ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾರಿ ಕೋಪದಿಂದ ಘರ್ಜಿಸಿದ್ದಾರೆ. ಅವರ ಬಹು ನಿರೀಕ್ಷಿತ ಚಿತ್ರವಾದ ರಾಬರ್ಟ್ ರಾಜ್ಯಾದ್ಯಂತ ಬಿಡುಗೆಯಾಗ್ತಿದೆ, ಕನ್ನಡವಷ್ಟೇ ಅಲ್ಲದೆ ಸಿನಿಮಾ ತೆಲುಗಿನಲ್ಲೂ ಸಹ ಡಬ್ ಆಗಿ ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿಯು ಕೂಡ ಏಕಕಾಲಕ್ಕೆ ಬಿಡುಗಡೆ ಮಾಡಬೇಕೆಂಬ ತೀರ್ಮಾನ ಸಿನಿಮಾ ತಂಡ ಮಾಡಿದೆ. ಎಲ್ಲವೂ ಸಿದ್ದ ಇನ್ನೇನು ರಿಲೀಸ್ ದಿನಾಂಕ ಹತ್ತಿರ ಬರ್ತಿದೆ ಅನ್ನೋ ಸಮಯದಲ್ಲಿ ತೆಲುಗಿನ ವಿತರಕರು ಮತ್ತು ಚಿತ್ರ ಪ್ರದರ್ಶಕರು ಕೈ ಎತ್ತಿದ್ದಾರೆ.
ಆಂಧ್ರ ಮತ್ತು ತೆಲಂಗಾಣದಲ್ಲಿ “ರಾಬರ್ಟ್” ಸಿನಿಮಾನ ನಾವು ಹೆಚ್ಚಿಗೆ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಮಾಡಲು ಸಾಧ್ಯವಿಲ್ಲ, ಇಲ್ಲಿಯ ನಟರ ಸಿನಿಮಾಗಳೆ ಸಾಲು ಸಾಲಾಗಿದೆ, ಅಂತ ಹೇಳಿ ಜಾರಿಕೊಂಡಿದ್ದಾರೆ. ತೆಲುಗು ನಟರ ಸಿನಿಮಾ ಇಲ್ಲಿ ಬಿಡುಗಡೆಯಾದರೆ ಅದಕ್ಕೆ ಸಿಗೋ ಚಿತ್ರಮಂದಿರಗಳ ಸಂಖ್ಯೆ ಕನ್ನಡಕ್ಕಿಂತ ಹೆಚ್ಚಾಗಿರುತ್ತದೆ, ಅದೇ ಕನ್ನಡ ಸಿನಿಮಾ ಅಲ್ಲಿ ಬಿಡುಗಡೆ ಮಾಡಬೇಕಂದ್ರೆ ಅದಕ್ಕೆ ನೂರಾರು ತಕರಾರು, ಡಬ್ ಆದ ಸಿನಿಮಾಗಳಿಗೆ ಇಂತಿಷ್ಟೇ ಚಿತ್ರಮಂದಿರ ನಿಗದಿತವಾಗಿರುತ್ತದೆ ಅನ್ನೋ ತೊಳ್ಳು ನೆಪ ಹೇಳ್ತಿದ್ದಾರೆ.
ನಮ್ಮ ಸಿನಿಮಾ ಅಲ್ಲಿ ಬಿಡುಗಡೆಯಾದರೆ ಖಂಡಿತ ಅದು ಜನರಿಗೆ ಇಷ್ಟವಾಗಿ ಸೂಪರ್ ಹಿಟ್ ಆಗುವುದರಲ್ಲಿ ಅನುಮಾನವಿಲ್ಲ, ಅದರಿಂದ ಮೂಲ ತೆಲುಗು ಸಿನಿಮಾಗಳಿಗೆ ನೇರವಾಗಿ ತೊಂದರೆ ಆಗಲಿದ್ದು, ಆದ ಕಾರಣ ಅಲ್ಲಿಯ ಸಿನಿಮಾ ವಿತರಕರು ಹೆದರಿದ್ದಾರೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.
ನಮ್ಮ ಕನ್ನಡ ಭಾಷೆ,ಸಿನಿಮಾ ನಮಗೆ ಬಹಳ ಮುಖ್ಯವಾಗಬೇಕು ಅನ್ಯ ಭಾಷೆಗಳ ಸಿನಿಮಾವನ್ನ ಪ್ರಮುಖವಾಗಿ ಕಾಣುವುದನ್ನ ಎಂದು ನಿಲ್ಲಿಸುತ್ತಾರೆ ಆಗ ಉದ್ಯಮ ಮತ್ತು ನಮ್ಮ ತನ ಇನ್ನಷ್ಟು ಧೃದಗೊಳ್ಳುವುದು.
ಘರ್ಜನೆ ಫಲ ತಂದಿತು.. ತೆಲುಗಿನ ಮಹೇಶ ಬಾಬು ಅವರ ಆಪ್ತ ಹಾಗೂ ಸಿನಿ ವಿತರಕರಾದ ಸುನಿಲ್ ಎಂಬವರು ರಾಬರ್ಟ್ ತೆಲುಗಿನ ಅವೃತಿಯನ್ನ ಆಂಧ್ರದಲ್ಲಿ ವಿತರಿಸಲು ಮುಂದಾಗಿದ್ದಾರೆ, ಆಂಧ್ರ ಹಾಗೂ ತೆಲಂಗಾಣ ಸೇರಿ 600 ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ಸಜ್ಜಾಗಿದ್ದರೆ