( ಮುಂದುವರೆದ ಭಾಗ )
ಎಷ್ಟು ಬಿಝಿಯಾದ ನಟರೆಂದರೆ ಚಿತ್ರರಂಗದಲ್ಲಿ ಚಿತ್ರಗಳು ಒಂದಕ್ಕಿಂತ ಒಂದು ಸಮಯವಿಲ್ಲದೆ ನಟಿಸುತ್ತಿದ್ದುದು, ಅಣ್ಣಾವೃ ಇವರ ಕಾಲ್ ಶೀಟ್ ಗಾಗಿ ಕಾಯುತ್ತಿದ್ದರು. ಇವರಿಗಾಗಿ ತಮ್ಮ ಚಿತ್ರ ದಿನಾಂಕ ಹೊಂದಿಸಿಕೊಳ್ಳುತ್ತಿದ್ದರು.
ಅಣ್ಣಾವೃ ಇವರು ಒಟ್ಟಿಗೆ ತೆರೆಯ ಮೇಲೆ ಬಂದ್ರೆ ಅಭಿಮಾನಿಗಳಿಗೆ ಹಬ್ಬ ಹಾಸ್ಯ ದೃಶ್ಯಗಳು, ಅಣ್ಣಾವ್ರ ಯಾವುದೇ ಚಿತ್ರಗಳಿಗೆ ಇವರು ಇರಬೇಕಿತ್ತು, ಕಾಮಿಕ್ ಟೈಮಿಂಗ್ ಪಫೆ೯ಕ್ಟ್.
ಅಣ್ಣಾವ್ರ ಜೊತೆ ಅಲ್ಲದೆ ಇತರೆ ಚಿತ್ರಗಳಲ್ಲಿ ನಟಿಸಿದ್ದಾರೆ : ಶರಪಂಜರ, ಒಂದೇ ರೂಪ ಎರಡು ಗುಣ, ಲಕ್ಷ್ಮಿ ನಿವಾಸ, ಕಿಟ್ಟು ಪುಟ್ಟು, ಮಾತು ತಪ್ಪದ ಮಗ, ಪ್ರೀತಿ ಮಾಡು ತಮಾಷೆ ನೋಡು, ಕಿಲಾಡಿ ಕಿಟ್ಟು, ಅಸಾಧ್ಯ ಅಳಿಯ ..
ಕಲ್ಪನ ರವರಂತ ಅಪ್ರತಿಮ ಕಲಾವಿದೆಗೆ ಆರಂಭದಲ್ಲಿ ಆಶ್ರಯ ನೀಡಿ ಅವರು ಚಿತ್ರರಂಗದಲ್ಲಿ “ಮಿನುಗುತಾರೆ ” ಯಾಗುವಂತಾಯಿತು. ಹಾಗೆ ರಾಜ್ ಕುಮಾರ್, ಬಾಲಕೃಷ್ಣ, ಜಿ ವಿ ಅಯ್ಯರ್ ಜೊತೆ ಸೇರಿ ಕನ್ನಡ ಕಲಾವಿದರ ಸಂಘ ಸ್ಥಾಪಿಸಿ ಊರೂರುಗಳಲ್ಲಿ ನಾಟಕ ಆಡಿ ಬಂದ ಹಣದಿಂದ “ರಣಧೀರ ಕಂಠೀರವ ” ಚಿತ್ರ ನಿಮಿ೯ಸಿದರು, ಈ ನಾಲ್ವರ ಪ್ರಯತ್ನವೆ ಇಂದು ಕನ್ನಡ ಚಿತ್ರರಂಗ ಕನಾ೯ಟಕದಲ್ಲಿ ನೆಲೆ ನಿಲ್ಲಲು ಕಾರಣವೆಂದರೆ ತಪ್ಪಾಗಲಾರದು. ಬಾಲಣ್ಣ ಮತ್ತು ನರಸಿಂಹರಾಜು ರವರ ಕೆಮಿಸ್ಟ್ರಿ ಬಹಳ ಚೆನ್ನಾಗಿ ಆಗಿರೋದರಿಂದ ತೆರೆಯ ಮೇಲೆ ಇವರನ್ನು ಜನ ನೋಡಲು ಇಷ್ಟ ಪಡುತ್ತಿದ್ದರು.
ನರಸಿಂಹರಾಜು ನಟಿಸಿದ ಚಿತ್ರಗಳಲ್ಲಿ ಅವರಿಗೆ ಹಾಡು ಕಡ್ಡಾಯವಾಗಿರುತ್ತಿತ್ತು ಕಾರಣ ನಾಯಕ ನಟರಿಗಿಂತ ಹಾಸ್ಯ ನಟರಿಗಿದ್ದ ಬೇಡಿಕೆ ಹೆಚ್ಚು ಇರುತ್ತಿದ್ದದ್ದು.ರತ್ನ ಮಂಜರಿ ಚಿತ್ರದ “ಯಾರು ಯಾರು ನೀ ಯಾರು ಎಲ್ಲಿಂದ ಬಂದೆ ಯಾವೂರು ” ಹಾಡು ಬಹಳ ಜನಪ್ರಿಯವಾಗಿದೆ.
“ಗಿಡ್ಡ ಆಕೃತಿ, ಪೀಚಲು ದೇಹ, ತುಟಿ ಮೀರಿ ಹೊರಬಂದ ಹಲ್ಲುಗಳು ಪಾತ್ರ ಪೋಷಣೆಯಲ್ಲಿನ ಚಾಕಚಕ್ಯತೆ ಮತ್ತು ಸಭ್ಯತೆ, ಹಾಸ್ಯವೆಂದರೆ ನರಸಿಂಹರಾಜು ರವರೆ ಎಂದು ಹೇಳೋದು ಅತಿಶಯೋಕ್ತಿಯಲ್ಲ”.
ಬೇಡರ ಕಣ್ಣಪ್ಪ ಚಿತ್ರದಲ್ಲಿ ಕಾಶಿ, ಸತ್ಯ ಹರಿಶ್ಚಂದ್ರ ದಲ್ಲಿ ನಕ್ಷತ್ರಿಕ, ಕೃಷ್ಣದೇವರಾಯ ದಲ್ಲಿನ ತೆನಾಲಿ ರಾಮಕೃಷ್ಣ ಇನ್ನೂ ಹಲವಾರು ವೈವಿಧ್ಯಮಯ ಪಾತ್ರಗಳನ್ನು ನಟಿಸಿರೋದು ಗಮನಿಸಬಹುದು.ಬೇಡರ ಕಣ್ಣಪ್ಪ ಚಿತ್ರದಲ್ಲಿ ಕಾಶಿ ಪಾತ್ರ ಕನ್ನಡ ಚಿತ್ರರಂಗಕ್ಕೆ ಹಾಸ್ಯ ದಿಗ್ಗಜರನ್ನು ಪರಿಚಯಿಸಲು ಸಾಧ್ಯವಾಯಿತು, ಎಲ್ಲದಕ್ಕೂ ಕಾರಣ ಇವರ ಚಿಕ್ಕಪ್ಪ ಲಕ್ಷ್ಮಿಪತಿರಾಜು ರವರು ಇವರಿಗೆ ಎಲ್ಲಾ ರೀತಿಯ ಮಾಗ೯ದಶ೯ನ ನೀಡಿದವರು ಮತ್ತು ಹೆಚ್ ಎಲ್ ಎನ್ ಸಿಂಹ ರವರು ಬೇಡರ ಕಣ್ಣಪ್ಪ ಚಿತ್ರದ ಪಾತ್ರಗಳಿಗೆ ಈ ತ್ರಿಮೂರ್ತಿಗಳನ್ನು ಆಯ್ಕೆ ಮಾಡಿದ್ದು ಮುಂದೆ ಇತಿಹಾಸ ಬರೆಯಿತು.
ಸಹಕಲಾವಿದರಾದ ಮೈನಾವತಿ, ಜಯಮ್ಮ, ಆದವಾನಿ ಲಕ್ಷ್ಮಿದೇವಿ , ಪಾಪಮ್ಮ ರವರು ಕೂಡ ಇವರ ಜೊತೆ ಅಷ್ಟೇ ಖುಷಿಯಾಗಿ ನಟಿಸುತ್ತಿದ್ದರು.
( ಮುಂದುವರೆಯುವುದು )