ, ಒಳಗೆ ಕಳ್ಳ ಸಾಗಣೆದಾರ).
ನೃತ್ಯವೊಂದರಲ್ಲಿ ಭಾಗವಹಿಸುವಾಗ ರೇಣುಕ ಮತ್ತು ರಾಜ್ ಪರಸ್ಪರ ಆಕರ್ಷಿತರಾಗುತ್ತಾರೆ.
ದ್ವಾರಕೀಶ್ಗೆ ಕಿವಿ ಕೇಳಿಸುವುದಿಲ್ಲ. ಕ್ಯಾಟಿ ಹಿಡಿದು ಕಳ್ಳರಿಗೆ ಕಲ್ಲು ಹೊಡೆಯುತ್ತಿರುತ್ತಾನೆ. ಅವನು ರಾಜ್ ಅಸಿಸ್ಟೆಂಟ್ ಆಗುತ್ತಾನೆ.
ಕಥೆಯಲ್ಲಿ ಅನೇಕ ಸಲ ಕಳ್ಳರು ರಾಜ್ಗೆ ಮೋಸ ಮಾಡುತ್ತಾರೆ. ಅವನ ಕಣ್ಣೆದುರೇ ವಜ್ರಗಳ ವಿನಿಮಯ ಆಗುತ್ತದೆ. ಕೆಲವೊಮ್ಮೆ ಸಿಐಡಿ ರಾಜ್ ಅವರುಗಳಿಗೆ ಚಳ್ಳೇಹಣ್ಣು ತಿನ್ನಿಸುತ್ತಾನೆ.
ಅಶ್ವತ್ಥ್ ತಾನು ಸಿಲುಕಿಕೊಂಡ ಬಲೆಯ ಬಗ್ಗೆ ತನ್ನ ಹೆಣ್ಮಕ್ಕಳಿಗೆ ಹೇಳಿದಾಗ ರೇಣುಕಾ ಕಳ್ಳರ ಗುಂಪು ಸೇರಿ, ರಾಜ್ಗೇ ಒಮ್ಮೆ ಮೋಸ ಮಾಡಲು ಯತ್ನಿಸುತ್ತಾಳೆ. ಇನ್ನೊಮ್ಮೆ… ಬೇಡ ಬಿಡಿ. ಬೋರ್ ಆಗದ, ಆಗಿನ ಕಾಲದ ಮುಖ ತೋರಿಸದ ಬಾಸ್ ಇರುವ ಕಥೆ. ನೋಡಿ ಎಂಜಾಯ್ ಮಾಡಬಹುದು.
ಕಥೆಯಲ್ಲಿ ರಾಜ್ ಅನೇಕ ವೇಷಗಳನ್ನು ಧರಿಸುತ್ತಾರೆ. ಒಂದೆರಡು ಹಾಡು ಬಲು ಮಧುರ.
ನನ್ನಲ್ಲೇನೋ ಹೊಸ ಭಾವನೆ… ಎಂತಹ ಮಧುರ ಗೀತೆ! ಪಿಬಿಎಸ್, ಪಿ.ಸುಶೀಲ ಮತ್ತು ಎಸ್ಪಿಬಿ. ಬಾಲು ಧ್ವನಿಯಂತೂ ಎಳೆಯದಾಗಿ ಬಲು ಚೆನ್ನ.
ನೀ ಬಳುಕಿ ಬಳುಕಿ ನಡೆವಾಗ, ಅಮ್ಮ ತಾಯೆ ಅಮ್ಮ ಕಾಯೆ ಪಿ.ಬಿ.ಎಸ್ ಹಾಡುಗಳು.
ಒಂದು ವಿಶಿಷ್ಟ ಹಾಡೆಂದರೆ ‘ನೀ ಆಡುವ ಮಾತು ಕನ್ನಡ’. ಹಾಡಿದ್ದು ಎಸ್ಪಿಬಿ. ಅದಕ್ಕೆ ತುಟಿ ಚಾಲನೆ ಮಾರುವೇಷದ ರಾಜ್! ವಾಹ್! ಇದೊಂದು ವಿಶೇಷ ಗೀತೆ ಎಂದೆನಿಸಿತು ನನಗೆ.