2005 ರಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದಶ೯ನ ಕಂಡ ಹ್ಯಾಟ್ರಿಕ್ ಹೀರೋ ಶಿವಣ್ಣ ನಟನೆಯ ಚಿತ್ರ “ಜೋಗಿ” ಆ ಚಿತ್ರದಲ್ಲಿ ಶಿವಣ್ಣ ಜೈಲ್ ಸೀನ್ ಅದ್ರಲ್ಲಿ ಶಿವಣ್ಣ ಫೈಟ್ ಎಲ್ರೂ ಒಂದೊಂದು ಥರ ಫೈಟ್ ಆದ್ರೆ ಒಬ್ರು ಶಿವಣ್ಣಗೆ ಚಾಕು ಹಾಕೋದು ಇದ್ದಕಿದ್ದಂತೆ ಶಿವಣ್ಣ ಒಬ್ಬರ ಕಾಡಿಗೆ ಹೊಡಿತಾರೆ ಆಗ ಕಾಲು ಕಾಲು ಬಡ್ಕೊಳೊ ಸೀನ್ ಮಾಡಿರೋದು ಬೇರೆ ಯಾರೂ ಅಲ್ಲ ಅವರೇ ದುನಿಯಾ ವಿಜಯ್.
ನೋಡೋಕೆ ಕಪ್ಪಗಿದ್ದು ಕಟ್ಟು ಮಸ್ತಾದ ದೇಹ ರಗಡ್ ವಾಯ್ಸ್
ಡಿಫರೆಂಟ್ ಸ್ಟೈಲ್, ವೆರೈಟಿ ಡೈಲಾಗ್, ವಿಭಿನ್ನ ಆಕ್ಷನ್ ಗೆ ಹೆಸರಾದ ವಿಜಯ್ ಕುಮಾರ್ (ದುನಿಯಾ ವಿಜಯ್) ರವರಿಗೆ ಹ್ಯಾಪಿ ಬರ್ತ್‌ಡೇ 💐💜💐.
ಖಳನಾಯಕ, ನಾಯಕ ನಟ, ನಿಮಾ೯ಪಕ, ನಿದೇ೯ಶಕ, ಚಿತ್ರ ಬರಹಗಾರರಾಗಿ ಗುರುತಿಸಿಕೊಂಡ ಇವರಿಗೆ ಬ್ಲಾಕ್ ಕೊಬ್ರ, ಕರಿ ಚಿರತೆ, ವಿಜಯ್ ಹೆಸರುಗಳು.
ಫಿಲಂ ಇಂಡಸ್ಟ್ರಿಗೆ ಬಂದ ತಕ್ಷಣ ಯಾರೂ ಹೀರೋ ಅಗಲ್ಲ ಮೊದಲು ಸೈಡ್ ಆಕ್ಟರ್, ಖಳನಟ, ನಾಯಕನಟ ಹೀಗೆ…
ಯೋಗರಾಜ್ ಭಟ್ ರಂಗ ಎಸ್ ಎಸ್ ಎಲ್ ಸಿ ವಿಲನ್ ಜೊತೆ ರಾಕ್ಷಸ ಚಿತ್ರದಲ್ಲಿ ವಿಲನ್ ಜೊತೆ ಇರೋದು .
ಇಂಡಸ್ಟಿಲೀ ಯಾರು ನಿಮಗೆ ಫೇವರಿಟ್ ಮತ್ತೆ ಯಾಕೆ ಅಂದಾಗ ಹೇಳಿದ್ದು ಶಿವಣ್ಣ ಹೆಸರು ಕಾರಣ ಶಿವಣ್ಣರಿಗಿರೋ ಒಳ್ಳೆ ಗುಣ. ಅವರಂತಾಗುವ ಆಸೆ.
ಯುಗ, ಚಂಡ, ನಾಯಕನಾಗಿ, ಗೆಳೆಯ ಚಿತ್ರದಲ್ಲಿ ಪ್ರಕಾಶ್ ರೈ ಅವರ ಪಾತ್ರ ಬಿಟ್ಟು ಹೋದಾಗ ಇವರಿಗೆ ಸಿಕ್ಕಿದ್ದು.
ಟನಿ೯ಂಗ್ ಪಾಯಿಂಟ್ ಆದದ್ದು ಖ್ಯಾತ ನಿದೇ೯ಶಕ ಸೂರಿ ರವರ “ದುನಿಯಾ ” ಚಿತ್ರ, ಒಬ್ಬ ಹಳ್ಳಿ ಹುಡುಗ “ಶಿವಲಿಂಗು” ಕೆಲಸ ಹುಡುಕಿಕೊಂಡು ಪಟ್ಟಣಕ್ಕೆ ಬಂದು ಪಡುವ ಅವಸ್ಥೆ ಯಾವ ಯಾವ ಥರ ಜನ ನಮಗೆ ಮೋಸ ಮಾಡ್ತಾರೆ, ಪ್ರಪಂಚ ಹೇಗಿದೆ, ನಿಷ್ಕಲ್ಮಶ ಪ್ರೀತಿ, ರೌಡಿಸಂ, ಒಲವೇ ಜೀವನ ಸಾಕ್ಷಾತ್ಕಾರ.. ಮೆಸೇಜ್ ನೀಡೋದು, ರಿಯಲ್ ನಟನ ಟ್ಯಾಲೆಂಟ್ ತೋಸೋ೯ ಟೈಂ, ಆಕ್ಷನ್ ಸೀಕ್ವೆನ್ಸ್, ಸೂಪರ್ ಹಿಟ್ ಸಾಂಗ್ಸ್, ಕರಿಯಾ ಐ ಲವ್ ಯೂ.. ಜನಪ್ರಿಯ ಗೀತೆ, ಆಕ್ಟಿಂಗ್ ನೋಡಿ ಇಡೀ ಸ್ಯಾಂಡಲ್ವುಡ್ ಬೆನ್ನುತಟ್ಟಿದ ಘಳಿಗೆ, ಇವರ ನಟನೆಗೆ ಅತ್ಯುತ್ತಮ ನಟ ಫಿಲಂ ಫೇರ್ ಮತ್ತು ಕನಾ೯ಟಕ ಸಕಾ೯ರ ಫಿಲಂ ಪ್ರಶಸ್ತಿ ಭಾಜನರು.
ರಜಿನಿಕಾಂತ್ ಅಂದ್ರೆ ತುಂಬಾ ಇಷ್ಟ, ದುನಿಯಾ ಫಿಲಂ ನೋಡಿ ಸೂಪರ್ ಸ್ಟಾರ್ ಶಹಬಾಷ್ ಹೇಳಿದ್ದು.
ಅವ್ವ, ಸ್ಲಂ ಬಾಲ, ತಾಕತ್, ದೇವೃ, ಶಂಕರ್ ಐ ಪಿ ಎಸ್ (ಖಡಕ್ ಪೋಲೀಸ್ ಅಧಿಕಾರಿ ಶಂಕರ್ ಪ್ರಸಾದ್). ಕರಿಚಿರತೆ, ಕಂಠೀರವ, ಮಾಸ್ತಿ ಗುಡಿ.
ಕಾಮಿಡಿ ಟಚ್ ಇರೋ ಜಂಗ್ಲೀ, ಜಾನಿ ಮೆರಾ ನಾಮ್ ಪ್ರೀತಿ ಮೆರಾ ಕಾಮ್, ಜಾಕ್ಸನ್, ಆರ್ ಎಕ್ಸ್ ಸೂರಿ, ದನ ಕಾಯೋನು, ಸಿಂಹಾದ್ರಿ, ಕನಕ , ಜಾನಿ ಜಾನಿ ಯೆಸ್ ಪಾಪ. ರಂಗಾಯಣ ರಘು ಚಿತ್ರದಲ್ಲಿರೋದೇ ಪ್ಲಸ್ ಪಾಯಿಂಟ್ ಜೊತೆಗೆ ಅಲ್ಟಿಮೇಟ್ ಕಾಮಿಡಿ ಸೀನ್ ಗಳು ಥಿಯೇಟರ್ ನಲ್ಲಿ ನೋಡುಗರಿಗೆ ಫುಲ್ ಮೀಲ್ಸ್ ಸಿಕ್ಕಷ್ಟು ಖುಷಿ.
ವೈಯಕ್ತಿಕ ವಿಷಯಗಳು ನಮಗೆ ಬೇಡವಾದದ್ದು ಆದರೂ ಮೋನಿಕ, ಮೊನಿಷಾ, ಸಾಮ್ರಾಟ್ ಮಕ್ಕಳು.
ಖುಷಿಯ ವಿಚಾರ ತಾವು ನಿದೇ೯ಶಕರಾಗಿ ಚಿತ್ರ ಮಾಡಬೇಕೆಂಬ ಆಸೆ ಎಲ್ಲರಿಗೂ ಇರುತ್ತೆ, ಅದ್ರೆ ಅದಕ್ಕೆ ಸರಿಯಾದ ಟೈಂ ಬರಬೇಕು, ಈಗ ಆ ಟೈಂ ಬಂದಿದೆ, ಡಾಲಿ ಧನಂಜಯ್ ಆಪೋಸಿಟ್ “ಸಲಗ” ಚಿತ್ರ ಬಿಡುಗಡೆಗೆ ಸಿಧ್ಧವಿದೆ, ನಿದೇ೯ಶಕರ ಕ್ಯಾಪ್ ಹೊತ್ತವರು ಇದೇ ದುನಿಯಾ ವಿಜಯ್, ತಾವು ಕಂಡ ಕಲ್ಪನಾ ಲೋಕವನ್ನು ಸೃಷ್ಟಿಸಿ ಜೊತೆಗೆ ಪ್ರೀತಿ ಟಚ್ ರೌಡಿಸಂ ಎಲ್ಲಾ ಮಿಶ್ರಣ, ಹೊಸ ನಿದೇ೯ಶಕ ಶೈಲಿ ನೋಡೋರಿಗೆ ಕಾತುರ, ಕ್ರಿಯೇಟಿವಿಟಿ, ಈಗಾಗಲೇ ಹಾಡುಗಳು ಹಿಟ್ ಆಗಿವೆ, ಸೂರಿ ಅಣ್ಣ ಟಪಾಂಗುಚ್ಚಿ ಸಾಂಗ್, ಆಂಟೋನಿ ದಾಸ್ ಧ್ವನಿ, ಮಳೆಯೆ ಮಳೆಯೆ, ಐ ಲವ್ ಯೂ ಸಂಜನಾ , ವಿಶೇಷತೆಯನ್ನು ನಿರೀಕ್ಷಿಸುತ್ತಿರುವ ಪ್ರೇಕ್ಷಕರು, ಚಿತ್ರಕ್ಕೆ ಹೆಸರಾಂತ ನಿಮಾ೯ಪಕರು ಕೆ ಪಿ ಶ್ರೀಕಾಂತ್ ರವರು, ಆದಷ್ಟು ಬೇಗ ತೆರೆಗೆ ಬರಲಿ ಚಿತ್ರ ಯಶಸ್ವಿಯಾಗಲಿ ಅಂತ ನಮ್ಮ ಚಿತ್ರೋದ್ಯಮ ತಂಡದಿಂದ ಆಲ್ ದಿ ಬೆಸ್ಟ್ ಮತ್ತು ಒನ್ಸ್ ಅಗೇನ್ ಹ್ಯಾಪಿ ಬರ್ತ್‌ಡೇ ದುನಿಯಾ ವಿಜಯ್ 💐