ಸುಗಮ ಸಂಗೀತ ಕ್ಷೇತ್ರದ ದಿಗ್ಗಜರು ಸಿ. ಅಶ್ವಥ್

 ( ಮುಂದುವರೆದ ಭಾಗ )

🌹ಕಾಣದಾ ಕಡಲಿಗೇ ಹಂಬಲಿಸಿದೇ ಮನ, ಕಾಣಬಲ್ಲೆನೇ ಒಂದು ದಿನ ಕಡಲನೂ ಕೂಡಬಲ್ಲೆನೇ  ಒಂದು ದಿನ 🌹

ಇವರ 70 ನೇ ಜನುಮ ದಿನದ ಅಂಗವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭಕ್ಕೆ ಸುತ್ತೂರು ಮಠದ ಸ್ವಾಮೀಜಿ ಮತ್ತು ವೀರೇಂದ್ರ ಹೆಗ್ಗಡೆಯವರು ಬಂದು ಆಶೀವಾ೯ದ ನೀಡಿದರು.

ಇವರು ಮಹಾನ್ ಚೇತನ ಮತ್ತು ಸಾಹಿತಿಗಳಾದ ಶ್ರೀ. ಕುವೆಂಪು, ಕೆ. ಎಸ್. ನರಸಿಂಹ ಸ್ವಾಮಿ, ಹೆಚ್. ಎಸ್. ವೆಂಕಟೇಶ್ ಮೂತಿ೯, ದ. ರಾ. ಬೇಂದ್ರೆ, ಜಿ. ಎಸ್. ಶಿವರುದ್ರಪ್ಪ ಮುಂತಾದವರು ರಚಿಸಿದ ಕವನಗಳನ್ನು ತಮ್ಮ ಅಧ್ಬುತ ರಾಗ ಸಂಯೋಜನೆ ಮಾಡಿ ತಾವು ಹಾಡುತ್ತಿದ್ದರು, ಇವರ ಕೆಲವು ಹಾಡುಗಳನ್ನು ಎಂದಿಗೂ ಮರೆಯಲಾಗದು, ಶುರು ಮಾಡುವ ಮೊದಲಿನಿಂದ ಕೊನೆಯ ಭಾಗದಲ್ಲಿ ಅವರು ಹಾಡುವ ಚಾಕಚಕ್ಯತೆ ಮೆಚ್ಚಲೇಬೇಕು.

❤ಇವರಿಗೂ ಮತ್ತು ನಮ್ಮ ಕರುನಾಡ ಕಲಾ ಪುತ್ರ ಡಾ. ರಾಜ್ ಕುಮಾರ್ ರವರಿಗೂ ಗಾಯನ ಕ್ಷೇತ್ರದಲ್ಲಿ ಅವಿನಾಭಾವ ಸಂಬಂಧ,‌ ಇವರು ಸಂಗೀತ ನಿದೇ೯ಶಿಸಿದ ಆಯ್ದ ಕನ್ನಡ ಭಾವಗೀತೆಗಳ ಸಂಗ್ರಹ “ಕನ್ನಡವೇ ಸತ್ಯ ” ಯಾವುದೇ ಕನ್ನಡ ಕಾಯ೯ಕ್ರಮದಲ್ಲಿ “ಎಲ್ಲಾದರೂ ಇರು ಎಂತಾದರೂ ಇರು ” ಹಾಡು ಕೇಳುತ್ತೇವೆ, ಈ ಹಾಡಿನ ಸಂಗೀತ ನಿರ್ದೇಶಕರು ಇವರೆ, ಇದಲ್ಲದೆ ಅಣ್ಣಾವ್ರ ಗಾಯನದಲ್ಲಿ ಮೂಡಿ ಬಂದ “ಹೊತ್ತಿತೋ ಹೊತ್ತಿತೂ ಕನ್ನಡದ ದೀಪ, ಸಂಜೆಗೆನ್ನ ಪಯಣವೆಂದು, ಅಮೃತವಾಹಿನಿಯೊಂದು ಹರಿಯುತಿದೆ ಮಾನವನ, ಲಘುವಾಗೆಲೆ ಮನ ” ಹಾಡುಗಳು ಎಷ್ಟರ ಕೇಳಿದರೂ ಸಾಲದು❤.

“ಕನ್ನಡವೇ ಸತ್ಯ ” ಅರಮನೆ ಮೈದಾನದಲ್ಲಿ ಏಪ್ರಿಲ್ 23 2005 ರಲ್ಲಿ ನಡೆದ ಅಧ್ಧೂರಿ ಸಮಾರಂಭದಲ್ಲಿ ಇವರ ಅಧ್ಯಕ್ಷತೆಯಲ್ಲಿ ನಡೆದ” ಒಂದು ಲಕ್ಷ”  ಪ್ರೇಕ್ಷಕರ ನಡುವೆ ನಡೆದ ಒಂದು ಐತಿಹಾಸಿಕ ಸಂಗೀತ ಸಂಜೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಡಾ. ರಾಜ್ ಕುಮಾರ್ ರವರ ಕಾಮನಬಿಲ್ಲು ಚಿತ್ರದ ರೈತರ ಕುರಿತಾದ “ಉಳುವಾ ಯೋಗಿಯ ನೋಡಲ್ಲಿ ” ಗೀತೆಗೆ ಅಷ್ಟೇ ಜೀವ ತುಂಬಿ ಹಾಡಿರುವುದನ್ನು ಸ್ಮರಿಸಬಹುದು.

ಇವರು ಹಾಡಿರುವ ಎಷ್ಟೋ ಹಾಡುಗಳು ತುಂಬಾ ಜನಪ್ರಿಯವಾಗಿವೆ, ಕೆಲವು :-

ಶ್ರಾವಣ ಬಂತು ಕಾಡಿಗೆ, ನಿನ್ನೊಲುಮೆಯಿಂದಲೇ, ಸೋರುತಿಹುದು ಮನೆಯ ಮಾಳಿಗಿ, ನೀ ಹಿಂಗ ನೋಡಬೇಡ ನನ್ನ, ಎಲ್ಲೋ ಹುಡುಕಿದೆ ಇಲ್ಲದ ದೇವರ, ಅಮ್ಮ ನಿನ್ನ ಎದೆಯಾಳದಲ್ಲಿ.

ಇವರ ಗಾಯನ ಪಯಣ ಚಲನಚಿತ್ರ ರಂಗದಲ್ಲಿ ಹಲವಾರು ವಿವಿಧ ಪ್ರಕಾರಗಳ ಗೀತೆಗಳನ್ನು ಹಾಡುವುದರ  ಮೂಲಕ  ಪ್ರೇಕ್ಷಕರ ಮನಸ್ಸನ್ನು ಗೆಲ್ಲುವುದರಲ್ಲಿ ಸಾಧ್ಯವಾಯಿತು.

👉ಸಂತ ಶಿಶುನಾಳ ಶರೀಫ, ನಾಗಮಂಡಲ, ಮೈಸೂರು ಮಲ್ಲಿಗೆ, ಚಿನ್ನಾರಿ ಮುತ್ತ, ಕಾಕನ ಕೋಟೆ, ಆಲೆಮನೆ,ಕೊಟ್ರೇಶಿ ಕನಸು, ಸಿಂಗಾರವ್ವ, ಮತದಾನ, ಅನುಪಮ, ಹೊಂಗಿರಣ, ಒಂದು ಮುತ್ತಿನ ಕಥೆ, ಕಾಮನಬಿಲ್ಲು, ಅಮೃತಧಾರೆ, ಸ್ಪಷ೯,ತುತ್ತಾ ಮುತ್ತಾ, ಹೂವು ಹಣ್ಣು, ಹಟವಾದಿ, ಮಾತಾಡ್ ಮಾತಾಡ್ ಮಲ್ಲಿಗೆ, ಮರಣ ಮೃದಂಗ, ಕೋಣ ಈದೈತೆ, ಶಿಷ್ಯ ಮುಂತಾದವು..

ಮನುಷ್ಯ ಹುಟ್ಟಿದ ದಿನಾಂಕದಂದೇ ದೈವಾಧೀನರಾಗುವುದು ಎಷ್ಟು ಜನಕ್ಕೆ ಸಿಗುವುದು ಹೇಳಿ… ಡಿಸೆಂಬರ್ 29 ರಂದು ನಮ್ಮನ್ನೆಲ್ಲ ಅಗಲಿ ದೂರ ಹೋದರು. ಅವರು ಲಿವರ್ ವಿಫಲದಿಂದ ನಮ್ಮನ್ನು ಅಗಲಿದ್ದಾರೆ ಆದರೆ ಇವರ ಸಂಗೀತ ಸಾಧನೆ ಎಂದಿಗೂ ಅಜರಾಮರ ಮತ್ತು ಇವರ ಗರಡಿಯಲ್ಲಿ ಹಲವಾರು ನುರಿತ ಗಾಯಕರು ಹೊರಹೊಮ್ಮಿರುವುದು ಸಾಥ೯ಕದ ವಿಷಯ.

ಇಷ್ಟು ಹೊತ್ತು ನನಗೆ ತೋಚಿದ ಹಾಗೆ ಬರೆದಿದ್ದೇನೆ ಅವರನ್ನು ಭೇಟಿ ಮಾಡಲಾಗಲಿಲ್ಲ ಆದರೆ ಅವರ ಸಾಧನೆಗಳ ಕುರಿತು ಒಂದು ಸಣ್ಣ ಲೇಖನ ಪ್ರಯತ್ನ ಮಾಡಿದ್ದೇನೆ.

“💜ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ 💜”

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply