ರಿಯಲ್ ಸ್ಟಂಟ್ ಮಾಸ್ಟರ್ ನಟ ಜಾಕಿಚಾನ್

( ಮುಂದುವರೆದ ಭಾಗ )

ನಿರ್ಮಾಪಕ ವಿಲ್ಲಿ ಚಾನ್ ಕಂಪನಿಯನ್ನು ಬಿಟ್ಟಾಗ ಲೋವಿಯೊಂದಿಗೆ ಇರಬೇಕೊ ಬೇಡವೋ ಎಂಬ ಗೊಂದಲ ಎದುರಾಯಿತು. ಸ್ವತ ನಿರ್ಧರಿಸಿದ ಚಾನ್ ಫಿಯರಲೆಸ್ ಹೈಯನಾ ಭಾಗ ೨ ರ ಚಿತ್ರೀಕರಣ ಸಮಯದಲ್ಲಿ ತನ್ನ ಒಪ್ಪಂದವನ್ನು ರದ್ದು ಮಾಡಿ ಗೋಲ್ಡನ್ ಹಾರ್ವೆಸ್ಟ್  ಸಂಸ್ಥೆ ಸೇರಿದರು. ಅಲ್ಲಿ ಕಿನ್ನಿತ್ ತ್ಸಾಂಗ್ ಎಂಬ ನಿರ್ದೇಶಕನ ಜೊತೆ ಸೇರಿ ದಿ ಫಿಯರ್ ಲೆಸ್ ಹೈಯಾನಾ ಚಿತ್ರದ ಸಹ ನಿರ್ದೇಶಕನಾಗಿ ಕೆಲಸ ನಿರ್ವಹಿಸಿದರು. ಇತ್ತ ಕಡೆ ಕೆರಳಿದ ಗ್ರೇಟ್ ಅರ್ಥ್ ಫಿಲಂ ಕಂಪನಿಯ ಮಾಲೀಕ ಚುಮು ತನ್ನ ತಾರೆ ಬಿಟ್ಟು ಹೋಗಲು ಕಾರಣವಾದ ವಿಲ್ಲಿ ಚಾನ್ ನನ್ನು ದ್ವೇಷಿಸತೊಡಗಿದರು. ಅಲ್ಲದೇ ಜಾಕಿಚಾನ್ ಗೆ ಗೂಂಡಾಗಳ ಮುಖಾಂತರ ಬೆದರಿಕೆಯನ್ನು ಹಾಕಿಸಿದ್ದರು.

 ಈ ಘಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಾಗಲೇ ನಟ ಮತ್ತು ನಿರ್ದೇಶಕ ಜಿಮ್ಮಿ ವ್ಯಾಂಗ್ ಯು ಮಧ್ಯಸ್ಥಿಕೆ ವಹಿಸಿ ವಿವಾದವನ್ನು ಪರಿಹರಿಸಿದರು. ನಂತರ ಜಾಕಿ ಚಾನ್ ಗೋಲ್ಡನ್ ಹಾರ್ವೆಸ್ಟ್ ಸಂಸ್ಥೆಯೊಂದಿಗೆ ಮುಂದುವರೆಯಲು ಅನುಕೂಲವಾಯಿತು. ನಿರ್ಮಾಪಕ ವಿಲ್ಲಿ ಚಾನ್  ಜಾಕಿಚಾನ್ ಆಪ್ತ ಸ್ನೇಹಿತ ಮತ್ತು ವೈಯಕ್ತಿಕ ವ್ಯವಸ್ಥಾಪಕರು ಆಗಿದ್ದಾರೆ. ಅಲ್ಲದೇ ಜಾಕಿ ಚಾನ್ ಅಂತಾರಾಷ್ಟ್ರೀಯ ವೃತ್ತಿ ಜೀವನದ ಆರಂಭದ ಸಮಯದಲ್ಲಿ ಇವರ ಪಾತ್ರ ಪ್ರಮುಖವಾಗಿದೆ.

ಆರಂಭದ ನಾಲ್ಕು ವರ್ಷಗಳಲ್ಲಿ ಜನಪ್ರಿಯ ನಟರಾದ ಜಾಕಿ ಚಾನ್ ೧೯೮೦ ರಲ್ಲಿ ಅಮೇರಿಕ ಚಿತ್ರೋದ್ಯಮದಲ್ಲಿ  ಮೊದಲ ಬಾರಿಗೆ ನುಗ್ಗುವಿಕೆ ತಂತ್ರವನ್ನು ಬ್ಯಾಟಲ್ ಕ್ರೀಕ್ ಬಾಲ್ ಎಂಬ ತಮ್ಮ ಪ್ರಥಮ ಹಾಲಿವುಡ್ ಚಿತ್ರದಲ್ಲಿ ಪ್ರಯೋಗಿಸಿ ಯಶಸ್ವಿಯಾದರು. ನಂತರ ೧೯೮೧ ರಲ್ಲಿ ಬಂದ ದಿ.ಕೆನಸ್ ಬಾಲ್ ರನ್ ಎಂಬ ಚಿತ್ರದಲ್ಲಿ ಕಿರು ಪಾತ್ರ ನಿರ್ವಹಿಸಿದ ಚಾನ್ ನ ಈ ಚಿತ್ರವು ವಿಶ್ವಾದ್ಯಂತ ೧೦೦ ದಶಲಕ್ಷ ಡಾಲರ್ ಹಣವನ್ನು ಸಂಗ್ರಹಿಸಿತು.

ಚಿತ್ರ ರಂಗದಲ್ಲಿ ಪ್ರವೇಶಿಸಿ ಎಂಟು ವರ್ಷಗಳ ನಂತರ ೧೯೮೨ ರಲ್ಲಿ ಲಿನ್ – ಫಿಂಗ್- ಜಿಯೋವೋ ಎಂಬ ತೈವಾನ್ ಚಿತ್ರ ನಟಿಯನ್ನು ವಿವಾಹವಾದರು. ಅದೇ ವರ್ಷದಲ್ಲಿ ಇವರಿಗೆ ಒಬ್ಬ ಮಗನು ಕೂಡ ಜನಿಸಿದನು. ಅವನ ಹೆಸರು ಚೇಸಿ ಚಾನ್ ನಟ ಮತ್ತು ಗಾಯಕ ಕೂಡ. ಜಾಕಿ ಚಾನ್ ನಟ ಮಾತ್ರ ವಲ್ಲ ಗಾಯಕ ಕೂಡ ಆಗಿದ್ದಾರೆ. ೧೯೮೦ ರ ದಶಕದ ವೃತ್ತಿಯ ಸ‌ಮಯದಲ್ಲಿ ಹಾಂಕಾಂಗ್ ಮತ್ತು ಏಷ್ಯಾ ಖಂಡದಲ್ಲಿ ಜನಪ್ರಿಯ ಗಾಯಕರಾಗಿ ಪ್ರಸಿದ್ಧಿ ಪಡೆದಿದ್ದು ಇದುವರೆಗೂ ೨೦ ಸಂಗೀತದ ಆಲ್ಬಂ ಗಳನ್ನು ಬಿಡುಗಡೆ ಮಾಡಿದ್ದಾರೆ.

೧೯೮೫ ರಲ್ಲಿ ಬಿಡುಗಡೆಯಾದ ದಿ.ಪ್ರೊಟೆಕ್ಟರ್ ಚಿತ್ರ ಹಣಗಳಿಕೆ ಯಲ್ಲಿ ಯಶಸ್ಸನ್ನು ಪಡೆಯಲಿಲ್ಲ. ಅನಂತರ ಯು.ಎಸ್. ಚಿತ್ರ ರಂಗ ಪ್ರವೇಶಿಸುವ ಆಲೋಚನೆ ಬಿಟ್ಟು ಹಾಂಕಾಂಗ್ ಚಿತ್ರೋದ್ಯಮದ ಕಡೆ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ಹಾಂಕಾಂಗ್ ಚಿತ್ರೋದ್ಯಮಕ್ಕೆ ಮರಳಿದ ನಂತರ ಇವರು ನಟಿಸಿದ ಚಿತ್ರಗಳು ಪೂರ್ವ ಏಷ್ಯಾದಲ್ಲಿ ಭರ್ಜರಿ ಯಶಸ್ಸು ಗಳಿಸಿದವು. ೧೯೮೦ ಮತ್ತು ೮೨ ರಲ್ಲಿ ನಟಿಸಿದ ದಿ ಯಂಗ್ ಮಾಸ್ಟರ್ ಮತ್ತು ಡ್ರ್ಯಾಗನ್ ಲಾರ್ಡ್ ಜಪಾನ್ ಚಿತ್ರರಂಗದಲ್ಲಿ ಜಪಾನ್ ಭಾಷೆಯಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಗಳಿಸಿದವು. ಇಲ್ಲಿಯವರೆಗೂ ಚೀನಾ ಚಿತ್ರ ರಂಗದಲ್ಲಿ ನಟ ಬ್ರೂಸ್ಲಿ ಅಭಿನಯದ ಚಿತ್ರಗಳ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಿರಲಿಲ್ಲ.

ಆದರೆ ೧೯೮೨ ರಲ್ಲಿ ಬಿಡುಗಡೆಯಾದ ಜಾಕಿ ಚಾನ್ ನಟನೆಯ ಹೊಸ ಚಿತ್ರ ದಿ ಯಂಗ್ ಮಾಸ್ಟರ್ ಪ್ರಥಮ ಬಾರಿಗೆ ನಟ ಬ್ರೂಸ್ಲಿ ಅಭಿನಯದ ಚಿತ್ರಗಳ ದಾಖಲೆಯನ್ನು ಮುರಿಯುತ್ತ ಬಂದಿತು. ನಂತರ ಜಾಕಿ ಚಾನ್ ಹಾಂಕಾಂಗ್ ನಲ್ಲಿ ಉನ್ನತ ತಾರೆಯಾಗಿ ಪ್ರಕಾಶಿಸಿದರು. ಅಪೇರಾ ಶಾಲೆಯ ತನ್ನ ಸ್ನೇಹಿತರಾದ ಸ್ಯಾಮೋಹಂಗ್ ಮತ್ತು ಮಯೇನ್ ಬಂಗ್ ಜೊತೆ ಸೇರಿ ಅನೇಕ ಹಾಸ್ಯ ಭರಿತ ಸಾಹಸ ಪ್ರಧಾನ ಚಿತ್ರಗಳನ್ನು ನಿರ್ಮಿಸಿದ್ದರು.

೧೯೮೩ ರಲ್ಲಿ ಬಂದ ಪ್ರೊಜೆಕ್ಟ್ ಎ ಚಿತ್ರದಲ್ಲಿ ಈ ಮೂರು ಸ್ನೇಹಿತರು ಒಟ್ಟಾಗಿ ನಟಿಸಿದ್ದರು.ಮೂರನೇ ವಾರ್ಷಿಕ ಹಾಂಕಾಂಗ್ ಚಿತ್ರೋತ್ಸವದಲ್ಲಿ ಈ ಚಿತ್ರ ಉತ್ತಮ ಸಾಹಸ ಪ್ರಧಾನ ಚಿತ್ರ ಪ್ರಶಸ್ತಿ ಪಡೆಯಿತು. ಟ್ವಟಳಞ ನ ಉಳಿದ ಚಿತ್ರಗಳಿಗಿಂತಲೂ ಝಝ ೩೫ ದಶ ಲಕ್ಷ ಡಾಲರ್ ಹಣವನ್ನು ಸಂಗ್ರಹಿಸಿತು. ಇವರು ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ  ತಮ್ಮ ಜನರಿಗಾಗಿ ೧೯೮೮ ರಲ್ಲಿ ಜಾಕಿ ಚಾನ್ ಚಾರಿಟೇಬಲ್ ಫೌಂಡೇಶನ್ ಸ್ಥಾಪಿಸಿದರು. ಇದರ ಪ್ರಮುಖ ಉದ್ದೇಶ ಹಾಂಕಾಂಗ್ ನ ಯುವ ಪೀಳಿಗೆಗೆ ವಿದ್ಯಾರ್ಥಿ ವೇತನ ಮತ್ತು ಆರ್ಥಿಕ ರೀತಿಯ ಎಲ್ಲ ನೆರವನ್ನೂ ನೀಡುತ್ತ ಬಂದಿದೆ.

ಇವರ ಹಲವಾರು ಯೋಜನೆಗಳಿಗೆ ಹಾಂಕಾಂಗ್ ನ ಬಹಳಷ್ಟು ಜನ ಇಂದಿಗೂ ಫಲಾನುಭವಿಗಳಾಗಿದ್ದಾರೆ. ತಮ್ಮ ಚಿತ್ರಗಳಿಗೆ ಸ್ವತಃ ಸಾಹಸ ಸಂಯೋಜಿಸುವ ಇವರು ತಮ್ಮ ಹಲವು ಚಿತ್ರಗಳಲ್ಲಿ ಹೆಚ್ಚು ಅಪಾಯಕಾರಿ ಸಾಹಸ ಸಂಯೋಜನೆಯನ್ನು ಮಾಡಿದ್ದಾರೆ. ಇದಕ್ಕಾಗಿ ೧೯೮೩ ರಲ್ಲಿ ಒಂದು ತಂಡವನ್ನು ಕೂಡ ಕಟ್ಟಿದ್ದಾರೆ. ತಮ್ಮ ತಂಡದ ಪ್ರತಿಯೊಬ್ಬ ಸದಸ್ಯನ ಸಾಮರ್ಥ್ಯದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ಜಾಕಿ ಚಾನ್ ತನ್ನ ಚಿತ್ರಗಳಲ್ಲಿ ಇತರೆ ಪಾತ್ರಗಳಿಂದ ಮಾಡಿಸುವ ಅನೇಕ ಸಾಹಸ ಪ್ರದರ್ಶನಗಳನ್ನು ಇವರ ತಂಡವೇ ನಿರ್ವಹಿಸುತ್ತದೆ. ಆದರೆ ಇವರ ಮುಖವನ್ನು ಅಸ್ಪಷ್ಟವಾಗಿ ಕಾಣುವ ರೀತಿಯಲ್ಲಿ ಚಿತ್ರೀಕರಿಸುತ್ತಾರೆ. ಇವರು ಸಂಯೋಜಿಸುವ ಅಪಾಯಕಾರಿ ಸಾಹಸಗಳಿಂದ ಇವರಿಗೆ ವಿಮೆ ಯೋಜನೆ ಸಿಗುವುದು ಕಷ್ಟವಾಗಿತ್ತು.

ಅದರಲ್ಲೂ ಇವರು ಸಂಯೋಜಿಸುವ ಅಪಾಯಕಾರಿ ಸಾಹಸಗಳಿಂದಲೇ ಇವರ ಹೆಸರು ಗಿನ್ನಿಸ್ ಬುಕ್ ನಲ್ಲಿ ದಾಖಲಾಗಿದೆ. ಸ್ವತಃ ತಮ್ಮ ಚಿತ್ರಗಳಿಗೆ ಇವರೇ ಸಾಹಸ ಸಂಯೋಜನೆ ಮಾಡುತ್ತಿದ್ದರಿಂದ ಇವರ ನಿರ್ಮಾಣದ ಚಿತ್ರಗಳಿಗೆ ಯಾವ ವಿಮೆ ಕಂಪನಿಗಳು ಇವರಿಗೆ ವಿಮೆ ಮಾಡಿ ಕೊಡುವ ಧೈರ್ಯ ಮಾಡಿಲ್ಲವೆಂದರೆ ಇವರ ಸಾಹಸ ಸಂಯೋಜನೆ ಎಷ್ಟು ಅಪಾಯಕಾರಿ ಎಂಬುದು ನಿಮಗೆ ತಿಳಿಯುತ್ತದೆ.

 ೧೯೯೦ ರ ದಶಕದ ಆರಂಭದಲ್ಲಿ ಪೋಲಿಸ್ ಸ್ಟೋರಿಯ ಮುಂದುವರಿದ ಭಾಗವಾಗಿ ಪೋಲಿಸ್ ಸ್ಟೋರಿ ೨ ಚಿತ್ರ ಕೂಡ ಬಿಡುಗಡೆ ನಂತರ ಭರ್ಜರಿ ಯಶಸ್ಸು ಕಂಡಿತ್ತು. ಈ ಚಿತ್ರದ ನಂತರ ಆರ್ಮರ್ ಆಫ್ ಗಾಡ್ ೨, ಆಪರೇಷನ್ ಕೊಂಡರ್ ಮತ್ತು ಪೋಲಿಸ್ ಸ್ಟೋರಿ ೩ ಚಿತ್ರ ಕೂಡ ಬಿಡುಗಡೆ ನಂತರ ಭರ್ಜರಿ ಯಶಸ್ಸು ಗಳಿಸಿದವು. ಈ ಚಿತ್ರದಲ್ಲಿನ ನಟನೆಗಾಗಿ ೧೯೯೩ ರ ಗೋಲ್ಡನ್ ಹಾರ್ಸ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು.

೧೯೯೪ ರಲ್ಲಿ ಡ್ರಂಕನ್ ಮಾಸ್ಟರ್ ೨ ಚಿತ್ರದಲ್ಲಿ ವೋಂಗ್ ಫೀ ಹಂಗ್ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರ ಟೈಂ ಮ್ಯಾಗ್ ಜೀನ್ ನ ಸಾರ್ವಕಾಲಿಕ ೧೦೦ ಚಿತ್ರಗಳಲ್ಲಿ  ಸ್ಥಾನವನ್ನು ಪಡೆದಿದೆ. ಮತ್ತು ಉತ್ತರ ಭಾಗದ ಕೃತಿಯಾದ ಪೋಲಿಸ್ ಸ್ಟೋರಿ ೪ ಚಿತ್ರ ಬಿಡುಗಡೆ ನಂತರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡಿತ್ತು. ಆದರೆ  ಇವರು ಕೆಲವು ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡುವ ಸಮಯದಲ್ಲಿ ಹಲವಾರು ಬಾರಿ ಗಾಯಗೊಂಡಿದ್ದಾರೆ. ಇದೇ ರೀತಿ ಒಂದು ಸಲ ಆರ್ಮರ್ ಆಫ್ ಗಾಡ್ ಚಿತ್ರೀಕರಣ ಸಮಯದಲ್ಲಿ ಮರದಿಂದ ಕೆಳಗೆ ಬಿದ್ದ ಪರಿಣಾಮವಾಗಿ ತಲೆಗೆ ತೀವ್ರ ಗಾಯಗಳಾಗಿದ್ದವು. ಈ ಹಂತದಲ್ಲಿ ಬದುಕುವುದು ಅನುಮಾನವಾಗಿತ್ತು. ಆದರೆ ಅದೃಷ್ಟವಶಾತ್ ಬದುಕುಳಿದರು. ಆದರೂ ವರ್ಷಗಳು ಉರುಳಿದಂತೆ ಹಲವು ಚಿತ್ರಗಳ ಚಿತ್ರೀಕರಣ ಸಮಯದಲ್ಲಿ ತಮ್ಮ ದೇಹದ ಭಾಗದ ಮೂಳೆಗಳನ್ನು ಲೆಕ್ಕ ವಿಲ್ಲದಷ್ಟು ಬಾರಿ ಮುರಿದುಕೊಂಡಿದ್ದಾರೆ. ಈಗಲೂ ಇವರ ದೇಹದಲ್ಲಿ ಮೂಳೆಗಳಿಗಿಂತ ರಾಡ್ ಗಳೇ ಹೆಚ್ಚು ಇವೆ.

 ೧೯೯೫ ರಲ್ಲಿ ಇವರದೇ ಅಭಿನಯದ ರಂಬಲ್ ಇಂದ ಬ್ರ್ಯಾಂಕ್ಸ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗುವುದು ರೊಂದಿಗೆ ಉತ್ತರ ಅಮೇರಿಕ ಮಾರುಕಟ್ಟೆಯಲ್ಲಿ ತಮ್ಮದೇ ಆದ ಒಂದು ಇಮೇಜ್ ಗಳಿಸಿದ್ದರು. ಹಾಂಕಾಂಗ್ ಚಿತ್ರ ತಾರೆಯರಿಗೆ ಅಪರೂಪವಾಗಿದ್ದ ಆರಾಧಿಸುವ ಅಭಿಮಾನಿಗಳ ಒಂದು ಸಂಚಲನೆಯನ್ನು ಅಮೇರಿಕ ಚಿತ್ರ ರಂಗದಲ್ಲಿ ಸೃಷ್ಟಿಸುವಲ್ಲಿ ಈ ಚಿತ್ರ ಯಶಸ್ವಿಯಾಯಿತು. ರಂಬಲ್ ಇಂದ ಬ್ರ್ಯಾಂಕ್ಸ ಚಿತ್ರದ ಯಶಸ್ಸಿನ ನಂತರ ಸೂಪರ್ ಕಾಫ್ ಶೀರ್ಷಿಕೆಯಲ್ಲಿ ಪೋಲಿಸ್ ಸ್ಟೋರಿ ೩ ಚಿತ್ರವು ೧೯೯೬ ರಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಬಿಡುಗಡೆಗೊಂಡು ೨೭೦,೬೦೦ ಯು.ಎಸ್ ಡಾಲರ್ ಹಣವನ್ನು ಸಂಗ್ರಹಿಸಿತು. 

 ೧೯೯೮ ರಲ್ಲಿ ನಟ ಜಾಕಿ ಚಾನ್ ಹಾಲಿವುಡ್ ನಟ ರೇಸ್ ಬರ್ಕರ್ ಜೊತೆ ನಟಿಸಿದ ಹಾಸ್ಯ ಭರಿತ ಸಾಹಸ ಪ್ರಧಾನ ಚಿತ್ರ ರಶ್ ಹವರ್ ಚಿತ್ರದಿಂದ ಮೊದಲ ಬಾರಿಗೆ ದೊಡ್ಡ ಮಟ್ಟದ ಯಶಸ್ಸು ಕಂಡರು. ಇದೇ ಚಿತ್ರವು ಅಮೇರಿಕ ಸಂಯುಕ್ತ ಸಂಸ್ಥಾನಗಳಲ್ಲಿ ೧೩೦ ದಶ ಲಕ್ಷ ಡಾಲರ್ ಹಣವನ್ನು ಗಳಿಸಿತು. ಮತ್ತು ಹಾಲಿವುಡ್ ನಲ್ಲಿ ಪ್ರಮುಖ ತಾರೆಯಾಗಿ ಪ್ರಕಾಶಿಸಿದರು. ಇದೇ ವರ್ಷ ೧೯೯೮ ರಲ್ಲಿ ಗೋಲ್ಡನ್ ಹಾರ್ವೆಸ್ಟ್ ಸಂಸ್ಥೆಯಲ್ಲಿ ಹೂ ಆಮ್ ಆಯ್? ಎಂಬ ಕೊನೆಯ ಚಿತ್ರವನ್ನು ಬಿಡುಗಡೆ ಮಾಡಿದ್ದರು.

೧೯೯೯ ರಲ್ಲಿ ಗೋಲ್ಡನ್ ಹಾರ್ವೆಸ್ಟ್ ಸಂಸ್ಥೆ ತೊರೆದ ನಂತರ ಗಾರ್ಜಿಯಸ್ ಎಂಬ ಹಾಸ್ಯ ಭರಿತ ಚಿತ್ರ ನಿರ್ಮಾಣ ಮಾಡಿದರು. ಆದರೆ ಈ ಚಿತ್ರದಲ್ಲಿ ಪಾತ್ರಗಳು ವೈಯಕ್ತಿಕ ಸಂಬಂಧಗಳ ಕಡೆಗೆ ಹೆಚ್ಚು ಕೇಂದ್ರೀಕೃತವಾಗಿದ್ದವು. ಚಿತ್ರ ರಂಗದಲ್ಲಿ ಎಷ್ಟು ಬಿಡುವಿಲ್ಲದ ಕೆಲಸಗಳ ನಡುವೆಯೂ ಸದಾ ಹೊಸತನದ ಆಲೋಚನೆ ಮಾಡುತ್ತಲೇ ಇರುವ ಇವರು ೨೦೦೦ ನೇ ಇಸ್ವಿಯಲ್ಲಿ ತನ್ನ ಕುರಿತಾದ ಕಲ್ಪಿತ ಕಥೆ ಜಾಕಿ ಚಾನ್ ಅಡ್ವೆಂಚರ್ ಎಂಬ ಚಿತ್ರ ಸರಣಿಯನ್ನು ದೂರ ದರ್ಶನ ಕೇಂದ್ರದಲ್ಲಿ ಆರಂಭಿಸಿದರು.

( ಮುಂದುವರೆಯುವುದು )

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply