ನೈಟ್ ಎಂಡ್ ಡೇ (2010)- ಉಸಿರು ಬಿಗಿಹಿಡಿಯುವ ಕತೆಯಲ್ಲೂ ಹಾಸ್ಯ ಉಳ್ಳ ಥ್ರಿಲ್ಲರ್

ಟಾಂ ಕ್ರುಯೀಸ್ ಹಾಲಿವುಡ್ಡಿನ ಒಬ್ಬ ಅತ್ಯಂತ ಪ್ರತಿಭಾವಂತ ನಟನೂ ಹೌದು, ನಂಬರ್ ಒನ್ ಆ್ಯಕ್ಷನ್ ಹೀರೋ ಸಹಾ ಹೌದು.
ಏಕ್ ದಂ ಹ್ಯಾಂಡ್ ಸಮ್!


ನನ್ನ ಮತ್ತು ಕುಟುಂಬದವರೆಲ್ಲರ ಅಚ್ಚುಮೆಚ್ಚಿನ ನಟ ಸಹಾ.
ನಿಮ್ಮಲ್ಲಿ ಬಹುತೇಕ ಇಂಗ್ಲೀಷ್ ಚಿತ್ರಪ್ರೇಮಿಗಳು ಟಾಂ ನ ಯಾವುದಾದರೂ ಮಿಷನ್ ಇಂಪಾಸಿಬಲ್ ಸರಣಿಯ ಚಿತ್ರವನ್ನು ನೋಡಿರುತ್ತೀರಿ!
ಆದರೂ ಹಿಂದಿಯಲ್ಲಿ ರಿಮೇಕ್ ಆಗಿ ಅಂತಾ ಯಶಸ್ಸು ಕಾಣದ ಹ್ರುತಿಕ್ ರೋಶನ್+ ಕೆಟ್ರೀನಾ ಕೇಫ್ ತಾರಾಗಣದ “ಬ್ಯಾಂಗ್ ಬ್ಯಾಂಗ್” ಚಿತ್ರದ ಒರಿಜಿನಲ್ ಈ ಹಾಲಿವುಡ್ ಚಿತ್ರವಾದ-Knight and Day- ನೈಟ್ ಎಂಡ್ ಡೇ- ಅತಿ ಅಧ್ಭುತ ಥ್ರಿಲ್ಲರ್ ಚಿತ್ರಗಳ ಸಾಲಿನಲ್ಲಿ ತಾನೇ ಮೇಲೆ ನಿಲ್ಲುತ್ತದೆ.
ಥ್ರಿಲ್ಲರ್ ನಲ್ಲಿ ಲೀಲಾಜಾಲವಾಗಿ ಎಂತದೇ ಆಕ್ಷನ್ ಸೀನ್ ಮಾಡಬಲ್ಲ ಟಾಮ್ ಇದರಲ್ಲಿ ಅತಿ ನವಿರಾದ ನಗೆಯುಕ್ಕಿಸುವ ಸರಳ ವ್ಯಕ್ತಿಯಾಗಿಯೂ ಕಾಣುತ್ತಾನೆ. ಅವನ ಹಾಸ್ಯ ಪ್ರಜ್ಞೆ , ಅತ್ಯಂತ ಭಯಾನಕ ಫೈಟಿಂಗ್ ಸೀನನ್ನು ತಮಾಷೆಯೆಂಬಂತೆ ತೋರಿಸಿಕೊಳ್ಳುವುದು ಬಹಳರ ಮನ ಗೆಲ್ಲುತ್ತದೆ.
ಅವನ ಜತೆಯಲ್ಲಿ ಸಿಕ್ಕಿಹಾಕಿಕೊಂಡ ಏನೂ ತಿಳಿಯದ ಸಾಮಾನ್ಯಳಂತೆ ನಟಿ ಕ್ಯಾಮರಾನ್ ಡಯಾಜ಼್ ಸಹಾ ಬಹಳ ಸಹಜವಾಗಿ ತನ್ನ ಪಾತ್ರವನ್ನು ಸರಳತೆ

ಮತ್ತು ಸರಿಗಟ್ಟುವ ಹಾಸ್ಯದಿಂದ ನಮ್ಮ ಮನಸೆಳೆಯುತ್ತಾಳೆ.
ಒಬ್ಬ ಜನಸಾಮಾನ್ಯರಲ್ಲಿ ಒಬ್ಬಳಾದ ಯುವ ಸುಂದರಿ ಇಂತಾ ನೂರು ಜನರನ್ನು ಬಗ್ಗು ಬಡಿಯಬಲ್ಲ ಖತರ್ನಾಕ್ ಏಜೆಂಟಿನ ಜತೆ ಆಕಸ್ಮಿಕವಾಗಿ ಗಂಟುಬಿದ್ದು ಜೀವನ್ಮರಣದ ಹೋರಾಟದಲ್ಲಿ ಸಿಲುಕಿ ಹಲವು ವಿಲನ್ ತಂಡಗಳಿಂದ ತಪ್ಪಿಸಿಕೊಳ್ಳುತ್ತಾ ಅಮೆರಿಕಾ, ಯುರೋಪ್ ಎಲ್ಲಾ ಸುತ್ತುತ್ತಾ ಹೋಗಬೇಕು. ಅದರಲ್ಲಿಯೂ ಅವಳಿಗೆ ಬಹಳ ರಹಸ್ಯಮಯವಾಗಿ ಏನೂ ಗುಟ್ಟು ಬಿಟ್ಟಿಕೊಡದ ನಾಯಕ ಬೇರೆ!.. ಅವಳಿಗೆ ನಡುವೆ ಸಾಕು ಸಾಕಾಗಿ ಓಡಿಹೋಗಲೆತ್ನಿಸುವುದು ಮತ್ತೆ ಸಿಕ್ಕಿ ಬೀಳುವುದು ಎಲ್ಲವನ್ನೂ ಬಹಳ ನೈಜವಾಗಿ ನಿರ್ದೇಶಕ ಜೇಮ್ಸ್ ಮ್ಯಾನ್ ಗೋಲ್ಡ್ ಕಟ್ಟಿಕೊಟ್ಟಿದ್ದಾರೆ.
ಕೆಲವು ದೃಶ್ಯಗಳು ಸಾಹಸದ ತುತ್ತ ತುದಿ ಕರೆದೊಯ್ದರೂ ಅದರಲ್ಲೂ ಅವರಿಬ್ಬರ ತುಂಟ ಸಂಭಾಷಣೆ, ನಾಯಕಿಯ ಅಸಹಾಯಕತೆ, ನಾಯಕನ ಹೀರೋಯಿಸ್ಮ್ ಎಲ್ಲವೂ ಹದವಾಗಿ ನೇಯಲ್ಪಟ್ಟಿದೆ. ಇಂಗ್ಲೀಷ್ ಡೈಲಾಗ್ಸ್ ಕೇಳಿ ಅರ್ಥಮಾಡಿಕೊಳ್ಳಲಾರದವರು
ಸಬ್ ಟೈಟಲ್ಸ್ ನಲ್ಲಿ ಆ ಇಂಗ್ಲೀಷ್ ಸಂಭಾಷಣೆಯನ್ನು ಓದುತ್ತಾ ಎಂಜಾಯ್ ಮಾಡಿ.
(ಇದನ್ನೇ ಹಿಂದಿಯ “ಬ್ಯಾಂಗ್ ಬ್ಯಾಂಗ್” ಚಿತ್ರ ಪೂರ್ತಿ ಕಾಪಿ ಹೊಡೆದು ಅನುಕರಿಸಲು ಹೋಗಿ ನ್ಯಾಯ ಕೊಡಲಾಗದೇ ಎಡವಿದ್ದು ಅನಿಸುವುದು, ಎರಡೂ ನೋಡಿದ್ದರೆ!)
ಒಂದು ಕ್ಷಣವೂ ಕಣ್ಣು ಎವೆಯಿಕ್ಕದೇ ನೋಡಬೇಕಾದ ಥ್ರಿಲ್ಲರ್ ಚಿತ್ರ ಇದು.
ಅಂತರಾಷ್ಟ್ರೀಯ ಜಾಲ ಮತು ಸರಕಾರ ಯಾವುದನ್ನೋ ಬಯಸುತ್ತಿದೆ ಆದರೆ ನಾಯಕ ಅದನ್ನು ಏನೇ ಮಾಡಿದರೂ ಬಿಟ್ಟುಕೊಡಲಾರ, ಜೀವ ಪಣಕ್ಕಿಟ್ಟು ಸಹಾ…ಏನದು? ಇಷ್ಟು ಮಾತ್ರ ಹೇಳಬಲ್ಲೆ, ನಿಮ್ಮ ಆಸಕ್ತಿಗೆ ಭಂಗ ಬರುವ ಸ್ಪಾಯಿಲರ್ಸ್ ಹೇಳದೇ.
11 ವರ್ಷ ಹಿಂದಿನದು, ಆದರೆ ಇವತ್ತು ತೆಗೆದಂತಿದೆ ತಾಂತ್ರಿಕ ಮೌಲ್ಯಗಳು ದೊಡ್ಡ ಬಜೆಟ್ಟಿನಲ್ಲಿ!

ನನ್ನ ರೇಟಿಂಗ್: 4.5/5

ಇದು ನನ್ನ ಟಾಪ್ ಟೆನ್ ಥ್ರಿಲ್ಲರ್ಸ್ ನಲ್ಲಿ ಸದಾ ಒಂದಲ್ಲಾ ಒಂದು ಸ್ಥಾನದಲ್ಲಿರುವುದು…ಬಹಳ ಕಾಲ!
ಖಂಡಿತಾ ನೋಡಿ: ಪ್ರೈಮ್ ವಿಡಿಯೋ ಓಟಿಟೀ ನಲ್ಲಿದೆ
https://www.primevideo.com/detail/amzn1.dv.gti.e8b05557-994b-7316-b517-a95b90dab047?ref=dvm_tt_wbr_pvs_piv&tag=imdbtag_tt_wbr_pvs_piv_in-21

Nagesh Kumar C S

Nagesh Kumar C S

ಹವ್ಯಾಸಿ ದ್ವಿಭಾಷಾ ಬರಹಗಾರ ನಾಗೇಶ್ ಕುಮಾರ್ ಸಿ.ಎಸ್‌. ಅವರು ಜನಿಸಿದ್ದು ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಚೆನ್ನೈ ನಗರದ ಬಹುರಾಷ್ಟ್ರೀಯ ಸಂಸ್ತೆಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಬರೆದ ಸಣ್ಣ ಕತೆ, ಕಿರು ಕಾದಂಬರಿಗಳು ತರಂಗ, ತುಷಾರ ಉತ್ಥಾನ, ಸುಧಾ, ಕರ್ಮವೀರ ಸೇರಿದಂತೆ ಹಲವಾರು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ. ರಕ್ತಚಂದನ, ನಾಳೆಯನ್ನು ಗೆದ್ದವನು, ಕರಾಳ ಗರ್ಭ, ಅಬಲೆಯ ಬಲೆ, ಹಿಮಜಾಲ, ರಹಸ್ಯಾಯನ ಇವರ ಪ್ರಮುಖ ಕೃತಿಗಳು. ‘ಕರಾಳ ಗರ್ಭ’ ಅವರ ಆಡಿಯೋ ಪುಸ್ತಕ ಇತ್ತಿಚೆಗೆ ಬಿಡುಗಡೆಗೊಂಡಿದ್ದು ಕೇಳುಗರಿಂದ ಮೆಚ್ಚುಗೆ ಪಡೆದಿದೆ. ಇವರು ಪ್ರತಿಲಿಪಿ ವೇದಿಕೆಯಲ್ಲಿ 1.5 ಲಕ್ಷ ಓದುಗರನ್ನು ಪಡೆದಿದ್ದಾರೆ. ಚಿತ್ರವಿಮರ್ಶೆಯಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ ಚಿತ್ರರಸಿಕರೂ ಆಗಿ ಹಲವಾರು ಫೇಸ್ ಬುಕ್ ಗ್ರೂಪ್ಸ್ ನಲ್ಲಿ ಸಕ್ರಿಯರಾಗಿದ್ದು.,, ಕನ್ನಡ ಹಿಂದಿ ತಮಿಳು ಇಂಗ್ಲೀಷ್ ಚಿತ್ರವಿಮರ್ಶೆಗಳನ್ನು ಬ್ಲಾಗ್ ನಲ್ಲಿ ನಡೆಸುವುದಲ್ಲದೇ IMDB website ನಲ್ಲಿ ಇಂಗ್ಲೀಶ್ ವಿಮರ್ಶಕರಾಗಿ ಭಾಗಿಯಾಗಿದ್ದಾರೆ

Leave a Reply