ಹಮ್ ಕಿಸೀಸೆ ಕಮ್ ನಹೀ(1977)

ಮ್ಯೂಸಿಕ್ ಗಾಗಿ ಹೆಸರು ಮಾಡಿದ ಹಿಂದಿ ಸೂಪರ್ ಹಿಟ್-ಚಿತ್ರವಿಮರ್ಶೆ

~~~~~~~~~~~~~~~~~~~~~

1977 ರ ಸಮಯದಲ್ಲಿ ಬಾಲಿವುಡ್ / ಫಾರ್ಮ್ಯುಲಾ ಮಸಾಲೆ ಚಿತ್ರಗಳಲ್ಲಿ ಸ್ವಲ್ಪ ಬದಲಿಸಿ ಬಹುತೇಕ ಅದೇ ಕಥಾವಸ್ತುವನ್ನು ರಂಗು ರಂಗಾಗಿ ಸಂಗೀತಪ್ರಧಾನವಾಗಿ ತಯಾರಿಸಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಚಿತ್ರ- ಹಮ್ ಕಿಸೀಸೆ ಕಮ್ ನಹೀ.ಇದರಲ್ಲಿ ರಿಶಿ ಕಪೂರ್, ತಾರಿಕ್ ( ಅಮೀರ್ ಖಾನರ ಕಸಿನ್), ಹೊಸ ನಟಿಯಾಗಿ ಪಾದರ್ಪಣೆ ಮಾಡಿದ ಕಾಜಲ್ ಕಿರಣ್ , ಅತಿಥಿ ಪಾತ್ರವಾಗಿ ಜೀನತ್ ಅಮಾನ್ , ಖಳನಾಯಕನಾಗಿ ಅಮ್ಜದ್ ಖಾನ್ ನಟಿಸಿದ್ದಾರೆ.ರಿಶಿ ಕಪೂರ್ ರ ತಂದೆ ತಮ್ಮ ಆಸ್ತಿ ಕಳೆದುಕೊಂಡು ವಜ್ರಗಳಾಗಿ ಕೂಡಿಟ್ಟಿದ್ದು ಕಳೆದು ಹೋಗಿ, ವಿಮಾನನಿಲ್ದಾಣದಲ್ಲಿ ಸಾವನಪ್ಪುತ್ತಾರೆ, ಆಗ ರಿಶಿ ಲಂಡನ್ನಿಂದ ಬಂದಿಳಿದ ದಿಕ್ಕು ದಿಶೆ ಇಲ್ಲದ ಅಸಹಾಯಕ ಸ್ಥಿತಿಯಲ್ಲಿ ತಂಗಿ ಮದುವೆ ಬೇರೆ ಮಾಡುವ ಏರ್ಪಾಡಿಗೆ ಧನಸಹಾಯ ವಿಲ್ಲದವನಾಗುತ್ತಾನೆ. ಅವನು ಈಗ ಹೋಟೆಲಿನಲ್ಲಿ ಗಾಯಕ, ನರ್ತಕನಾಗಿ ಹಣ ಸಂಪಾದಿಸುತ್ತಿದ್ದಾನೆ. ಇನ್ನೊಂದೆಡೆ ಇಬ್ಬರು ಗೆಳೆಯರು ಬಡತನದಲ್ಲಿ ಒಮ್ಮೆ ತಮ್ಮ ಮಕ್ಕಳನ್ನು ಬೆಳೆದ ನಂತರ ಪರಸ್ಪರ ಮದುವೆ ಮಾಡಿಕೊಡುವುದಾಗಿ ವಾಗ್ದಾನ ಮಾಡಿಕೊಳ್ಳುತ್ತಾರೆ. ಅವರಲ್ಲಿ ಕಾಲ ಕ್ರಮೇಣ ಒಬ್ಬ ಬಡವ, ಇನ್ನೊಬ್ಬ ಶ್ರೀಮಂತನಾಗಿ ಬೆಳೆಯುತ್ತಾರೆ. ಅವರ ಮಕ್ಕಳೇ ತಾರಿಕ್ ಮತ್ತು ಕಾಜಲ್ ಪಾತ್ರಗಳು. ಅವರದೊಂದು ಚಿಕ್ಕವಯಸ್ಸಿನ ಹಾಡು – ಕ್ಯಾ ಹುವಾ ತೆರಾ ವಾದಾ! ಅದು ಅವರಿಗೆ ಸೂಕ್ತ ಸಮಯಕ್ಕೆ ನೆನಪಿಗೆ ಬರುವುದೇ ಎಂಬುದು ಕುತೂಹಲ.ಅಷ್ಟರಲ್ಲಿ ರಿಶಿ ಕಪೂರ್ ಲಂಡನ್ನಿನ ತನ್ನ ಪ್ರೇಮಿ ಜೀನತ್ ಅಮನ್ ಳನ್ನು ಕಳೆದುಕೊಡು ಕಾಜಲ್ ಳನ್ನು ಯಾವುದೋ ದುರಾಸೆಗೆ ಬಿದ್ದು ಹಣಕ್ಕಾಗಿ ಪ್ರೇಮಿಸುವ ನಾಟಕವಾಡುಬೇಕಾಗುತ್ತದೆ. ಅಲ್ಲೊಂದು ಲವ್ ಟ್ರಯಾಂಗಲ್-ರಿಶಿ-ಕಾಜಲ್-ತಾರಿಕ್ ರವರದು!ಅದಕ್ಕೆ ಶಕ್ತಿ ನೀಡುವಂತೆ ಒಮ್ದು ರಂಜನೀಯ ಸಂಗೀತ ಸ್ಪರ್ಧೆ- ಅದರಲ್ಲಿ ಬರುವ ನಾನ್ ಸ್ಟಾಪ್ ಹಾಡುಗಳಲ್ಲಿ ಇಬ್ಬರು ನಾಯಕರಲ್ಲಿ ಯಾರು ಗೆಲ್ಲುವರು, ನಾಯಕಿಯನ್ನು ಒಲಿಸ್ಕೊಳ್ಳುವರು ಎಂದು ಪ್ರಶ್ನೆ.ಹೀಗೆ ಪೂರ್ವಾರ್ಧದಲ್ಲಿ ಭಾವನಾತ್ಮಕ ಸಾಮಾಜಿಕ, ಸಂಗೀತ ಪ್ರಧಾನವಾದ ಕಥೆಯಾಗಿದ್ದುದು ಉತ್ತರಾರ್ಧದಲ್ಲಿ ಅಪರಾಧದ ತಂತ್ರದ ಬಿಸಿಯೇರಿ ಅಮ್ಜದ್ ಖಾನ್ ಕುತಂತ್ರ ಶುರುವಾಗಿ ನಾನಾ ತಿರುವುಗಳು ಬರುತ್ತವೆ. ನಿರ್ದೇಶಕ ನಾಸಿರ್ ಹುಸೇನ್ ( ಈಗಿನ ಅಮೀರ್ ಖಾನರ ಅಂಕಲ್) ಚಿತ್ರಕಥೆಯಲ್ಲಿ ಬಹಳ ರಂಜನೀಯ ವಾಗಿ ಎಲ್ಲೂ ಬೋರ್ ಹೊಡೆಯದಂತೆ ಬಿರುಸಾಗಿ ಅಂತ್ಯದತ್ತ ಕೊಡೊಯ್ಯುತ್ತಾರೆ.ಈ ಸಮರದಲ್ಲಿ ರಿಶಿ ಮತ್ತೆ ಒಳ್ಳೆಯವನೇ ಆಗಿ ಕಾಜಲ್ ಮತ್ತು ತಾರಿಕ್ ಅವರ ಅನುರಾಗಕ್ಕೆ ಒಪ್ಪಿದನೆ?ರಿಶಿ ಕಪೂರನ ಗಾಯಕಿ ಗರ್ಲ್ ಫ್ರೆಂಡ್ ಜೀನತ್ ಅಮಾನ್ ಕೊನೆಗೂ ಅವನಿಗೆ ದಕ್ಕಿದಳೆ, ಇಲ್ಲವೆ? ( ಅವರಿಬ್ಬರ ಟೈಟಲ್ ಸಾಂಗ್ ಕವ್ವಾಲಿ ಬಹಳ ಅದ್ಭುತವಾಗಿದೆ). ಇದೆಲ್ಲಾ ನೀವು ನೋಡಿಯೇ ಅರಿಯಬೇಕು.ಈ ಚಿತ್ರದ ಜೀವಾಳವೆಂದರೆ ಆರ್ ಡಿ ಬರ್ಮನ್ ಸಂಗೀತ ಸಂಯೋಜನೆ:ಕಿಶೋರ್ ಕುಮಾರ್ ಹಾಡಿರುವ ಬಚನಾ ಏಯ್ ಹಸೀನೋ, ಆ ದಿಲ್ ಕ್ಯಾ ಮೆಹೆಫಿಲ್ ಹೈ ತೆರೆ, ಮಿಲ್ ಗಯಾ ಹಮ್ಕೋ ಸಾಥಿ ( ಆಶಾ ಭೋಸ್ಲೆ ಜತೆ), ಮತ್ತು ಹಮ್ ಕೊ ತೊ ಯಾರಾ ತೇರಿ ಯಾರಿ- ಫ಼ಾಸ್ಟ್ ಆಗಿದ್ದು ಕುಣಿಯುವಂತೆ ಪ್ರೇರೇಪಿಸುತ್ತವೆ. ಅವರು ರಿಶಿ ಕಪೂರನ ದನಿಯಾದರೆ, ತಾರಿಕ್ ಗೆ ಮೊಹಮದ್ ರಫ಼ಿಯ ಚಾಂದ್ ಮೆರಾ ದಿಲ್, ಕ್ಯಾ ಹುವಾ ತೆರಾ ವಾದಾ- ಚಂದದ ಹಾಡುಗಳು ಅವರ ಪಾಲಿಗೆ ಸಿಕ್ಕಿವೆ. ಆಶಾ+ ರಫ಼ಿ ಹಾಡಿರುವ ಯೆ ಲಡ್ಕಾ ಹಾಯೆ ಅಲ್ಲಾ- ಗೀತೆಯನ್ನು ಅದ್ಭುತವಾಗಿ ಆ ಕಾಲಕ್ಕೆ ವಿಶೇಷವೆನಿಸುವೆ ಹಾಗೆ ನಾಯಕಿ ಬಲೂನುಗಳ ಜತೆ ಹಾರುವಂತೆ ಚಿತ್ರೀಕರಿಸಿದ್ದಾರೆ. ಆರ್ ಡಿ ಬರ್ಮನ್ ಸಹಾ ಒಂದು ಚಿಕ್ಕ ಗೀತೆ ಹಾಡಿದ್ದಾರೆ!ಕ್ಲೈಮ್ಯಾಕ್ಸ್ ವೇಳೆಗೆ ರಿಶಿ ಕಪೂರನ ಆಸ್ತಿಯಾದ ಆ ವಜ್ರಗಳು, ಯಾರ ಬಳಿಯಿತ್ತು, ಅದಕ್ಕೆ ವಿಲನ್ಸ್ ಮಾಡಿದ ತಂತ್ರವೇನು, ನಾಯಕರಿಬ್ಬರೂ ಖಳ ನಾಯಕನ ವಿರುದ್ಧ ಒಂದಾಗಲೇ ಬೇಕಾಯಿತೆ?… ಹೀಗೆ ಹಲವು ಆ್ಯಕ್ಷನ್ ಸೆಟ್ ಪೀಸ್ ಗಳು ಕುತೂಹಲಕಾರಿಯಾಗಿ ನಮ್ಮನ್ನು ಸೆಳೆಯುತ್ತವೆ, ಸೀಟಿಗಂಟಿಕೊಂಡು ಕೊನೆಯವರೆಗೂ ನೋಡುವಂತೆ ಒತ್ತಾಯಿಸುತ್ತದೆ.ಎಲ್ಲರ ಅಭಿನಯವೂ ಸಮರ್ಥವಾಗಿದೆ. ತಾರಿಕ್ ಪ್ರತಿಭೆಯಿದ್ದರೂ ಅದೇಕೋ ಮುಂದೆ ಬಾಲಿವುಡ್ದಿನ ಚಿತ್ರರಂಗದಲ್ಲಿ ಮುಂದೆ ಬರಲಿಲ್ಲ. ಅದೂ ಫಿಲ್ಮೀ ಫ್ಯಾಮಿಲಿಯನೆ ಆಗಿದ್ದು ಇದು ಚಾರ್ಮಿಗ್ ಯುವನಟ, ಹಸನ್ಮುಖಿ ರಿಶಿ ಕಪೂರ್ ಗೆ ಆ ಕಾಲದಲ್ಲಿ ಸ್ಟಾರ್ ಪಟ್ಟ ಕಾಯಂಗೊಳಿಸಿದ ಚಿತ್ರ. ಇದನ್ನು ನೋಡಿದ ಮೇಲೆ ಅವನು ಈಗ ನಮ್ಮೊಂದಿಗೆ ಇಲ್ಲವೆಂದರೆ ನಂಬಲೇ ಸಾಧ್ಯವಿಲ್ಲ!ಈ ಮನರಂಜನೆ ಮತ್ತು ಸಂಗೀತ ಪ್ರಧಾನ ಚಿತ್ರ – 4/5

ಯೂ ಟ್ಯೂಬ್:-https://www.youtube.com/watch?v=-3gCuK10_4MYoutube ಮತ್ತು zee5 ಎರಡರಲ್ಲೂ ನೋಡಬಹುದು:zee5:https://www.zee5.com/…/watch-hum-kisise-kum…/0-0-15468

Nagesh Kumar C S

Nagesh Kumar C S

ಹವ್ಯಾಸಿ ದ್ವಿಭಾಷಾ ಬರಹಗಾರ ನಾಗೇಶ್ ಕುಮಾರ್ ಸಿ.ಎಸ್‌. ಅವರು ಜನಿಸಿದ್ದು ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಚೆನ್ನೈ ನಗರದ ಬಹುರಾಷ್ಟ್ರೀಯ ಸಂಸ್ತೆಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಬರೆದ ಸಣ್ಣ ಕತೆ, ಕಿರು ಕಾದಂಬರಿಗಳು ತರಂಗ, ತುಷಾರ ಉತ್ಥಾನ, ಸುಧಾ, ಕರ್ಮವೀರ ಸೇರಿದಂತೆ ಹಲವಾರು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ. ರಕ್ತಚಂದನ, ನಾಳೆಯನ್ನು ಗೆದ್ದವನು, ಕರಾಳ ಗರ್ಭ, ಅಬಲೆಯ ಬಲೆ, ಹಿಮಜಾಲ, ರಹಸ್ಯಾಯನ ಇವರ ಪ್ರಮುಖ ಕೃತಿಗಳು. ‘ಕರಾಳ ಗರ್ಭ’ ಅವರ ಆಡಿಯೋ ಪುಸ್ತಕ ಇತ್ತಿಚೆಗೆ ಬಿಡುಗಡೆಗೊಂಡಿದ್ದು ಕೇಳುಗರಿಂದ ಮೆಚ್ಚುಗೆ ಪಡೆದಿದೆ. ಇವರು ಪ್ರತಿಲಿಪಿ ವೇದಿಕೆಯಲ್ಲಿ 1.5 ಲಕ್ಷ ಓದುಗರನ್ನು ಪಡೆದಿದ್ದಾರೆ. ಚಿತ್ರವಿಮರ್ಶೆಯಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ ಚಿತ್ರರಸಿಕರೂ ಆಗಿ ಹಲವಾರು ಫೇಸ್ ಬುಕ್ ಗ್ರೂಪ್ಸ್ ನಲ್ಲಿ ಸಕ್ರಿಯರಾಗಿದ್ದು.,, ಕನ್ನಡ ಹಿಂದಿ ತಮಿಳು ಇಂಗ್ಲೀಷ್ ಚಿತ್ರವಿಮರ್ಶೆಗಳನ್ನು ಬ್ಲಾಗ್ ನಲ್ಲಿ ನಡೆಸುವುದಲ್ಲದೇ IMDB website ನಲ್ಲಿ ಇಂಗ್ಲೀಶ್ ವಿಮರ್ಶಕರಾಗಿ ಭಾಗಿಯಾಗಿದ್ದಾರೆ

Leave a Reply