ರಾಜ್ ಬಿರಿಯಾನಿ ಪ್ಯಾಲೆಸ್ ಶಿವಣ್ಣ ರಿಂದ ಉದ್ಘಾಟನೆ

ಲ್ಲಾ ಬರೀ ಕಾಸ್ಗೆಯಾ.. ಅರೇ ಇದೇನಪ್ಪ ಈ ರೀತಿ ಹೇಳ್ತಿದಾರೆ ಅಂದ್ಕೊಂಡ್ರ ನಾನಲ್ಲಪ್ಪ ಹೇಳಿದ್ದು ಯಾರ್ ಹೇಳಿದ್ರು ಅಂತ ಆಮೇಲೆ ಹೇಳ್ತೀನಿ…


ಕಿರುತೆರೆ (ಲಕ್ಷ್ಮಿ ಬಾರಮ್ಮ, ರಾಧಾ ಕಲ್ಯಾಣ) ಹಾಗೂ ಬೆಳ್ಳಿ ತೆರೆ (ಪ್ರೇಮ ಬರಹ,.ಲವ್ ಯೂ ಆಲಿಯಾ) ಚಿತ್ರದ ನಾಯಕ ನಟ ಬಿಗ್ ಬಾಸ್ ಸೀಸನ್ ಒನ್ ಸ್ಪಧಿ೯ ಶ್ರೀ ಚಂದನ್ ಕುಮಾರ್ ರವರು ನೂತನವಾಗಿ ಆರಂಭಿಸಿರುವ ‘ರಾಜ್ ಬಿರಿಯಾನಿ ಪ್ಯಾಲೇಸ್ ” ಬೆಂಗಳೂರಿನ ಸಹಕಾರ ನಗರದಲ್ಲಿ, ಕಳೆದ ಭಾನುವಾರ ಉದ್ಘಾಟನೆ ಮಾಡಿದವರು ಯಾರು ಹೇಳಿ ನೋಡೋಣ ನಮ್ಮ ಕರುನಾಡ ಚಕ್ರವರ್ತಿ “ಡಾ ಶಿವರಾಜ್ ಕುಮಾರ್ ” ರವರು ಅವರ ಜೊತೆಗೆ ಕನ್ನಡ ಚಿತ್ರನಟಿ ಹೆಂಗಳೆಯರ ಫೇವರೆಟ್ ಶೃತಿ ಮತ್ತು ಅವರ ಮಗಳು.

ಶಿವಣ್ಣ ಉಧ್ಘಾಟಿಸಿ ಶುಭ ಕೋರಿದರು, ಬಿರಿಯಾನಿ ಟೇಸ್ಟ್ ಕೂಡ ಮಾಡಿದ್ರು ಮುಂದೆ ಶುರುವಾಯ್ತು ನೋಡಿ ಈ ಮೀಡಿಯಾದವರಿಗೆ ಎಲ್ಲಿ ಹೋದರೂ ಬಂದರೂ ಇನ್ನೊಬ್ಬರ ಕಾಲೆಳೆದು ಅಭ್ಯಾಸ ಅವರಿಗೆ ಶಿವಣ್ಣ ಕೊಟ್ರು ಖಡಕ್ ಡೈಲಾಗ್ ಏನಂತೀರಾ.. ಮೀಡಿಯಾ ಪ್ರಶ್ನೆ ಬಿರಿಯಾನಿ ಹೇಗಿತ್ತು ಶಿವಣ್ಣ ನನಗೆ ಬಿರಿಯಾನಿ ತುಂಬಾ ಇಷ್ಟ, ಮೀಡಿಯಾ ಮಾತು “ಫಿಲಂ ಸ್ಟಾರ್ಸ್ ಇವಾಗ ಸೈಡಲ್ಲಿ ಈ ಥರ ಮಾಡಿ ದುಡ್ಡು ಮಾಡ್ತಾರೆ ಅಂತ ಅದುಕ್ಕೆ ಶಿವಣ್ಣ ಹೇಳಿದ ಮಾತು ಯಾಕ್ ಆ ರೀತಿ ಯೋಚನೆ ಮಾಡೋದು ತಪ್ಪು ಅದು ಈ ಕೋವಿಡ್ ಟೈಂನಲ್ಲಿ ಒಳ್ಳೆ ಊಟ ಕೊಡ್ತಿದಾರೆ ಅದುಕ್ಕೆ ಖುಷಿ ಪಡಿ ಯಾಕ್ ಮೀಡಾಯದವ್ರು ಬರೀ ಕಾಸ್ಗೆನಾ ಅದುನ್ ಬಿಟ್ರೆ ಒಳ್ಳೆ ಉದ್ದೇಶ ಇಲ್ವ ಮತ್ತೆ ಮೀಡಿಯಾದವರು ಫಿಲಂ ಇಂಡಸ್ಟ್ರಿ ನವರು ಹೀಗ್ ಮಾಡ್ತಾರೆ ಅಂದಾಗ ಶಿವಣ್ಣ ನಮ್ಮನ್ನು ಬೆಳೆಸಿದ್ದು ಜನರು, ಜನರಿಗೋಸ್ಕರ ನಾವು, ನಾವು ಅವರಿಗೆ ಒಳ್ಳೆ ಮನರಂಜನೆ ಕೊಡ್ತೀವಿ. ಅಂತೂ ಮೀಡಿಯಾ ದವರಿಗೆ ಬೆವರಿಳಿಸಿದ್ದು ನಿಜ.

ಇಲ್ಲಿ ಮತ್ತೊಂದು ವಿಷಯ ಭಾನುವಾರ ಪಾವ೯ತಮ್ಮ ರಾಜ್ ಕುಮಾರ್ ರವರ ಜನುಮ ದಿನ ಆ ಒಳ್ಳೆ ದಿನ ಉದ್ಘಾಟನೆ ಮಾಡಿರೋದು ಮತ್ತು ಶುಭ ಕೋರಿರೋದು ಗಮನಿಸಬೇಕಾದ ಅಂಶ ಹಾಗೂ ಚಂದನ್ ರವರು ಚಿತ್ರರಂಗಕ್ಕೆ ಬಂದು ಹತ್ತು ವಷ೯ಗಳು, ಒಳ್ಳೆಯ ನಟ ಇನ್ನೂ ಹೆಚ್ಚಿನ ಚಿತ್ರಗಳು ಇವರನ್ನು ಹರಸಿ ಬರಲಿ ಚಿತ್ರರಂಗದಲ್ಲಿ ಹೆಸರು ಮಾಡಲಿ .


ಡಿಯರ್ ಫ್ರೆಂಡ್ಸ್ ನೀವೇನಾದ್ರೂ ಸಹಕಾರ ನಗರಕ್ಕೆ ಹೋದ್ರೆ “ರಾಜ್ ಬಿರಿಯಾನಿ ಪ್ಯಾಲೇಸ್ “ಗೆ ಹೋಗಿ ಬಿರಿಯಾನಿ ತಿಂದು ಟೇಸ್ಟ್ ಹೇಗಿದೆ ಅಂತ ಹೇಳೋದ್ ಮರಿಬೇಡಿ…

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply