ಹ್ಯಾಪಿ ಬರ್ತ್‌ಡೇ ಸ್ಟೈಲ್ ಕಿಂಗ್ 🤘

ಇವರ ಹೆಸರು ಥಿಯೇಟರ್ ಬೆಳ್ಳಿ ತೆರೆಯಲ್ಲಿ ಬಂದಾಕ್ಷಣ 30-40 ಸೆಕೆಂಡುಗಳು ಅಭಿಮಾನಿಗಳ ಅಬ್ಬರ, ಶಿಲ್ಲೆ, ಡ್ಯಾನ್ಸ್, ಚಿಲ್ರೆ ಕಾಸು ಎರಚಾಟ, ತಲೈವಾ.. ತಲೈವಾ.. ತಲೈವಾ ಅನ್ನೋ ಮಾತು ಕೇಳ್ಸುತ್ತೆ, ಅಷ್ಟು ಇಷ್ಟ ಪಡೋ ಅಭಿಮಾನಿಗಳ ನೆಚ್ಚಿನ ತಲೈವಾ.. ರಜಿನಿಕಾಂತ್.

“ನನ್ ಜೀವನದಲ್ಲಿ ನಾನು ಆಟೋಗ್ರಾಫ್ ಪಡೆದ
ಏಕೈಕ ವ್ಯಕ್ತಿ ಡಾ. ರಾಜ್ ಕುಮಾರ್ “

ಹೀಗಂತ ಹೇಳಿರೋರು ಬೇರೆ ಯಾರೂ ಅಲ್ಲ ನಮ್ಮ ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯಲ್ಲಿ ಎಲ್ಲರಂತೆ ಆಡಿ ಬೆಳೆದ ಚಿಗುರು ಮೀಸೆಯ ಯುವಕ, ಗಟ್ಟಿ ಮುಟ್ಟಾದ ದೇಹ, ಸ್ಟೈಲ್ ಮಾಡೋದರಲ್ಲಿ ಹೆಸರು ಮಾಡಿದ, ಕಂಡಕ್ಟರ್ ಕೆಲಸ ಮಾಡಿ ನಂತರ ತಮ್ಮ ದಿಕ್ಕನ್ನೇ ಬದಲಾಯಿಸಿಕೊಂಡ ಶ್ರೀ. ಗುರು ರಾಘವೇಂದ್ರ ದೇವರ ಪರಮ ಭಕ್ತರು, ಅಣ್ಣಾವ್ರ ಆಪ್ತರು ತಲೈವಾ, ವಲ್ಡ್೯ ಸುಪರ್ ಸ್ಟಾರ್ ಶ್ರೀ. ಶಿವಾಜಿ ರಾವ್ ಗಾಯಕ್ವಾಡ್ (ರಜಿನಿಕಾಂತ್) ರವರಿಗೆ 70ನೇ ಜನುಮ ದಿನದ ಶುಭಾಶಯಗಳು 🌹

” ❤ಇವರು ನಡೆದರೆ ಸ್ಟೈಲ್ ,ನಿಂತರೆ ಸ್ಟೈಲ್
ಕುಂತರೆ ಸ್ಟೈಲ್ , ನಕ್ಕರೆ ಸ್ಟೈಲ್
ಕೈ ಎತ್ತಿ ಮುಗಿಯೋದು ಒಂದು ಸ್ಟೈಲ್
ಸಿಗರೇಟ್ ಹಚ್ಚೋದು ಒಂದು ಸ್ಟೈಲ್
ಅದಕ್ಕೆ ಇವರನ್ನ ಕರಿತಾರೆ ಎಲ್ಲರೂ ಸ್ಟೈಲ್ ಕಿಂಗ್❤ “

1973 ರಲ್ಲಿ ಮೆದ್ರಾಸ್ ಫಿಲಂ ಅಕಾಡೆಮಿಯಲ್ಲಿ ಡಿಪ್ಲೊಮಾ ಮಾಡಿದವರು, ಇವರನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸಿದವರು ಹೆಸರಾಂತ ನಿದೇ೯ಶಕರು ಕೆ. ಬಾಲಚಂದರ್ ರವರು “ಅಪೂವ೯ ರಾಗಂಗಳ್ “.

ತಮಿಳಿನಲ್ಲಿ ಇವರು ನೆಲೆಯನ್ನು ಕಂಡುಕೊಂಡಮೇಲೆ ಅಲ್ಲಿಯೇ ಚಿತ್ರಗಳಲ್ಲಿ ಅಭಿನಯದ ಚಕ್ರ ನಿಲ್ಲಲಿಲ್ಲ, ಒಂದಾದ ಮೇಲೆ ಒಂದರಂತೆ ಚಿತ್ರಗಳು ಇವರ ಕೈಯಲ್ಲಿ. ಕೆಲವು ಚಿತ್ರಗಳು ನೆನಪಿಗೆ ಬರುವುದೆಂದರೆ

ಮೂಂಡ್ರು ಮುಡಿಚ್ಚು, ಅವರ್ಗಳ್, ಪದಿನಾರು ವಯದಿನಿಲೆ, ಕುಪ್ಪತ್ತು ರಾಜ, ನಿನೈತಾಲೆ ಇನಿಕ್ಕುಂ, ಟೈಗರ್, ಧಮ೯ ಯುಧ್ಧಂ, ಬಿಲ್ಲಾ, ನಕ್ಚತ್ತಿರಂ, ರಾಂ ರಾಬಟ್೯ ರಹೀಂ, ನಾನ್ ಪೋಟ್ಟ ಸವಾಲ್, ಜಾನಿ, ಮುರಟ್ಟು ಕಾಳೈ, ಪೊಲ್ಲಾದವನ್, ತೀ, ಕಳುಗು, ತಿಳ್ಳು ಮುಳ್ಳು, ಪೊಕ್ಕಿರಿ ರಾಜ, ರಂಗ, ಮೂಂಡ್ರು ಮುಗಂ, ಅಗ್ನಿ ಸಾಕ್ಷಿ, ಪುದುಕವಿದೈ, ಪಾಯುಂಪುಲಿ, ತಾಯಿವೀಡು, ಅಡುತ್ತವಾರೀಸು, ತಂಗ ಮಗನ್, ತಂಬಿಕ್ಕು ಎಂದ ಊರು, ಅನ್ಬುಳ್ಳ ರಜಿನಿಕಾಂತ್, ಜಾನ್ ಜಾನಿ ಜನಾಧ೯ನ್, ಮಾವೀರನ್, ಮನಿದನ್, ಮಾಪಿಳ್ಳೈ, ಪಣಕ್ಕಾರನ್,ಧಮ೯ದೊರೈ ,ಧಳಪತಿ, ಮಣ್ಣನ್, ವಾಲಿ, ವೀರ, ಬಾಷಾ, ಮುತ್ತು, ಅರುಣಾಚಲಂ, ಪಡೆಯಪ್ಪ, ಬಾಬಾ, ಚಂದ್ರಮುಖಿ, ಶಿವಾಜಿ, ಕುಚೇಲನ್, ಎಂದಿರನ್, ರಾವನ್, ಕೊಚಾಡಿಯನ್, ಲಿಂಗ, ಕಾಳಾ, 2.0, ಪೇಟ. ದಬಾ೯ರ್,

ಇವರನ್ನು ಮೊದಲು ಕನ್ನಡ ಚಿತ್ರರಂಗದಲ್ಲಿ ಪರಿಚಯ ಮಾಡಿದವರು ಕನ್ನಡದ ಹೆಸರಾಂತ ನಿದೇ೯ಶಕರಾದ ಶ್ರೀ. ಪುಟ್ಟಣ್ಣ ಕಣಗಾಲ್ ರವರು ಕಥಾಸಂಗಮ ಚಿತ್ರದ ಮೂಲಕ ಪಾದಾಪ೯ಣೆ, ನಂತರ ಗಲಾಟೆ ಸಂಸಾರ, ಬಾಳು ಜೇನು, ಒಂದು ಪ್ರೇಮದ ಕಥೆ, ಸಹೋದರರ ಸವಾಲ್, ಮಾತು ತಪ್ಪದ ಮಗ ,ತಪ್ಪಿದ ತಾಳ, ಪ್ರಿಯ ಮುಂತಾದವು.

ನಟನೆಯಲ್ಲಿ ಕಿಂಗ್ ನಮ್ಮ ಅಣ್ಣಾವೃ ಮತ್ತು ಸ್ಟೈಲ್ ನಲ್ಲಿ ಕಿಂಗ್ ಇಬ್ಬರೂ ಸೇರಿ ಒಂದು ಚಿತ್ರ ಮಾಡಿದ್ದರೆ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ.

ಮಡದಿ ಲತಾ ರಜಿನಿಕಾಂತ್, ಇಬ್ಬರು ಹೆಣ್ಣು ಮಕ್ಕಳು ಐಶ್ವರ್ಯ ಮತ್ತು ಸೌಂದರ್ಯ ರಜನಿಕಾಂತ್, ಐಶ್ವರ್ಯ ಖ್ಯಾತ ನಟ ಧನುಶ್ ರವರನ್ನು ಮದುವೆಯಾಗಿ ಚೆನ್ನಾಗಿದ್ದಾರೆ ಸೌಂದರ್ಯ ರವರು ಸಹ ವಿವಾಹವಾಗಿ ಚೆನ್ನಾಗಿದ್ದಾರೆ.

ತಲೈವಾ ನಟಿಸಿದ ಹಲವು ಚಿತ್ರಗಳು ಪ್ರಶಸ್ತಿ ಪಡೆದಿವೆ

🌹ಮುತ್ತು ಚಿತ್ರದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ತಮಿಳು ನಾಡು ಸಕಾ೯ರ.
🎸ಪಡೆಯಪ್ಪ ಚಿತ್ರದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ತಮಿಳು ನಾಡು ಸಕಾ೯ರ.
💐ಚಂದ್ರಮುಖಿ ಚಿತ್ರದ ಅತ್ಯುತ್ತಮ ನಟ ಪ್ರಶಸ್ತಿ ತಮಿಳು ನಾಡು ಸಕಾ೯ರ ಗೌರವ.
👑ಶಿವಾಜಿ ಚಿತ್ರದ ಅತ್ಯುತ್ತಮ ನಟ ಪ್ರಶಸ್ತಿ ಫಿಲಂ ಫೇರ್.

ಇನ್ನೂ ಇವರ ಕೆಲವು ಫೇಮಸ್ ಡೈಲಾಗ್ ಗಳಿವೆ ನೋಡೋಣ :

👍ನಾ ಒರು ದಡುವು ಸೊನ್ನ ನೂರು ದಡವು ಸೊನ್ನ ಮಾದ್ರಿ.
💪ಆಂಡವ ಸೊಲ್ರ ಅರುಣಾಚಲಂ ಮುಡಿಕ್ಕುರ.
🤘ಇದು ಎಪ್ಪಡಿ ಇರುಕ್ಕು .
🥳ಸೀವಿಡುವೇನ್.
😎ಎನ್ ವಳಿ ತನೀ ವಳಿ.
😍ನಾ ಎಪ್ಪೊ ವರುವೆ ಎಪ್ಪಡಿ ವರುವೆನ್ ಯಾರುಕ್ಕೂ ತೆರಿಯಾದು, ಆನ ವರ ವೇಂಡಿಯ ನೇರತ್ತಿಲ್ ವಂದಿಡುವೇನ್.
🔥 ಸುಮ್ಮ ಪೇರ ಕೇಟ್ಟ ಅದುರುದುಲ.

ಗಾನ ಸಾವ೯ಭೌಮ ಎಸ್ ಪಿ ಬಿ ಸರ್ ಮತ್ತು ಇವರ ಸ್ನೇಹ ತುಂಬಾ ಚೆನ್ನಾಗಿತ್ತು, ರಜಿನಿ ರವರ ಯಾವುದೇ ಚಿತ್ರಗಳಿಗೆ ಎಸ್ ಪಿ ಬಿ ರವರು ಹಾಡಲೇಬೇಕು ಎಂದು ಕೇಳಿಕೊಂಡರು ಎಸ್ ಪಿ ಬಿ ರವರು ಸದಾ ಹಾಡಿನ ಚಿತ್ರೀಕರಣ ಬಿಝಿ ಇದ್ದರೂ ಸಮಯ ಮಾಡಿಕೊಂಡು ಹಾಡುತ್ತಿದ್ದರು.

ಒರುವನ್ ಒರುವನ್ ಮುದಲಾಲಿ, ಅದಾಂಡ ಇದಾಂಡ ಅರುಣಾಚಲಂ ನಾಂದಾಂಡ, ದೇವುಡಾ ದೇವುಡಾ ಏಳು ಮಲೆ ದೇವುಡಾ, ನಾಂದಾಂಡ ಇನುಮೇಲೆ ವಂದು ನಿನ್ನ ದಬಾ೯ರು.

ಎಸ್ ಪಿ ಬಿ ರವರು ಹಾಡಿದ ಕೊನೆಯ ಗೀತೆ ರಜಿನಿ ರವರ ಮುಂಬರುವ ಚಿತ್ರ ‘ಅಣ್ಣಾತ್ತೆ ” .

ಪದ್ಮವಿಭೂಷಣ ಮತ್ತು ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತರು ಕೂಡ.

ಹೊಸ ವಿಷಯ ರಜಿನಿ ರವರು ರಾಜಕೀಯ ಪ್ರವೇಶ ಮಾಡುತ್ತಿರೋದು ತಮಿಳು ನಾಡಿನ ಜನರು ಅಭಿಮಾನಿಗಳು ಆದರದಿಂದ ಕಾಯುತ್ತಿದ್ದಾರೆ, ಉತ್ತಮ ಆಡಳಿತ ಬಯಸುತ್ತಿದ್ದಾರೆ, ರಜಿನಿ ರವರು ಬಾಬಾ ಪರಮ ಭಕ್ತರು, ಆಧ್ಯಾತ್ಮಿಕ ದತ್ತ ಹೆಚ್ಚಿನ ಒಲವು.

ರಜಿನಿ ರವರ ಅಣ್ಣಾತ್ತೆ ಚಿತ್ರ ಆದಷ್ಟು ಬೇಗ ಬರಲಿ ಅಭಿಮಾನಿಗಳಿಗೆ ಸಂಭ್ರಮ ತರಲಿ ಎನ್ನೋಣ 💐

ಕೊನೆಯ ಮಾತು ಯಾವುದೇ ಒಬ್ಬ ವ್ಯಕ್ತಿಯ ಬಣ್ಣ ಮುಖ್ಯವಲ್ಲ, ಅವರಲ್ಲಿರುವ ಕಲೆ ಮುಖ್ಯ ಎಂದು ತೋರಿಸಿಕೊಟ್ಟ ಸೂಪರ್ ಸ್ಟಾರ್ ರಜನಿಕಾಂತ್ ರವರಿಗೆ ಹ್ಯಾಟ್ಸ್ ಆಫ್ ಹೇಳೋಣ ಮಿತ್ರರೇ.

ಮತ್ತೊಮ್ಮೆ ಹ್ಯಾಪಿ ಬರ್ತ್‌ಡೇ ತಲೈವಾ…

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply