ಅಪ್ಪು ಕಾಂಬಿನೇಷನ್

appu

ಅಪ್ಪು ಅವರ ಸಿನಿಮಾಗಳು ಅಂದ್ರೆ ಅಲ್ಲಿ ಖಂಡಿತ ಒಳ್ಳೆ ಮನೋರಂಜನೆ ಜೊತೆಗೆ ಒಂದು ಮನ ಮುಟ್ಟುವ ಅನುಭವವು ಇದ್ದೆ ಇರುತ್ತದೆ. ಸಿನಿಮಾದ ಕಥೆ ಹಾಗೂ ತಂತ್ರಜ್ಞರನ್ನ ಆಯ್ಕೆ ಮಾಡುವಲ್ಲಿ ಹೆಚ್ಚು ಕಾಳಜಿ ವಹಿಸುವ ಪವರಸ್ಟಾರ್ ಇದೀಗ ಇಬ್ಬರು ಪ್ರಭಾವಿ ಪ್ರತಿಭಾವಂತ ನುರ್ದೇಶಕರ ಜೊತೆಗೆ ಕೆಲಸ ಮಾಡಲಿದ್ದಾರೆ. ಗಜಕೇಸರಿ ಮತ್ತು ಹೆಬ್ಬುಲಿ ಖ್ಯಾತಿಯ ನಿರ್ದೇಶಕ ಕೃಷ್ಣ ಅವರು ಅತಿ ಶೀಘ್ರದಲ್ಲೇ ಪುನೀತ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ, ಅದಾದ ಬಳಿಕ ದಿನಕರ್ ತೂಗುದೀಪ್ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಲಿದೆ. “ಜೊತೆ ಜೊತೆಯಲಿಸಾರಥಿ ಮತ್ತು “ನವಗ್ರಹ” ಚಿತ್ರಗಳ ಮೂಲಕ ಒಬ್ಬ ಪರಿಪೂರ್ಣ ನಿರ್ದೇಶಕನಾಗಿ ಗುರುತಿಸಿಕೊಂಡ ದಿನಕರ್,ಪುನೀತ್ ಅವ್ರಿಗೆ ಒಂದು ಒಳ್ಳೆ ಫ್ಯಾಮಿಲಿ ಸಬ್ಜೆಕ್ಟ್ ತಯಾರಿಸಿದ್ದಾರೆ ಎಂಬುದ ತಿಳಿಸಿದ್ದಾರೆ. ಹೊಸ ಅಲೆಯನ್ನ ತರಲು ಹೊಸ ಕಾಂಬಿನೇಷನ್ಗಳ ಅಗತ್ಯವಿರುತ್ತವೆ ಎಂದು ನಂಬುವ ಕಾಲವಿದು, ಆ ನಂಬಿಕೆಯ ಜೊತೆ ಹೆಜ್ಜೆ ಹಾಕುತ್ತಾ ಪವರ್ ಸ್ಟಾರ್ ಸಾಗಿದ್ದರೆ…

ಏಪ್ರಿಲ್ 1 ಕ್ಕೆ ಬಿಡುಗಡೆಯಾಗಲಿರುವ ಯುವರತ್ನ ಸಿನಿಮಾಗೆ ಭಾರಿ ದೊಡ್ಡ ನಿರೀಕ್ಷೆಯ ಇದೆ, ಸಿನಿಮಾ ತಂಡ ಕಳೆದ ವಾರ ಕೋಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು.

ಯುವರತ್ನ ಸಿನಿಮಾದ ಟ್ರೈಲರ್ ಮತ್ತು ಹಾಡುಗಳಿಂದ ಈಗಾಗ್ಲೇ ಸಾಕಷ್ಟು ಪ್ರಚಾರ ದೊರಕಿದೆ, ಅದನ್ನ ಉನ್ನತ ಹಂತಕ್ಕೆ ತಲುಪಿಸಲು ಮುಂದಿನ ವಾರ ಮೈಸೂರಿನಲ್ಲಿ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದಾರೆ. ಅಭಿಮಾನಿಗಳು ಸಾವಿರ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

One thought on “ಅಪ್ಪು ಕಾಂಬಿನೇಷನ್

Leave a Reply