ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ರವರಿಗೆ ಜನುಮ ದಿನದ ಶುಭಾಶಯಗಳು 🌹💐❤.
ಮೊದಲ ಚಿತ್ರದಲ್ಲಿ ಚಿನ್ನಾರಿ ಮುತ್ತ ನಾಗಿ ನಟಿಸಿ ಕೊಟ್ರೇಶಿ ಕನಸು ಚಿತ್ರದ ಅಭಿನಯಕ್ಕೆ “ರಾಷ್ಟ್ರ ಪ್ರಶಸ್ತಿ” ಗಳಿಸಿ ನಿನಗಾಗಿ, ಪ್ರೇಮ ಖೈದಿ, ಗೋಕುಲ, ಸ್ನೇಹಿತರು, ಶ್ರೀಕಂಠ, ಮಾಸ್ ಲೀಡರ್, ಸೇವಂತಿ ಸೇವಂತಿ, ಋಷಿ , ಕಲ್ಲರಳಿ ಹೂವಾಗಿ, ವಂಶೋಧ್ಧಾರಕ, ಮಾಲ್ಗುಡಿ ಡೇಸ್, ಚೌಕ, ಕಿಸ್ಮತ್ ಚಿತ್ರದಲ್ಲಿ ವಿಭಿನ್ನ ರೀತಿಯ ಪಾತ್ರಗಳಲ್ಲಿ ಅಭಿಮಾನಿಗಳನ್ನು ರಂಜಿಸಿದ ಇವರಿಗೆ ದೇವರು ಆಯಸ್ಸು ಆರೋಗ್ಯ ಭಾಗ್ಯವನ್ನು ಕೊಟ್ಟು ಕಾಪಾಡಲಿ ಮುಂಬರುವ ಚಿತ್ರಗಳು ಯಶಸ್ವಿಯಾಗಲಿ.
ಅಣ್ಣಾವ್ರ ‘ಚಲಿಸುವ ಮೋಡಗಳು ‘ಚಿತ್ರದ ಮೈ ಲಾಡ್೯ ನನ್ನ ವಾದ ಹಾಡಿನಲ್ಲಿ ಚಿಕ್ಕ ಮಗುವಾಗಿ ನಟನೆ, ನಂತರ ಪುನೀತ್ ನಟಿಸಿದ ‘ಪರಶುರಾಮ ‘ದಲ್ಲಿ ಸಣ್ಣ ಪಾತ್ರ, ಶಿವಣ್ಣ ರವರ ‘ಅರಳಿದ ಹೂವುಗಳು ‘ ಚಿತ್ರದಲ್ಲಿ ನಟನೆ. ಹೀಗೆ ಹಲವಾರು ಚಿತ್ರಗಳಲ್ಲಿ ಅಭಿನಯ.
ನಿದೇ೯ಶಕರಾಗಿ “ಕಿಸ್ಮತ್ ” ಚಿತ್ರ ನಿದೇ೯ಶನ ಮಾಡಿ ಗುರುತಿಸಿಕೊಂಡಿರುವರು.

ಗಾಯಕರಾಗಿ ‘ಸೇವಂತಿ ಸೇವಂತಿ ‘ ಚಿತ್ರದ ಜಾಜಿ ಮಲ್ಲಿಗೆ ನೋಡೆ.
‘ನಮ್ಮೆಜಮಾನ್ರು’ ಈ ಹೃದಯ ಹಾಡು.
ವಿನಾಯಕ ಗೆಳೆಯರ ಬಳಗ ಚಿತ್ರದ ‘ಯಾರಿವಳೀ ಹುಡುಗಿ ‘
ಫೇರ್ ಅಂಡ್ ಲವ್ಲೀ ಚಿತ್ರದ ‘ಹಾಗೆ ಒಂದು ‘
ನನ್ನ ನಿನ್ನ ಪ್ರೇಮ ಕಥೆ ‘ಮಜಬೂತಾಗಿದೆ.
ಅಕಿರ ಚಿತ್ರದ ‘ ಅಳಿಸದೆ ಹುಸಿಯಾಗಿದೆ.
ಆಡುವ ಗೊಂಬೆ ‘ಮದರಂಗೀ ಮದರಂಗೀ ‘
ಕಿಸ್ಮತ್ ಚಿತ್ರದ ‘ಪ್ರೀತಿಯಲ್ಲೊಡನೆ, ಕಿಸ್ಮತ್ ಥೀಮ್ ‘ ಇನ್ನೂ ಹಲವಾರು ಗೀತೆಗಳನ್ನು ಹಾಡಿದ್ದಾರೆ.

ಇವರು ಹಾಡೋದಕ್ಕೆ ಮುಖ್ಯ ಪ್ರೇರಣೆ ಅಣ್ಣಾವ್ರ, ಅವರ ಭಕ್ತಿ ಗೀತೆಗಳನ್ನು ಅಷ್ಟೇ ಚೆನ್ನಾಗಿ ಹಾಡ್ತಾರೆ.
ಕೇವಲ ನಟರಾಗಲ್ಲದೆ, ಬಿಗ್ ಬಾಸ್ ಒಂದರ ವಿಜೇತರಾಗಿ, ಗಾಯಕರಾಗಿ, ನಿದೇ೯ಶಕರಾಗಿ, ಟಿ ವಿ ನಿರೂಪಕರಾಗಿ ಕಿರುತೆರೆಯ ಡ್ರಾಮಾ ಜೂನಿಯರ್ಸ್ ಸೀಸನ್ 1 ,2, 3 ಡಾನ್ಸ್ ಕನಾ೯ಟಕ ಡಾನ್ಸ್ ರಿಯಾಲಿಟಿ ಶೋಗಳ ಜಡ್ಜಾಗಿ ನಡೆಸಿಕೊಟ್ಟಿದ್ದಾರೆ.
ಇವರು ನಟಿಸಿದ ಕೆಲವು ಚಿತ್ರಗಳನ್ನು ನೋಡೋಣ :
🎩’ನಿನಗಾಗಿ’ ಕಾಲೇಜು ಹುಡುಗ ಜೊತೆಗೆ ಹುಡುಗಿ ಒಳ್ಳೆ ಸ್ನೇಹ ಮಧ್ಯೆ ಪ್ರೀತಿ ಹುಟ್ಟಿ ಹೇಳೋಕಾಗದೆ ಪರಿತಪಿಸುವ ಕೊನೆವರೆಗೂ ಹೇಳದೇ ಇದ್ರೂ ಹುಡುಗಿಗೆ ನಿಜ ಗೊತ್ತಾಗಿ ಕೊನೆಯಲ್ಲಿ ಇಬ್ಬರೂ ಒಂದಾಗೋದು, ಎಲ್ಲೆಲ್ಲಿ ನಾ ನೋಡಲಿ ನಿನ್ನದೇ ಚಿಲಿಪಿಲಿ, ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ ಹಾಡು ಎವರ್ ಗ್ರೀನ್. ಎಸ್ ಮಹೇಂದರ್ ನಿದೇ೯ಶನ, ಗುರುಕಿರಣ್ ಸಂಗೀತ.
🌹ಹಳ್ಳಿ ಹುಡುಗ ಜಾನಪದ ಅಂದ್ರೆ ಇಷ್ಟ ಹಾಡುಗಾರ, ಇವರ ಹಾಸಿಗೆ ಮನಸೋತ ಹುಡುಗಿ, ಹುಡುಗ ಅವರನ್ನು ಇಷ್ಟ ಪಟ್ಟು ಅವಳಿಗೆ ಗೊತ್ತಾಗದಂತೆ ಅವಳಿಗೆ ತಾಳಿ ಕಟ್ಟಿ ನೆಗೆಟಿವ್ ಶೇಡ್ ನಲ್ಲಿ ನಟಿಸಿದ ಕೊನೆಯಲ್ಲಿ ಸತ್ಯ ತಿಳಿದು ಹುಡುಗಿ ಪ್ರೀತಿ ಒಪ್ಕೊಳೊ ‘ಸೇವಂತಿ ಸೇವಂತಿ ‘ ಚಿತ್ರ ನಿಂಬಿಯಾ ಬನಾದ ಮ್ಯಾಗಳ, ಜಾಜಿ ಮಲ್ಲಿಗೆ ನೋಡೆ, ಭಾಗ್ಯದ ಬಳೆಗಾರ, ಚೆಲ್ಲಿದರೂ ಮಲ್ಲಿಗೆಯ ಎಲ್ಲಾ ಜಾನಪದ ಹಾಡುಗಳು ಕಣ್ಣಿಗೆ ಹಬ್ಬ, ಎಸ್ ನಾರಾಯಣ್ ನಿದೇ೯ಶನ, ಎಸ್ ಎ ರಾಜ್ ಕುಮಾರ್ ಸಂಗೀತ.

👒ಅಣ್ಣ ಕಾಲೇಜ್ ಪ್ರೊಫೆಸರ್, ತಮ್ಮ ಡ್ರಗ್ಸ್ ಗೆ ಶರಣಾದವ, ತಮ್ಮನ ಕೆಟ್ಟ ಚಟ ಬಿಡಿಸಲು ಅಣ್ಣ ಮಾಡುವ ಶ್ರಮ, ಒಳ್ಳೆಯ ಹಾಡುಗಳು ಎಲ್ಲೆಲ್ಲೂ ಹಬ್ಬ ಹಬ್ಬ ಬಂತು ಯುಗಾದಿ ಹಬ್ಬ, ಬಂಡಲೂರ ಬಂಢರಲ್ಲ, ಅಣ್ಣನ ಪಾತ್ರದಲ್ಲಿ ನೆಚ್ಚಿನ ಶಿವಣ್ಣ ಅಭಿನಯ, ಪ್ರಕಾಶ್ ನಿದೇ೯ಶನ, ಗುರುಕಿರಣ್ ಸಂಗೀತ. ಚಿತ್ರ ರಿಷಿ.
🧡ಫುಲ್ ಇನ್ ಆಂಡ್ ಔಟ್ ಕಾಮಿಡಿ ಚಿತ್ರ , ಕಳ್ಳ ಚಂದಮಾಮ, ದಿನವೆಲ್ಲ ಹಸಿವಿಲ್ಲ, ಖುಲ್ಲಮ್ ಖುಲ್ಲ ಮುದ್ದಾಡು ಹಾಡು ಸೂಪರ್, ಪ್ರಕಾಶ್ ನಿದೇ೯ಶನ, ಸಂಗೀತ ಗುರುಕಿರಣ್.
ಸದಾ ವಿನಯತೆ ಮತ್ತು ನಗುವಿನ ಗುಲಾಬ್ ಜಾಮೂನು ವಿಜಯ್ ರಾಘವೇಂದ್ರ ರವರಿಗೆ ಆಲ್ ದಿ ಬೆಸ್ಟ್ ನಿಮ್ಮ ಮುಂಬರುವ ಚಿತ್ರಗಳಿಗೆ 🙏
“ನೀಡೂ ಶಿವಾ ನೀಡದಿರೂ ಶಿವಾ ಬಾಗುವುದು ಎನ್ನ ಕಾಯ”