ಹ್ಯಾಪಿ ಬರ್ತ್‌ಡೇ ತಾಜ್ ಮಹಲ್ ಚಂದ್ರು 💐💕💐

ಹ್ಯಾಪಿ ಬರ್ತ್‌ಡೇ ತಾಜ್ ಮಹಲ್ ಚಂದ್ರು

ಸದಭಿರುಚಿ ಚಿತ್ರಗಳ ನಿದೇ೯ಶಕ, ಬರಹಗಾರ, ನಿಮಾ೯ಪಕರಾದ ಶ್ರೀ ಆರ್ ಚಂದ್ರು ರವರಿಗೆ ಜನುಮ ದಿನದ ಶುಭಾಶಯಗಳು 💐💙🌹.

ಇವರು ನಿದೇ೯ಶಿಸಿದ ಮೊದಲ ಚಿತ್ರದಲ್ಲಿ ವಿಭಿನ್ನ ಲವ್ ಸ್ಟೋರಿ ಹೆಣೆದು ಅಭಿಮಾನಿಗಳಿಗೆ ಪ್ರೇಮ್ ಕಹಾನಿ ತೋರಿಸಿ ಅಜಯ್ ರಾವ್ ನಟನೆಗೆ ಪ್ರಶಂಸೆ ನೀಡಿದ ಮತ್ತು ಮಳೆ ಹುಡುಗಿ ಪೂಜಾ ಗಾಂಧಿ ನಾಯಕಿ ಪಾತ್ರ ಮೆಚ್ಚುಗೆ ಗಳಿಸಿದ ಚಿತ್ರ “ತಾಜ್ ಮಹಲ್ “.

ಖುಷಿಯಾಗಿದೆ ಏಕೋ ನಿನ್ನಿಂದಲೇ ನಾ ನೋಡದೆ ನಿನ್ನನು ಇರಲಾರೆಲೆನೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಕೇಶವಾಪುರ ತಾಲ್ಲೂಕಿನವರು, ಇವರ ತಂದೆ ತಾಯಿ ರೈತರು, ತಮ್ಮ ವಾರಾಂತ್ಯದಲ್ಲಿ ವ್ಯವಸಾಯ ಮಾಡಿ ಇಬ್ಬರಿಗೂ ಸಹಾಯ ಮಾಡ್ತಾರೆ, ವ್ಯವಸಾಯದ ಒಲವು ಮೊದಲಿನಿಂದಲೂ, 2008 ರಲ್ಲಿ ತಾಜ್ ಮಹಲ್ ಚಿತ್ರ ನಿದೇ೯ಶಿಸಿದ ಇವರನ್ನು “ತಾಜ್ ಮಹಲ್ ಚಂದ್ರು ‘ ಅಂತ ಕರೀತಾರೆ.

ಒಬ್ಬ ಹಳ್ಳಿ ಹೈದ ಕವಿತೆ ಬರೆಯೋದು ತುಂಬಾ ಇಷ್ಟ, ಕವಿತೆಯನ್ನು ಮೆಚ್ಚಿ ನಾಯಕನನ್ನು ಇಷ್ಟ ಪಡೋ ನಾಯಕಿ, ಅವರ ತಂದೆಗೆ ನಾಯಕ ಕೇವಲ ಕವಿತೆ ಬರೆದು ಜೀವನ ಮಾಡಲಾಗದು, ನಾಯಕನ ತಂದೆಗೂ ದೊಡ್ಡವರ ಸಹವಾಸ ಬೇಡ, ನಾವು ಬಡವರು ನಾವು ಹೀಗೇ ಇರಬೇಕು, ತಂದೆ ಮಗನ ಮಧ್ಯೆ ಇರೋ ವಾತ್ಸಲ್ಯ , ತಂದೆಗೆ ಗೌರವ ಮುಖ್ಯ, ಕೆಲಸವಿಲ್ಲದೆ ಬದುಕಲು ಸಾಧ್ಯವಿಲ್ಲವೆಂದು ತಿಳಿದ ನಾಯಕ ಪಟ್ಟಣಕ್ಕೆ ಬಂದು ನಿಜವಾದ ಬದುಕು ಕಟ್ಟಿಕೊಳ್ಳಲು ಪಡುವ ಪಾಡು ಕವಿತೆಯ ಜೊತೆ ರೌಡಿಸಂ ಟಚ್ ಕೊಟ್ಟು ಸೂಪರ್ ಹಿಟ್ ಹಾಡುಗಳಿಂದ ಎಲ್ಲರ ಮನಸ್ಸನ್ನು ಗೆದ್ದ ಶಿವಣ್ಣ ಮತ್ತು ಸದಾ ನಟನೆಯ ಚಿತ್ರ ‘ಮೈಲಾರಿ ‘ ಭಜ೯ರಿ ಪ್ರದಶ೯ನ ಕಂಡಿದೆ.

ಊರಿಂದ ಓಡಿ ಬಂದ ಜೋಗಿನೂ ಅಲ್ಲ ರೀ.. ಓಂ ಇಂದ ಎದ್ದು ಬಂದ ಸತ್ಯನೂ ಅಲ್ಲಾ ರೀ.. ಪುನೀತ್ ರಾಜ್ ಧ್ವನಿ 👌💜.

ಎಲ್ಲರಂತೆ ಕಾಲೇಜು ಸ್ಟೋರಿ, ನಾಯಕ ಇಷ್ಟ ಪಡೋ ನಾಯಕಿ, ಆದರೆ ನಾಯಕಿಗೆ ಅವರ ಮೇಲೆ ಪ್ರೀತಿ ಭಾವನೆ ಇರದು, ನಾಯಕಿಗೆ ಬೇರೆಡೆ ಮದುವೆ ನಿಶ್ಚಯ, ನಾಯಕ ಮನನೊಂದು ಕೊರಗುವ ದೃಶ್ಯ, ಬಿಸಿನೆಸ್ ನಲ್ಲಿ ಒಳ್ಳೆಯ ಉದ್ಯಮಿ ಆದ ನಂತರ ತಮ್ಮ ಹಳೇ ಸ್ನೇಹಿತರೆಲ್ಲರನ್ನು ಭೇಟಿ ಮಾಡಿ ಖುಷಿ ಆಗಿರೋ ಆಸೆಗೆ ಎಲ್ಲರೂ ಒಪ್ಪಿ ಒಂದು ಬಹು ದೊಡ್ಡ ಸಮಾರಂಭದಲ್ಲಿ ಎಲ್ಲರೂ ಭಾಗಿ ಅದಕ್ಕೆ ಮದುವೆಯಾದ ನಾಯಕಿ ಕೂಡ.. ವಿಶಿಷ್ಟ ಕಥೆ ಹೆಣೆದು ಜನರಿಗೆ ಇನ್ನೂ ಹತ್ತಿರವಾದ ಚಿತ್ರ “ಚಾರ್ ಮಿನಾರ್ “. ನೆನಪಿರಲಿ ಪ್ರೇಮ್ ಮತ್ತು ಮೇಘನಾ ಗಾವಂಕರ್ ನಟನೆ ಮೆಚ್ಚುಗೆ ,ಈ ಚಿತ್ರ ಯಶಸ್ಸಾದ ನಂತರ ತೆಲುಗಿನಲ್ಲಿ ನಿದೇ೯ಶನ ಮಾಡಿ ಅಲ್ಲಿಯ ನೇಟಿವಿಗೆ ತಕ್ಕ ಹಾಗೆ ಚಿತ್ರ ಮಾಡಿದ್ದು ಗಮನಾರ್ಹ.

ನನ್ನ ಎದೆಯ ಗೋಡೆ ಮೇಲೆ ನಿನಗಾಗಿ ಬರೆದ ಓಲೆ ನೀ ಬಂದು ಹೋಗುವ ಮುನ್ನ.. ಜನಪ್ರಿಯ ಗೀತೆ.

ಖ್ಯಾತ ನಿದೇ೯ಶಕ ಮತ್ತು ನಟ ಉಪೇಂದ್ರ ರವರನ್ನು ಹಾಕಿಕೊಂಡು ತೆಗೆದ ಚಿತ್ರ ‘ಬ್ರಹ್ಮ’ , ಕೋಕೋ, ಮಳೆ , ಲಕ್ಷ್ಮಣ .

ದುನಿಯಾ ವಿಜಯ್ ಗಾಗಿ “ಕನಕ ” ಚಿತ್ರ , ಹೈಲೈಟ್ ಅಣ್ಣಾವ್ರನ್ನು ಸ್ಮರಿಸುವ ಎನೆಜಿ೯ಟಿಕ್ ಡೈಲಾಗ್.

ಮತ್ತೆ ರಿಯಲ್ ಸ್ಟಾರ್ ಉಪೇಂದ್ರ ಗಾಗಿ ಈಗಿನ ಆಧುನಿಕ ಲವ್ ಸ್ಟೋರಿ, ಕಾಮಿಡಿ, ಲವ್ ಬಗ್ಗೆ ತಾನಂದುಕೊಂಡ ರೀತಿ, ಲವಾಲಜಿ ಬಗ್ಗೆ ಸ್ಟಡಿ ಮಾಡೋ ನಾಯಕಿ , ಪ್ರೀತಿ ಇಷ್ಟವಿಲ್ಲದವರಿಗೆ ಅವಳ ಮೇಲೆ ಲವ್ವಾಗೋಹಾಗೆ ನಂತರ ಆಕೆ ಸಿಗದಿರುವುದು ತುಂಬಾ ವಷ೯ವಾದ ಮೇಲೆ ಮರು ಭೇಟಿ ಅಷ್ಟರಲ್ಲಿ ನಾಯಕನಿಗೆ ಮದುವೆಯಾಗಿರೋದು,
ಮತ್ತೊವ೯ ನಾಯಕಿಯ ಜೊತೆ , ಮೊದಲ ನಾಯಕಿ ಭೇಟಿ ಮಾಡಿದಾಗ ನಾಯಕ ತನ್ನ ಪ್ರೇಮ ನಿವೇದನೆ ಮಾಡೋದು ನಂತರ ಆಕೆಯು ಈಗಿನ ಸ್ಥಿತಿ ವಿವರಿಸೋದು ನಂತರ ನಿಜವಾದ ಪ್ರೀತಿ ಏನು ಅಂತ ಗೊತ್ತಾಗೋದು ಚಿತ್ರ “ಐ ಲವ್ ಯೂ ” ಉಪೇಂದ್ರ, ರಚಿತ ರಾಮ್, ಸೋನು ಗೌಡ.. ಚಿತ್ರ ನಿಮಾ೯ಣ ಇವರದೇ ಸಂಸ್ಥೆ. ಸ್ಟಾರ್ ಇಸ್ ಬ್ಯಾಕ್..

ಈಗ ಮತ್ತೆ ಸೂಪರ್ ಸ್ಟಾರ್ ಉಪೇಂದ್ರ ರವರನ್ನು ಇನ್ನೂ ವಿಭಿನ್ನವಾಗಿ ತೋರಿಸಲು ರೌಡಿಸಂ ಮತ್ತು ಮಾಫಿಯಾ ಚಿತ್ರ ‘ಕಬ್ಜ ‘, ಮತ್ತೊವ೯ ನಾಯಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಬ್ಬರ ಅಭಿನಯ ಅಭಿಮಾನಿಗಳಿಗೆ ಹಬ್ಬ ಖಂಡಿತ.
ಈ ಚಿತ್ರ ತಯಾರಿಕೆಯಲ್ಲಿ ದಾಖಲೆ ನಿಮಿ೯ಸುತ್ತಾ ಸಾಗಿವೆ, ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಅಲ್ಲದೆ ಇನ್ನೂ 4 ಭಾಷೆಗಳಲ್ಲಿ ಪ್ಯಾನ್ ಇಂಡಿಯ ಸಿನಿಮಾ ಆಗಲಿದೆ. ಚಿತ್ರದ ಮೇಕಿಂಗ್ ನೋಡಿ ಮೆಚ್ಚಿ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡ ಕಿಚ್ಚ ಸುದೀಪ್. ಚಿತ್ರದ ಟೀಸರ್ ಭಾರೀ ಸದ್ದು ಮಾಡುತ್ತಿದೆ, ಇವರ ಮುಂಬರುವ ಚಿತ್ರಗಳು ಅಧ್ಭುತ ಯಶಸ್ಸನ್ನು ಕಾಣಲಿ, ಆದಷ್ಟು ಬೇಗ ಕಬ್ಜ ಚಿತ್ರ ಎಲ್ಲಾ ಚಿತ್ರಮಂದಿರಗಳಲ್ಲಿ ಆಕ್ರಮಿಸಲಿ🙏

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply