ಮನು ಯಾರು? ಅವನ ಜೋಡಿ ಯಾರು??? ..ಅದಕ್ಕೆ ಉತ್ತರ ಇಲ್ಲಿದೆ .. ರಕ್ಷಿತ್ ಶೆಟ್ಟಿ ಅಭಿನಯದ ” ಸಪ್ತ ಸಾಗರದಾಚೆ ಎಲ್ಲೊ” ಸಿನಿಮಾದಲ್ಲಿ ಅವರ ಪಾತ್ರದ ಹೆಸರು “ಮನು”, ಮನುವಿಗೆ ಒಗ್ಗೂಡುವ ಜೋಡಿಯ(ನಾಯಕಿ) ಹುಡುಕಾಟ ನಡೀತಿತ್ತು, ಆಗ ಅವರ ಕಣ್ಣಿಗ ಬಿದ್ದು , ಇವರೇ ಸೂಕ್ತ ಅನ್ಸಿದ್ದು “ರುಕ್ಮಿಣಿ ವಸಂತ”. ಬಿರ್ಬಲ್ ಟ್ರೈಯಾಲಜಿ ಸಿನಿಮಾದಲ್ಲಿ ಎಂ.ಜಿ. ಶ್ರೀನಿವಾಸ್ ಜೊತೆಗೆ ವಕೀಲೆಯಾಗಿ ನಟಿಸಿ, ತನ್ನ ಸರಳ ಸಹಜ ಅಭಿನಯದಿಂದ ಪರಿಚಿತರಾದ್ರು ರುಕ್ಮಿಣಿ.
ಮೂಲತಹ ಕೆರಳಾದವರಾದರು ಬಹಳ ಸೊಗಸಾಗಿ ಕನ್ನಡ ಮಾತಾಡ್ತಾರೆ, ಈಕೆಯ ತಂದೆ ಇಂಡಿಯನ್ ಆರ್ಮಿಯಲ್ಲಿ ಕರ್ನಲ್ ಆಗಿದ್ದು, ಈಗ ಅಮರರಾಗಿದ್ದಾರೆ. ಸಿನಿಮಾ ಹಾಗೂ ನಟನೆಯಲ್ಲಿ ತೀವ್ರ ಆಸಕ್ತಿ ಇದ್ದು ಎಲ್ಲಾ ಪೂರ್ವ ಸಿದ್ಧತೆ, ತರಬೇತಿ ಬಳಿಕವೇ ನಟಿಸಲು ಮುಂದಾಗಿದ್ದಾರೆ.ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ತಂಡ ಮತ್ತೆ ಒಂದಾಗಿ ಈ ಸಿನಿಮಾನ ತಯಾರಸ್ತಿದ್ದಾರೆ. ನಿರ್ದೇಶಕ ಹೇಮಂತ್ ರಾವ್, ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನ ಹಾಗೂ ನಾಯಕ ರಕ್ಷಿತ್ ಶೆಟ್ಟಿ . ಶ್ವೇತ ವಸ್ತ್ರಧಾರಿ, ಗುಂಡು ಕಣ್ಣಿನ ಸುಂದರಿ ರುಕ್ಮಿಣಿ ಮನುವಿಗೆ ಜೋಡಿಯಾಗುವ “ಪ್ರಿಯಾ”ಆಗಲಿದ್ದಾರೆ..
ಸಪ್ತ ಸಾಗರದಾಚೆ ಇರುವ ನೀರೆ ಈಕೆನಾ?? ಅಥವಾ ಇನ್ಯಾರಾದರೂನಾ!!