ಥಾಯ್ ಚಿತ್ರ.
IMDB :7.1
ಜೇನ್ ಮತ್ತವಳ ಬಾಯ್‌ಫ್ರೆಂಡ್ ಟುನ್ ಕಾರ್‌ನಲ್ಲಿ ಹೋಗುತ್ತಿರಲು, ವ್ಹೀಲ್‌ನ ಹಿಂದೆ ಕುಳಿತ ಜೇನ್ ಒಂದು ಹುಡುಗಿಗೆ ಡಿಕ್ಕಿ ಹೊಡೆಯುತ್ತಾಳೆ.ಟುನ್‌ನ ಸಲಹೆಯ ಪ್ರಕಾರ ಆ ಸೀನ್‌ನಿಂದ ಇಬ್ಬರೂ ನಿರ್ಗಮಿಸುತ್ತಾರೆ. ಮತ್ತೆ ನೋಡಿದರೆ ಆ ಅಪಘಾತ ನಡೆದ ಕುರುಹು ಇದ್ದರೂ casualty ಯಾರೂ ಇರಲಿಲ್ಲ ಎಂದು ತಿಳಿಯುತ್ತದೆ.
![](http://chitrodyama.com/wp-content/uploads/2020/03/shutter-poster-3-725x1024.jpg)
ಹಾಗಿರಲು ಫೊಟೋಗ್ರಾಫರ್ ಆದ ಟುನ್ ತನ್ನ ನಿಕೊನ್ ಕ್ಯಾಮರಾದ ಚಿತ್ರಗಳನ್ನ ಪ್ರಿಂಟ್ ಹಾಕಿಸಿದಾಗ ಒಂದು ಚಿತ್ರದಲ್ಲಿ ಮಸುಕಾಗಿ ನೀಳಕೂದಲಿನ ಒಬ್ಬ ಹುಡುಗಿ ಕಾಣಿಸಿಕೊಳ್ಳುವುದಲ್ಲದೆ , ಕೆಲವಾರು ಚಿತ್ರಗಳು ನಿರ್ದಿಷ್ಟ ಕಡೆಯಲ್ಲಿ ಅತಿಯಾದ flash ನಿಂದ ಕೂಡಿರುತ್ತದೆ. ಫೊಟೋ ಡೆವಲಪರ್ ಪ್ರಕಾರ ” ಒಬ್ಬರಿಗೆ ಇನ್ನೊಬ್ರು ಇಷ್ಟವಾದ್ರೆ ಹಮೇಶಾ ಅವ್ರೊಂದಿಗೇ ಇರ್ತಾರಂತೆ”- ಇದು ಈ ಚಿತ್ರದ spoiler.
2004ರ ಥಾಯ್ ಚಿತ್ರ “Shutter” ತುಂಬಾ ಪ್ರಶಂಸೆಗೊಳಪಟ್ಟಿರುತ್ತದೆ..ಅಂತ ಅಂದ ಮೇಲೆ ಬಾಲಿವುಡ್ ಬಿಟ್ಟೀತೇ? ಎಲ್ಲರೊಂದಿಗೆ ನಮ್ದೂ ಒಂದು ಅಂತ 2010ರಲ್ಲಿ “Click” ಅಂತ ಒಂದು ಚಿತ್ರ ಮಾಡುತ್ತೆ…ಮೂಲದಲ್ಲಿ ಇಲ್ಲದಿದ್ದರೂ ಇದರಲ್ಲಿ ಗಾನಾ..ಸ್ವಲ್ಪ ಜಾಸ್ತಿಮೇಕಪ್… ಓವರ್ ಆಕ್ಟಿಂಗ್..ಸ್ವಲ್ಪ ಜಾಸ್ತಿ ಡಯಲಾಗ್ ಡೆಲಿವರಿ ಎಲ್ಲಾ ಇರುತ್ತೆ..ಆದರೆ…. (“ಶಟರ್” ನೆಟ್‌ಫ್ಲಿಕ್ಸ್” ನಲ್ಲಿದ್ದರೆ, “ಕ್ಲಿಕ್” ಹಾಟ್‌ಸ್ಟಾರ್” ನಲ್ಲಿದೆ..) ಕ್ಲೈಮಾಕ್ಸ್ ಬಂದಾಗ ನೆಟ್‌ಫ್ಲಿಕ್ಸ್ ಮಿನಿಮೈಸ್ ಮಾಡಿ ಹಾಟ್‌ಸ್ಟಾರ್ ನೋಡಬೇಕು… ಹೀಗೊಂದು ಅಂತ್ಯ ಕೊಡಬಹುದು ಅಂತ ಥಾಯ್ ನಿರ್ದೇಶಕನಿಗೆ ಯಾಕೆ ಹೊಳೆಯಲಿಲ್ಲವೋ? ತನ್ನದೇ ತಂತ್ರವಾಗಿದ್ದರೂ ಕೂಡಾ…
ಶಹಬ್ಬಾಸ್ ಬಾಲಿವುಡ್..( ಕದ್ರೂ ಏನಾದರೂ ಹೊಸತನ್ನು ನೀಡುವುದರಲ್ಲಿ ನಮ್ಮವರು ಭಲೇ) ಹಾರರ್ ಚಿತ್ರ ಆದುದರಿಂದ ಅಲ್ಲಲ್ಲಿ ಅದುರಿ ಬೀಳುತ್ತೇವೆ.. “