ನಾವೆಲ್ಲ ತುಂಬಾ ಭಕ್ತಿಯಿಂದ ಪೂಜಿಸೋ ದೇವರಲ್ಲಿ ಅಯ್ಯಪ್ಪಸ್ವಾಮಿ ಕೂಡ , ಎರಡು ಹಾಡು ಸದಾ ಕೇಳ್ತಿತೀ೯ವಿ ಆ ಹಾಡುಗಳಿಲ್ಲಂದ್ರೆ ಪೂಜೆ ಮುಗಿಯೊಲ್ಲ “ಹರಿವರಾಸನಂ ವಿಶ್ವಮೋಹನಂ ” ಹಾಗೂ “ಸ್ವಾಮಿ ಅಯ್ಯಪ್ಪ ಶರಣಂ ಅಯ್ಯಪ್ಪ ” ಈ ಹಾಡಿನ ಹಿನ್ನೆಲೆ ಧ್ವನಿ ಇಡೀ ದೇಶದಲ್ಲೇ ಫೇಮಸ್, ಹಾಡಿರೋರು ಕಟ್ಟಸೆರಿ ಜೋಸೆಫ್ ಯೇಸುದಾಸ್ (ಕೆ ಜೆ ಯೇಸುದಾಸ್) ಇವರಿಗೆ 10.01.2021 ಹುಟ್ಟು ಹಬ್ಬದ ಸಂಭ್ರಮ. ಜನುಮ ದಿನದ ಶುಭಾಶಯಗಳು ಸರ್ 💐
ಭಕ್ತಿಗೀತೆ, ಚಲನಚಿತ್ರ ಗೀತೆ ಮತ್ತು ಶಾಸ್ತ್ರೀಯ ಸಂಗೀತ ಹಾಡಿ ಮನೆಮಾತಾದ ಇವರು ಹುಟ್ಟಿದ್ದು ಕೊಚ್ಚಿ, ಕೇರಳ, ಲ್ಯಾಟಿನ್ ಕ್ಯಾಥೊಲಿಕ್ ಕ್ರಿಶ್ಚಿಯನ್ನರು, ತಂದೆ ಅಗಸ್ಟೈನ್ ಜೋಸೆಫ್ ತಾಯಿ ಎಲಿಜಬೆತ್ ಜೋಸೆಫ್, ತಂದೆ ಶಾಸ್ತ್ರೀಯ ಸಂಗೀತಗಾರ ಹಾಗೂ ರಂಗಭೂಮಿ ಕಲಾವಿದರು. ಇವರನ್ನೇ ಗುರುವಾಗಿ ಸ್ವೀಕರಿಸಿದ್ದರು.
ಸಂಗೀತ ತರಬೇತಿನ ಆರ್ ಎಲ್ ವಿ ಮ್ಯೂಸಿಕ್ ಅಕಾಡೆಮಿ, ತ್ರಿಪುನಿತುರ ಗಾನಭೂಷಣ ಕೋಸ್೯ ಮುಗಿಸಿ ನಂತರ ಸ್ವಾತಿ ತಿರುನಲ್ ಕಾಲೇಜ್ ಆಫ್ ಮ್ಯೂಸಿಕ್, ತಿರುವನಂತಪುರ ಕೆ ಆರ್ ರಾಮಸ್ವಾಮಿ ಮತ್ತು ಸೆಮ್ಮನ್ಗುಡಿ ಶ್ರೀನಿವಾಸ್ ಬಳಿ ಸಂಗೀತ ಕಲಿತರೂ ಆಥಿ೯ಕ ಪರಿಸ್ಥಿತಿಯಿಂದ ಪೂರ್ಣಗೊಳಿಸಲಾಗಲಿಲ್ಲ.
ಕನ್ನಡ ತಮಿಳು ತೆಲುಗು ಮಲಯಾಳಂ ಹಿಂದಿ ಬೆಂಗಾಳಿ ಒಡಿಯಾ ಅರಾಬಿಕ್ ಪಷಿ೯ಯನ್ ಭಾಷೆಗಳಲ್ಲಿ ಹಾಡಿ ಸಂಗೀತ ಸುಧೆ ಹರಿಸೋದು ಗಮನಾರ್ಹ.
ಇವರ ಮೊದಲ ಸಾಂಗ್ ರೆಕಾಡಿ೯ಂಗ್ “ಜಾತಿ ಭೇದಂ ಮತ ದ್ವೇಷಂ” ಬಹಳ ಜನಪ್ರಿಯವಾಗಿದೆ, ಕಲ್ಪಡುಕಲ್ ಚಿತ್ರಕ್ಕೆ ಹಾಡಿದ್ದು,
ಛೋಟೀ ಸಿ ಬಾತ್ ಹಿಂದಿ ಚಿತ್ರದ ಜಾನೇಮನ್ ಜಾನೇಮನ್ ಬಾಲಿವುಡ್ ನಲ್ಲಿ ಹಾಡಿದ ಹಿಂದಿ ಹಾಡು ಹೆಚ್ಚು ಮೆಚ್ಚುಗೆ ಪಡೆದಿದೆ.
ಅಮಿತಾಬ್ ಬಚ್ಚನ್, ಜಿತೇಂದ್ರ, ಅಮೋಲ್ ಪಲೇಕರ್ ರಿಗೆ ಹಾಡಿದ್ದಾರೆ, ಬಪ್ಪಿ ಲಹರಿ, ರವೀಂದ್ರ ಜೈನ್, ರಾಜ್ ಕಮಲ್, ಸಲೀಲ್ ಚೌದರಿ ಸಂಗೀತ ನಿದೇ೯ಶಕರ ಚಿತ್ರಗಳಲ್ಲಿ…
ಹೆಚ್ಚಾಗಿ ಮಲಯಾಳಂ ಚಿತ್ರಗಳಿಗೆ ಹಾಡಿದ್ದಲ್ಲದೆ ತಾವೂ ಕೂಡ ನಟರಾಗಿ ನಟಿಸಬಲ್ಲೆ ಅಂತ ತೋರಿಸಿಕೊಟ್ಟಿರೋದು ಕಾವ್ಯಮೇಳ, ಅನಾಕ೯ಲಿ, ಅಚ್ಚನಿ (ಸಿಂಗರ್) , ನಿರಕುಠಮಡಂ(ಸಿಂಗರ್), ನಂದನಂ, ಬಾಯ್ ಫ್ರೆಂಡ್..
ತಮಿಳಿನ ಶರಣಂ ಅಯ್ಯಪ್ಪ (ಸಿಂಗರ್) ಆಗಿ ನೋಡಬಹುದು.
ಕನ್ನಡ ಚಿತ್ರಗಳಲ್ಲಿ ಇವರು ಹಾಡಿರುವ ಹಾಡು ಪಾಪ್ಯುಲರ್ ಆದವು.
🦋ಟೂ ಟೂ ಟೂ ಬೇಡಪ್ಪ ಪ್ರೇಮಮಯಿ, ವಿಶೇಷ ಡಾ ರಾಜ್ ಕುಮಾರ್ ರವರಿಗೆ ಧ್ವನಿ ನೀಡಿರೋದು.
🎸ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ.
🎷ಎಲ್ಲೆಲ್ಲು ಸಂಗೀತವೇ, ಮಲಯ ಮಾರುತ.
🏇ಆ ಕಣ೯ನಂತೆ ನೀ ದಾನಿಯಾದೆ, ಕಣ೯.
🎩ಯಾರೇ ನೀನು ಚೆಲುವೆ ನಿನ್ನಷ್ಟಕ್ಕೆ ನೀನೆ ಏಕೆ ನಗುವೆ, ನಾನು ನನ್ನ ಹೆಂಡ್ತಿ.
🏇ಅಮ್ಮ ನಾನು ಕನ್ನಡದ ಕಂದ, ಎ ಕೆ 47.
ನಮ್ಮೂರ ಯುವರಾಣಿ, ರಾಮಾಚಾರಿ.
ಕನ್ನಡದಲ್ಲಿ ರಾಜ್ ಕುಮಾರ್, ಅಂಬರೀಷ್, ಶಂಕರ್ ನಾಗ್, ಶಿವರಾಜ್ ಕುಮಾರ್, ರವಿಚಂದ್ರನ್, ವಿಷ್ಣುವಧ೯ನ್ ,ಕಿಚ್ಚ ಸುದೀಪ್ ರವರಿಗೆ ಹಾಡಿದ್ದಾರೆ, ರವಿಚಂದ್ರನ್ ಹಂಸಲೇಖ ರಚಿತ ಹಾಡಿಗೆ ಹೆಚ್ಚಾಗಿ ಧ್ವನಿ ನೀಡಿರೋದು ಮತ್ತು ಹಾಡುಗಳು ಸೂಪರ್ ಹಿಟ್ ಆಗಿವೆ.
ಪರ ಭಾಷೆಯಲ್ಲಿ ಎಂ ಜಿ ಆರ್, ಶಿವಾಜಿ ಗಣೇಶನ್, ಜೆಮಿನಿಗಣೇಶನ್, ರಜನಿಕಾಂತ್, ಕಮಲ್ ಹಾಸನ್, ಭಾಗ್ಯರಾಜ್, ವಿಜಯ್ ಕಾಂತ್, ಮೋಹನ್, ಕಾತಿ೯ಕ್, ಸತ್ಯರಾಜ್, ಪ್ರಭು, ಮಮ್ಮೂಟಿ, ಶರತ್ ಕುಮಾರ್, ವಿಜಯ್, ವಿಕ್ರಮ್, ಅಜಿತ್, ಜೀವ ಇನ್ನೂ ಮುಂತಾದ ಕಲಾವಿದರಿಗೆ ಗಾಯಕರಾಗಿ ಪ್ರಖ್ಯಾತಿ ಪಡೆದವರು.
ಅಗೋ ಬಂದಳು ನೆನಪಿಗೆ.. ಇಗೋ ಬಂದಳು ಮನಸಿಗೆ..
ಸಂಗೀತದಲ್ಲಿ ವಿವಿಧ ಪ್ರಕಾರಗಳನ್ನು ಕರಗತಮಾಡಿಕೊಂಡ ಇವರು ಯಾವುದೇ ಹಾಡಿಗೆ ಭಾವ ಸೇರಿಸಿ ಹಾಡಿ ಪಫೆ೯ಕ್ಟ್ ರಿಸಲ್ಟ್ ಕೊಡ್ತಿದ್ರು.
ಚೆಂಬಲ್ ವೈದ್ಯನಾಥ್ ಭಾಗವತರ್ ಲೈವ್ ಕಾನ್ಸಟ್೯ ನಲ್ಲಿ ಹಂಸದ್ವನಿ, ಶಂಕರಾಭರಣಂ, ಆನಂದಭೈರವಿ, ತೋಡಿ, ಯದುಕುಲ ಕಾಂಬೋಜಿ ರಾಗಗಳಲ್ಲಿ ಹಾಡಿ ನೆರೆದ ಪ್ರೇಕ್ಷಕರು ಸಂಗೀತದಲ್ಲಿ ತೇಲಿದ್ದಾರೆ.
ಇಷ್ಟೆಲ್ಲಾ ಸಾಧನೆ ಮಾಡಿದ ದಿಗ್ಗಜ ಗಾಯಕರಿಗೆ ಪ್ರಶಸ್ತಿ ಮತ್ತು ಗೌರವ ತಾನಾಗಿಯೇ ಹುಡುಕಿಕೊಂಡು ಬಂದಿವೆ :-
🎩ಅಣ್ಣಾಮಲೈ ಯೂನಿವರ್ಸಿಟಿ, ತಮಿಳುನಾಡಿನ ಗೌರವ ಡಾಕ್ಟರೇಟ್.
👑ಕಲೈಮಾಮಿಣಿ ಪ್ರಶಸ್ತಿ, ತಮಿಳು ನಾಡು ಸಕಾ೯ರ.
🦋ತಮಿಳು ನಾಡು ಸಕಾ೯ರದಿಂದ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ 05 ಬಾರಿ .
👒ರಾಷ್ಟ್ರ ಪ್ರಶಸ್ತಿ 08 ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕ.
🎸ಕೇರಳ ಸಕಾ೯ರದಿಂದ 25 ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕ.
🎷ಆಂಧ್ರ ಪ್ರದೇಶ ಸಕಾ೯ರ 04 ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕ.
🦚ಸಂಗೀತ ಕಲಾಶಿಖಾಮಣಿ ಪ್ರಶಸ್ತಿ.
🏍ಪದ್ಮಭೂಷಣ ಬಿ ಸರೋಜ ದೇವಿ ಅವಾಡ್೯, ಭಾರತೀಯ ವಿದ್ಯಾಭವನ, ಬೆಂಗಳೂರು.
🌺ಕನಾ೯ಟಕ ರಾಜ್ಯೋತ್ಸವ ಅವಾಡ್೯.
🌲ಕನಾ೯ಟಕ ರಾಜ್ಯ ಪ್ರಶಸ್ತಿ ಅತ್ಯುತ್ತಮ ಹಿನ್ನೆಲೆ ಗಾಯಕ ರಾಮಾಚಾರಿ ಚಿತ್ರದ ನಮ್ಮೂರ ಯುವರಾಣಿ ಹಾಡಿಗೆ.
ಇವಲ್ಲದೇ ಇನ್ನೂ ಅನೇಕ ಪುರಸ್ಕಾರಗಳು ಇವರಿಗೆ ಬಂದಿವೆ.
ಪ್ರಭ ರವರ ಜೊತೆ ವಿವಾಹ ,ಮೂರು ಮಕ್ಕಳು ವಿಜಯ್, ವಿಶಾಲ್, ವಿನೋದ್, ವಿಜಯ್ ಯೇಸುದಾಸ್ ರವರು ಸಹ ನಟ, ಚಿತ್ರಗಳಲ್ಲಿ ನಟನೆ ಮಾಡುತ್ತಿದ್ದಾರೆ, ಗಾಯಕರೂ, ಸಂಗೀತಗಾರರು ಸಹ, ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಕೇರಳ ಸಕಾ೯ರ ನೀಡಿದೆ.
ಯೇಸುದಾಸ್ ಗುರು “ವೈದ್ಯನಾಥ್ ಭಾಗವತರ್” ಜ್ನಾಪಕಾಥ೯ವಾಗಿ ಚೆಂಬಲ್ ಅವರ ಪುತ್ಥಳಿಯನ್ನು ಸ್ಥಾಪಿಸಿದ್ದಾರೆ, ಪಾಲಕ್ಕಾಡ್ ಹಳ್ಳಿಯಲ್ಲಿ.
ಇವರು ಎಷ್ಟೋಂದು ಹಾಡುಗಳು ಹಾಡಿ ಪ್ರಸಿಧ್ಧಿ ಆದ್ರೂ ಒಂದು ಘಟನೆ ಇವರ ಜೀವನದಲ್ಲಿ ಮರೆಯಲಾಗದು ಕೇರಳದಲ್ಲಿ ಕೃಷ್ಣ ದೇವಸ್ಥಾನಕ್ಕೆ ಹೋದಾಗ ಒಳಗಡೆ ಬಿಡದಿರೋದು ಕಾರಣ ಜಾತಿ ಭೇದ ಮಾಡಿದವರು ಅಲ್ಲಿಯ ಜನರು, ಒಂದು ತಿಳಿದುಕೊಳ್ಳಲಿ ಇರೋದು ಎರಡೇ ಜಾತಿ ಒಂದು ಗಂಡು ಮತ್ತು ಇನ್ನೊಂದು ಹೆಣ್ಣು, ಇವರು ಹಾಡಿರೋ ಹಾಡುಗಳು ಬೇಕು ಆದ್ರೆ ದೇವಸ್ಥಾನದೊಳಗೆ ಬೇಡ ಅನ್ನೋದು ಯಾವ ನ್ಯಾಯ ಅಲ್ವೇ.. ಜಾತಿ ಭೇದ ಬಿಟ್ಟು ನಾವೆಲ್ಲರೂ ಒಂದೇ ಎಂದು ಬಾಳಬೇಕು.
“ತರಂಗಿಣಿ‘ ಸ್ಟೂಡಿಯೋ ಹೆಸರಿನಲ್ಲಿ ಸ್ವಂತ ಸ್ಟೂಡಿಯೋ ತಿರುವನಂತಪುರಂ ನಲ್ಲಿ ಮಾಡಿದ್ದರೂ ನಂತರ ಆಫೀಸ್ ಚೆನ್ನೈಗೆ ಶಿಫ್ಟ್ ಮಾಡಿ ಚಿತ್ರರಂಗದ ಹಾಗೂ ಇವರು ನಡೆಸಿಕೊಡುವ ಸ್ಟೇಜ್ ಶೋಗಳು ಸಂಬಂಧಿಸಿದ ರೆಕಾಡಿ೯ಂಗ್ ಕಂಪೆನಿಯಿಂದ ಮಲಯಾಳಂ ಹಾಡುಗಳು ಹೊರಬಂದಿವೆ.
50 ವಷ೯ಗಳ ಸುದೀರ್ಘ ಸಂಗೀತ ಸೇವೆ ಮಾಡಿದ ಇವರಿಗೆ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು.
ಇಷ್ಟು ಹೊತ್ತು ಇಂಥ ಸಾಧಕರ ಬಗ್ಗೆ ಕೆಲವು ಪ್ರಮುಖ ವಿಚಾರಗಳನ್ನು ತಮ್ಮ ಮುಂದೆ ಹೇಳುವ ಪ್ರಯತ್ನ ನನ್ನದು, ಓದಿ ಅನಿಸಿಕೆ ಹಂಚಿಕೊಳ್ಳಿ..
ಮತ್ತೊಮ್ಮೆ ಜನುಮ ದಿನದ ಶುಭಾಶಯಗಳು ದಿಗ್ಗಜ ಗಾಯಕ ಡಾ ಕೆ ಜೆ ಯೇಸುದಾಸ್ ರವರಿಗೆ ನಮ್ಮ ಚಿತ್ರೋದ್ಯಮ ತಂಡದಿಂದ.
ಇನ್ನೂ ಹೆಚ್ಚಿನ ಹಾಡುಗಳು ನಿಮ್ಮ ಮಧುರವಾದ ಕಂಠದಿಂದ ಬರಲಿ ಅಭಿಮಾನಿಗಳಿಗೆ ಸಂಭ್ರಮ ತರಲಿ 🙏