ಅಪಹರಣ್

Apharan…..ALT Balaji.. JIO CINEMA ದಲ್ಲಿ ಲಭ್ಯ.

24 ನಿಮಿಷಗಳ 10 ಎಪಿಸೋಡ್.. Playback ಸಂಗೀತದಿಂದ ಹಿಡಿದು ಪ್ರತಿ frame ಕೂಡಾ ಜಾಣ್ಮೆಯಿಂದ ಹೆಣೆದಂತಹಾ series.. Police officer ರುದ್ರ ಅಪಹರಣ specialist. ಒಂದು ಅಪಹರಣ ಕೇಸಿನಲ್ಲಿ ಎಡವಟ್ಟಾಗಿ ವಿನಾ ಕಾರಣ ಸಿಕ್ಕಾಕಿಕೊಂಡು ಜೈಲು ಸೇರುತ್ತಾನೆ‌.. ಅವನಿಗೊಬ್ಬ ಹೆಂಡತಿ.. ತನ್ನ ಗಂಡನನ್ನು ಜೈಲಿನಿಂದ ಹೊರತರಲು ಮಾಡಿದ ಸಾಲ ೭೦೦೦೦ ರುಪಾಯಿಗೋಸ್ಕರ ದುಬೆ ಜಿ ಯೊಡನೆ ಒಡನಾಟ..

ಗಂಡನ ಮೇಲಿನ ಪ್ರೀತಿಯಿಂದ ಸಾಲ ತೀರಿಸಲಾಗದೆ ನಿತ್ಯ sexually harassಗೊಳಗಾಗುವ ಆಕೆ.. ಜೈಲಿನಿಂದ ಹೊರಬಂದು ಕುಡಿತದ ದಾಸನಾದ ರುದ್ರನಿಗೆ ಸಿಕ್ಕುವವಳು ಮಧು ತ್ಯಾಗಿ .. ಗೋವಿಂದ ತ್ಯಾಗಿಯ ಎರಡನೇ ಪತ್ನಿ.. ಆಕೆಯ ಮಲಮಗಳು ಅನುಷಾಳನ್ನು ಅಪಹರಣ ಮಾಡಲು ಅಮಿಷ.. ಅಪಹರಣ specialist ಈಗ ಅಪಹರಣಕಾರ.‌.

ಎಡವಟ್ಟುಗಳ ಮೇಲೆ ಎಡವಟ್ಟು.

ಅನುಷಾ ನಿತ್ಯ ಕನಸು ಕಾಣುವ ಮಾಚೋ ಮ್ಯಾನ್‌ನನ್ನು ಈತನಲ್ಲಿ ಕಾಣುತ್ತಾಳೆ. ಕೊನೆಗೆ ತನ್ನ ತಪ್ಪುಗಳಿಗೆ ಬಲಿಯಾಗುತ್ತಿರುವ ಹೆಂಡತಿ ರಂಜನಾಳನ್ನು ರುದ್ರ ಬದುಕಿಸುತ್ತಾನೆಯೇ?

ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಇದನ್ನು ನೋಡಲೇಬೇಕು.

ಕ್ಲೈಮಾಕ್ಸ್‌ಗೆ ಫುಲ್ ಮಾರ್ಕ್ಸ್.

ಹಳೆ ಸಿನೆಮಾಗಳ ಚಿತ್ರಗೀತೆಗಳ ಬಳಕೆ ಮತ್ತು ಟೈಟಲ್ ಟ್ರಾಕ್‌ ತುಂಬಾ ಆಪ್ತವಾಗುತ್ತದೆ.. ಭಾಷೆ ಸ್ವಲ್ಪ strong ಆಗಿದೆ..

ಎಷ್ಟೋ ಸಮಯದ ನಂತರ ಒಂದು the best ಥ್ರಿಲ್ಲರ್ ನೋಡಿದ ಖುಷಿ

Rajesh Aithal

Rajesh Aithal

Leave a Reply